ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ಸೋಂಕಿಗೆ ಪ್ಲಾಸ್ಮಾ ಥೆರಪಿ

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 10: ಕೇರಳದಲ್ಲಿ ಕೊರೊನಾ ವೈರಸ್ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕಿನಿಂದ ಬಳಲುತ್ತಿರುವವರಿಗೆ ಪ್ಲಾಸ್ಮಾ ಥೆರಪಿ ನೀಡಲು ಐಸಿಎಂಆರ್ ಅನುಮತಿ ನೀಡಿದೆ.

ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತ ಅಥವಾ ಸೋಂಕಿನ ಸಂಭಾವ್ಯತೆ ಹೊಂದಿರುವ ವ್ಯಕ್ತಿಯ ರಕ್ತಕ್ಕೆ ಸೇರ್ಪಡೆ ಮಾಡಿದರೆ ಆತನಲ್ಲೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ.

Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!Video: ಗುಣಮುಖನಾದ ಕೊರೊನಾ ರೋಗಿಗೆ, ರೋಗಿಗಳಿಂದಲೇ ಬೀಳ್ಕೊಡುಗೆ!

ಇಂತಹ ಚಿಕಿತ್ಸೆಗೆ ಅನುಮತಿ ಪಡೆದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ಪ್ಲಾಸ್ಮಾ ಥೆರಪಿಯ ಪ್ರಾಯೋಗಿಕ ಪರೀಕ್ಷೆಗೆ ಅಮೆರಿಕದ ಆಹಾರ ಮತ್ತು ಔಷಧಿ ಪ್ರಾಧಿಕಾರ ಈಗಾಗಲೇ ಅನುಮೋದನೆ ನೀಡಿದೆ. ಜೊತೆಗೆ ಈ ಚಿಕಿತ್ಸೆ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ, ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಪ್ಲಾಸ್ಮಾ ಥೆರಪಿ ಎಂದರೇನು?

ಪ್ಲಾಸ್ಮಾ ಥೆರಪಿ ಎಂದರೇನು?

ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಅದನ್ನು ಕೊರೊನಾದಿಂದ ಬಳಲುತ್ತಿರುವ ರೋಗಿಯ ಅಥವಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಯ ದೇಹಕ್ಕೆ ಸೇರಿಸುವುದು. ಈ ಹಿಂದೆ 1918ರಲ್ಲಿ ಕಾಣಿಸಿಕೊಂಡಿದ್ದ ಫ್ಲೂ, ಎಬೋಲಾ, ಸಾರ್ಸ್ ಮೊದಲಾದ ಸಾಂಕ್ರಾಮಿಕ ಪಡಿಗಿನ ವೇಳೆಯಲ್ಲೂ ಈ ಪ್ಲಾಸ್ಮಾ ಥೆರಪಿ ಬಳಸಲಾಗಿತ್ತು. ಒಂದು ವೇಳೆ ಪ್ಲಾಸ್ಮಾ ಥೆರಪಿಗೆ ರೋಗಿ ಸೂಕ್ತವಾಗಿ ಸ್ಪಂದಿಸಿದರೆ ಆತ ಕೊರೊನಾದಿಂದ ಕೇವಲ 3-7 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

 ಪ್ಲಾಸ್ಮಾ ಥೆರಪಿ ಹೇಗೆ ಕಾರ್ಯ ನಿರ್ವಹಿಸುತ್ತೆ?

ಪ್ಲಾಸ್ಮಾ ಥೆರಪಿ ಹೇಗೆ ಕಾರ್ಯ ನಿರ್ವಹಿಸುತ್ತೆ?

ಕೊವಿಡ್ 19 ರೋಗದಿಂದ ಬಳಲುತ್ತಿರುವ ವ್ಯಕ್ತಿ ಚೇತರಿಸಿಕೊಂಡ ಬಳಿಕ ಆತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಇದು ಆತನಿಗೆ ಆ ಸೋಂಕಿನಿಂದ ಸುದೀರ್ಘ ಕಾಲ ಅಥವಾ ಅಲ್ಪಾವಧಿ ರಕ್ಷಣೆ ನೀಡಬಲ್ಲದಾಗಿರುತ್ತದೆ. ಅದೇ ರೀತಿ ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲೂ ಪ್ರತಿಜೀವಿಗಳು ಅಭಿವೃದ್ಧಿಗೊಂಡಿರುತ್ತವೆ. ಇವು ಪ್ಲಾಸ್ಮಾದಲ್ಲಿರುತ್ತದೆ. ಈ ಪ್ಲಾಸ್ಮಾಗಳು ಅಗತ್ಯ ಬಿದ್ದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತವೆ. ಈ ಪ್ಲಾಸ್ಮಾವನ್ನು ಕೊರೊನಾ ಸೋಂಕಿತರಿಗೆ ನೀಡಿದ ವೇಳೆ , ಅವು ಕೊರೊನಾ ಸೋಂಕನ್ನು ಗುರುತಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ.

ಕೊರೊನಾಗೆ ಇನ್ನೂ ಸೂಕ್ತ ಔಷಧ ಕಂಡು ಹಿಡಿದಿಲ್ಲ

ಕೊರೊನಾಗೆ ಇನ್ನೂ ಸೂಕ್ತ ಔಷಧ ಕಂಡು ಹಿಡಿದಿಲ್ಲ

ವಿಶ್ವದಾದ್ಯಂತ 90 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೊನಾ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲದ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಎಚ್‌ಐವಿ ಸೋಂಕಿತರಿಗೆ ನೀಡುವ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ವಿವಿಧ ರೀತಿಯ ಔಷಧಗಳನ್ನು ನೀಡಲಾಗುತ್ತಿದೆ.

ಪ್ಲಾಸ್ಮಾ ಥೆರಪಿಯಿಂದ ಲಾಭ ಯಾರಿಗೆ

ಪ್ಲಾಸ್ಮಾ ಥೆರಪಿಯಿಂದ ಲಾಭ ಯಾರಿಗೆ

ಗಂಭೀರ ಸ್ವರೂಪದಲ್ಲಿ ಬಳಲುತ್ತಿರುವವರಿಗೆ ಈ ಚಿಕಿತ್ಸೆ ಉತ್ತಮವಾದುದು, ಅಲ್ಲದೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ರೋಗಿಗಳಿಗೆ ನೆರವಾಗುತ್ತದೆ. ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯಿಂದ ಪಡೆದ ಪ್ಲಾಸ್ಮಾದಿಂದ ಇಬ್ಬರು ರೋಗಿಗಳಿಗೆ ನೀಡಬಹುದು. ಪ್ಲಾಸ್ಮಾ ಎಂದರೆ ರಕ್ತದಲ್ಲಿನ ಹಳದಿ ಬಣ್ಣದ ಒಂದು ದ್ರವೀಯ ಅಂಶ, ದೇಹದ ಎಲ್ಲಾ ಭಾಗಗಳಿಗೂ ಜೀವಕೋಶ ಮತ್ತು ಪ್ರೋಟಿನ್‌ಗಳನ್ನು ಕೊಂಡೊಯ್ಯುವ ಕೆಲಸವನ್ನು ಇದು ಮಾಡುತ್ತದೆ.

English summary
Kerala is set to become the first state in the country to commence convalescent plasma therapy, which uses antibodies from the blood of cured patients of COVID-19 cases on a trial basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X