ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಸರ್ಕಾರಿ ಅರ್ಜಿಗಳಲ್ಲಿ ತೃತೀಯ ಲಿಂಗದವರಿಗೆ ಪ್ರತ್ಯೇಕ ಆಯ್ಕೆ

|
Google Oneindia Kannada News

ತಿರುವನಂತಪುರಂ, ಜನವರಿ.19: ಕೇರಳದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಹಲವು ಇಲಾಖೆಗಳ ಅರ್ಜಿಗಳನ್ನು ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಚಿವೆ ಕೆ.ಕೆ. ಶೈಲಜಾ ಅವರು ತಿಳಿಸಿದ್ದಾರೆ.

ಸರ್ಕಾರಿ ಇಲಾಖೆಯ ಅರ್ಜಿಗಳಲ್ಲಿ ಪುರುಷ ಮತ್ತು ಮಹಿಳೆ ಜೊತೆಗೆ ತೃತೀಯ ಲಿಂಗಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಎಂಬ ಹೊಸ ಕಾಲಂನ್ನು ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ತೃತೀಯ ಲಿಂಗಿ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಮಗುವಿನ ಚಿಕಿತ್ಸೆಗೆ ಹಣ ಸಂಗ್ರಹ: ಮಂಗಳಮುಖಿಯರ ಮಾನವೀಯ ಮುಖಮಗುವಿನ ಚಿಕಿತ್ಸೆಗೆ ಹಣ ಸಂಗ್ರಹ: ಮಂಗಳಮುಖಿಯರ ಮಾನವೀಯ ಮುಖ

ಕೇರಳದಲ್ಲಿ ತೃತೀಯ ಲಿಂಗಿಗಳ ಕ್ಷೇಮಾಭಿವೃದ್ಧಿ ಉದ್ದೇಶದಿಂದ ಹೊಸ ನೀತಿಯನ್ನು ರೂಪಿಸಲು ಹೊರಟಿದೆ. ಸರ್ಕಾರದ ಅರ್ಜಿಗಳಲ್ಲಿ ಪುರುಷ / ಮಹಿಳೆ/ಟ್ರಾನ್ಸ್ ಜೆಂಡರ್ / ಟ್ರಾನ್ಸ್ ವುಮೆನ್ / ಟ್ರಾನ್ಸ್ ಮೆನ್/ ಎಂಬ ವಿಭಾಗಗಳನ್ನು ಮಾಡಲಾಗಿದೆ. ಹಿಂದುಳಿದ ಒಂದು ವರ್ಗವನ್ನು ಮುಂದಿನ ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

 Kerala: Transgender Option Included In All Govt Application Forms

ತೃತೀಯ ಲಿಂಗದ ಸಮುದಾಯಕ್ಕೆ ಅನುಕೂಲ:

ತೃತೀಯ ಲಿಂಗಿಯರ ಹಕ್ಕು ಮತ್ತು ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಸಮುದಾಯದಲ್ಲಿ ಗುರುತಿಸಿಕೊಂಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅರ್ಜಿಗಳಲ್ಲಿ ಬದಲಾವಣೆ ತರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

2014ರಲ್ಲಿ ತೃತೀಯ ಲಿಂಗಿಯರಿಗೆ ಸಂಬಂಧಿಸಿದ ಸುರಕ್ಷತಾ ಕಾಯ್ದೆಯನ್ನು ಕೇರಳದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗಿತ್ತು. ಕೇರಳ ರಾಜ್ಯ ಮಹಿಳಾ ಅಭಿವೃದ್ಧಿ ಸಹಕಾರದ ವತಿಯಿಂದ ತೃತೀಯ ಲಿಂಗ ಸಮುದಾಯದ ಜನರು ಸ್ವಯಂ ಉದ್ಯೋಗ ಆರಂಭಿಸುವುದಕ್ಕೆ 3 ರಿಂಗ 15 ಲಕ್ಷ ರೂಪಾಯಿವರೆಗೆ ಸಾಲಸೌಲಭ್ಯ ಒದಗಿಸುವುದಕ್ಕೆ ನಿರ್ಧರಿಸಿತ್ತು.

English summary
Kerala: Transgender Option Included In All Govt Application Forms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X