ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಿಸುವಲ್ಲಿ ಕೇರಳ 'ದಿ ಬೆಸ್ಟ್'

|
Google Oneindia Kannada News

ತಿರುವನಂತಪುರಂ, ಸಪ್ಟೆಂಬರ್.25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಹಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಿದ ಕೇರಳ ಸರ್ಕಾರದ ಕಾರ್ಯ ಮೆಚ್ಚಿ ವಿಶ್ವಸಂಸ್ಥೆಯು ಪ್ರಶಸ್ತಿ ನೀಡಿದೆ.

ಕೇರಳದ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ನೀಡಿದ ದಣಿವರಿಯದ ಸೇವೆಗೆ ಮಾನ್ಯತೆ ಸಿಕ್ಕಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ರಾಜ್ಯದ ಸಾರ್ವಜನಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

4 ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ: ಒಂದು ಮಗು ವೆಂಟಿಲೇಟರ್‌ನಲ್ಲಿ..!4 ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತ ಮಹಿಳೆ: ಒಂದು ಮಗು ವೆಂಟಿಲೇಟರ್‌ನಲ್ಲಿ..!

ಎಲ್ಲ ಹಂತಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಅನುಕೂಲವಾಗುವಂತಾ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ತಿಳಿಸಿದ್ದಾರೆ.

 Kerala Wins UN Award For Prevention Control Of Non-Communicable Diseases

ಆರೋಗ್ಯ ಕಾರ್ಯಕರ್ತರಿಗೆ ಶುಭಾಷಯ:

ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತು ಈ ವರ್ಷ ವಿಶ್ವಸಂಸ್ಥೆಯ ಇಂಟರ್ಯಾಜೆನ್ಸಿ ಟಾಸ್ಕ್ ಫೋರ್ಸ್ (ಯುಎನ್‌ಐಎಟಿಎಫ್) ಪ್ರಶಸ್ತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಘೋಷಿಸಿದ್ದಾರೆ. 2019ರ ಸಾಲಿನಲ್ಲಿ ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. "ಇದಲ್ಲದೆ, ಅತ್ಯಾಧುನಿಕ ಶ್ವಾಸಕೋಶ ರೋಗ ನಿಯಂತ್ರಣ ಕಾರ್ಯಕ್ರಮ, ಕ್ಯಾನ್ಸರ್ ಚಿಕಿತ್ಸಾ ಕಾರ್ಯಕ್ರಮ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮ ಗಮನದಲ್ಲಿ ಇಟ್ಟುಕೊಂಡು ಪ್ರಶಸ್ತಿ ಘೋಷಿಸಲಾಗಿದೆ.

Recommended Video

MamataBanerjee ಕೊಟ್ರು ಭರ್ಜರಿ ಉಡುಗೊರೆ | Oneindia Kannada

ವಿಶ್ವಸಂಸ್ಥೆಯಿಂದ ವಾರ್ಷಿಕ ಪ್ರಶಸ್ತಿ ಪಡೆದ ಮೊದಲ ರಾಜ್ಯ ಎಂಬ ಹಿರಿಮೆಗೆ ಕೇರಳ ಪಾತ್ರವಾಗಿದೆ. ಕೇರಳದಲ್ಲಿ ಆರೋಗ್ಯ ಕಾರ್ಯಕರ್ತರು ನೀಡುತ್ತಿರುವ ದಣಿವರಿಯದ ಸೇವೆಯಿಂದ ಈ ಗುರಿ ಸಾಧಿಸಲು ಸಹಕಾರಿಯಾಗಿದ್ದು, ಎಲ್ಲ ಆರೋಗ್ಯ ಕಾರ್ಯಕರ್ತರಿಗೂ ಸಚಿವೆ ಕೆ.ಕೆ. ಶೈಲಜಾ ಅವರು ಧನ್ಯವಾದ ತಿಳಿಸಿದ್ದಾರೆ.

English summary
Kerala Govt Wins UN Award For Prevention Control Of Non-Communicable Diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X