ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದ ಅಮೆರಿಕ ದಂಪತಿ ಪತ್ತೆ

|
Google Oneindia Kannada News

ತಿರುವನಂತಪುರಂ, ಮಾರ್ಚ್ 14:ಕೊರೊನಾ ಪರೀಕ್ಷೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದ ಅಮೆರಿಕದ ದಂಪತಿ ಕೊನೆಗೂ ಸಿಕ್ಕಿಬಿದ್ದಿದ್ದಾರೆ.ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಅಮೆರಿಕ ದಂಪತಿಗೆ ಕೊರೊನಾ ವೈರಸ್ ಇರುವ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಕೇರಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಅವರು ಓಡಿ ಹೋಗಿದ್ದರು. ಇದೀಗ ಶನಿವಾರ ಬೆಳಗ್ಗೆ ಅವರನ್ನು ಪತ್ತೆ ಮಾಡಲಾಗಿದೆ.

ಕೊರೊನಾ ವೈರಸ್: 4 ದಶಕಗಳ ಹಿಂದೆನೇ ನುಡಿದಿದ್ದ ಕರಾರುವಾಕ್ ಭವಿಷ್ಯಕೊರೊನಾ ವೈರಸ್: 4 ದಶಕಗಳ ಹಿಂದೆನೇ ನುಡಿದಿದ್ದ ಕರಾರುವಾಕ್ ಭವಿಷ್ಯ

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಸೆರೆ ಹಿಡಿಯಲಾಗಿದ್ದು,ತಪಾಸಣೆ ನಡೆಸಲಾಗುತ್ತಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

Who Skipped Coronavirus Test In Kerala Traces

ಕೇರಳದ ತಿರುವನಂತಪುರದಲ್ಲಿ ಇಟಲಿಯ ಪ್ರವಾಸಿಗರ ಪೈಕಿ ಮೂರು ಮಂದಿಯಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಒಟ್ಟು 19 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಯುಕೆಯಿಂದ ಬಂದವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.

'ನಾನು ವೈದ್ಯಕೀಯ ಕಾಲೇಜಿಗೆ ಕೊರೊನಾ ಪರೀಕ್ಷೆಗೆಂದು ತೆರಳಿದ್ದೆ, ಅಲ್ಲಿಂದ ಆಟೋದಲ್ಲಿ ಬಂದಿದ್ದೆ, ಜ್ಯೂಸ್ ಕೊಳ್ಳಲು ಒಂದು ಕಡೆ ನಿಂತಿದ್ದಷ್ಟೆ, ಅದನ್ನು ಹೊರತುಪಡಿಸಿ ಪೆಟ್ರೋಲ್ ಬಂಕ್ ಬಳಿ ಒಮ್ಮೆ ನಿಂತಿದ್ದೆ' ಎಂದು ಇಟಲಿಯಿಂದ ಕೇರಳಕ್ಕೆ ಬಂದಿದ್ದ ಕೊರೊನಾ ಸೋಂಕಿತ ವ್ಯಕ್ತಿ ತಿಳಿಸಿದ್ದಾರೆ.

English summary
American couple with symptoms linked to coronavirus, who went missing from a hospital in Kerala on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X