ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: 30 ನಿಮಿಷಗಳ ಅಂತರದಲ್ಲಿ ವೃದ್ಧೆಗೆ 2 ಬಾರಿ ಕೊರೊನಾ ಲಸಿಕೆ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 18: ವೃದ್ಧೆಯೊಬ್ಬರಿಗೆ ಕೇವಲ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆಯನ್ನು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.ದೇಶಾದ್ಯಂತ ಹಲವೆಡೆ ಇಂತಹ ಘಟನೆಗಳು ವರದಿಯಾಗಿವೆ, ಆದರೆ ಆರೋಗ್ಯ ಇಲಾಖೆ ತೀವ್ರ ಮುಜುಗರಕ್ಕೆ ಒಳಗಾಗಿದೆ.

ಈ ಘಟನೆ ಎರ್ನಾಕುಲಂನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆಯುವಾಗ 84ವರ್ಷದ ವೃದ್ಧೆ ತನ್ನ ಮಗನ ಜತೆ ಇದ್ದರು. ವೃದ್ಧೆ ಮಾತನಾಡಿ'' ನನಗೆ ಮೊದಲೇ ಕೊರೊನಾ ಲಸಿಕೆ ನೀಡಲಾಗಿತ್ತು, ನಾನು ಕೊಠಡಿಯಿಂದ ಹೊರಗೆ ಬರುವಾಗ ಪಾದರಕ್ಷೆಯನ್ನು ಅಲ್ಲಿಯೇ ಮರೆತಿದ್ದೆ, ತರುವುದಾಗಿ ಮಗನಿಗೆ ಹೇಳಿ ಒಳಗೆ ಹೋದೆ, ಇನ್ನೇನು ಚಪ್ಪಲಿಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ಅಲ್ಲಿರುವ ನರ್ಸ್ ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಒಳಗೆ ಬನ್ನಿ ಎಂದು ಹೇಳಿದರು, ಬಳಿಕ ಮತ್ತೆ ಲಸಿಕೆಯನ್ನು ಚುಚ್ಚಿದರು'' ಎಂದು ವಿವರಿಸಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡವರಿಗೆ ಕೋವಿಶೀಲ್ಡ್‌ ಲಸಿಕೆಯ 2 ಡೋಸ್ ಪರಿಣಾಮಕಾರಿಕೊರೊನಾದಿಂದ ಚೇತರಿಸಿಕೊಂಡವರಿಗೆ ಕೋವಿಶೀಲ್ಡ್‌ ಲಸಿಕೆಯ 2 ಡೋಸ್ ಪರಿಣಾಮಕಾರಿ

ಬಳಿಕ ವೃದ್ಧೆ ನರ್ಸ್ ಬಳಿ ತಾನು ಎರಡು ಬಾರಿ ಕೊರೊನಾ ಲಸಿಕೆ ಪಡೆದ ಬಗ್ಗೆ ಹೇಳಿದಾಗಲೂ ಆಕೆಯನ್ನು ಕೊಠಡಿಯಲ್ಲಿ ಒಂದು ಗಂಟೆಗಳ ಕಾಲ ಕೂರಲು ಹೇಳಿ ಬಳಿಕ ಕಳುಹಿಸಿದ್ದಾರೆ.

Kerala Woman Receives Both Doses Of Covid-19 Jab Just 30 Minutes Apart

ಮಂಗಳೂರಿನಲ್ಲೂ ಇಂತಹುದೇ ಘಟನೆ ನಡೆದಿತ್ತು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲೆಯ ಕಿಕ್ಕಿರಿದ ಲಸಿಕೆ ಶಿಬಿರದಲ್ಲಿ 19 ವರ್ಷದ ದಿನಗೂಲಿ ಕೆಲಸಗಾರನಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ.

ಒಟ್ಟಿಗೆ ಎರಡು ಡೋಸ್ ಲಸಿಕೆ ಪಡೆದ ಯುವಕನನ್ನು ಆರೋಗ್ಯ ಕೇಂದ್ರದಲ್ಲಿ ಮೂರು ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು. ನಂತರ ಮನೆಗೆ ಕಳುಹಿಸಲಾಯಿತು.

ಆರೋಗ್ಯ ಅಧಿಕಾರಿಗಳು ಬುಧವಾರದಿಂದ ಯುವಕನ ಮನೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ ಮತ್ತು ಗುರುವಾರ ತಡರಾತ್ರಿಯವರೆಗೆ ಯಾವುದೇ ಪ್ರತಿಕೂಲ ಪರಿಣಾಮ ವರದಿಯಾಗಿಲ್ಲ ಎಂದು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ ಬಿ ನಂದಕುಮಾರ್ ಅವರು ತಿಳಿಸಿದ್ದಾರೆ.

ತಾಲ್ಲೂಕಿನ ಕೂಟೇಲು ಮೂಲದ ಕೆಬಿ ಅರುಣ್ ಎಂಬ ದಿನಗೂಲಿ ಕೆಲಸಗಾರ ಬುಧವಾರ ಸುಳ್ಯ ತಾಲೂಕಿನ ದುಗ್ಗಲಕಡ ಪ್ರೌಢ ಶಾಲೆಯಲ್ಲಿ ಲಸಿಕೆ ಶಿಬಿರಕ್ಕೆ ಹೋಗಿದ್ದರು. ಅಲ್ಲಿ ಆರೋಗ್ಯ ಸಹಾಯಕರು ಅವರಿಗೆ ಮೊದಲ ಡೋಸ್ ಲಸಿಕೆಯನ್ನು ನೀಡಿದರು. ಸ್ವಲ್ಪ ಸಮಯ ಕೋಣೆಯಲ್ಲಿ ಕಾಯುತ್ತಿದ್ದ ಯುವಕನಿಗೆ ಈಗಾಗಲೇ ಲಸಿಕೆ ನೀಡಿದ್ದು ತಿಳಿಯದೆ ಅದೇ ಸಿಬ್ಬಂದಿ ಎರಡನೇ ಡೋಸ್ ನೀಡಿದ್ದಾರೆ.

ಲಸಿಕೆ ಹಾಕಿದ ನಂತರ ಯುವಕರು ಕೊಠಡಿಯನ್ನು ಬಿಡದ ಕಾರಣ ಗೊಂದಲ ಉಂಟಾಯಿತು ಎಂದು ಡಾ. ನಂದಕುಮಾರ್ ಹೇಳಿದರು.

ಯುವಕ ಪ್ರಯಾಣ ಮಾಡುವುದಕ್ಕೆ ಎರಡು ಡೋಸ್ ಲಸಿಕೆ ಅಗತ್ಯ ಎಂದು ಭಾವಿಸಿದ್ದರು. ಆದರೆ ಅವರು ಮಾಸ್ಕ್ ಧರಿಸಿದ್ದರಿಂದ ನರ್ಸ್ ಕೂಡ ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

English summary
In a major embarrassment for the medical fraternity, especially the state health department, an octogenarian lady in Kerala got both her doses of the Covid-19 vaccine within a gap of half an hour due to the blunder of an official.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X