ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಅಕ್ಟೋಬರ್‌ನಿಂದ 'ವಾಟರ್ ಟ್ಯಾಕ್ಸಿ' ಸೇವೆ ಆರಂಭ

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 16: ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 'ವಾಟರ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲಾಗುತ್ತಿದೆ.

ಅಕ್ಟೋಬರ್‌ನಿಂದ ಪರೀಕ್ಷಾರ್ಥವಾಗಿ 10 ವಾಟರ್‌ ಟ್ಯಾಕ್ಸಿಯನ್ನು ಆರಂಭಿಸಲಾಗುತ್ತಿದೆ. ಆಲಪ್ಪುಳ ಜಿಲ್ಲೆಯಲ್ಲಿರುವ ಹಿನ್ನೀರಿನಲ್ಲಿ ಈ ವಾಟರ್ ಟ್ಯಾಕ್ಸಿಗೆ ಚಾಲನೆ ದೊರೆಯಲಿದೆ.

ಕೇರಳದಲ್ಲಿ ಮೊದಲ ಕೊವಿಡ್ 19 ಆಸ್ಪತ್ರೆ ಉದ್ಘಾಟನೆಕೇರಳದಲ್ಲಿ ಮೊದಲ ಕೊವಿಡ್ 19 ಆಸ್ಪತ್ರೆ ಉದ್ಘಾಟನೆ

ರಾಜ್ಯದ ಪ್ರವಾಸಿಗರ ಮ್ಯಾಪ್‌ನಲ್ಲಿ ಈ ಸ್ಥಳವೂ ಇದೆ. ಸ್ಟೇಟ್ ವಾಟರ್ ಟ್ರಾನ್ಸ್‌ಪೋರ್ಟ್ ಬೋರ್ಡ್ ನಾಲ್ಕು ಬೋಟ್‌ಗಳಿಗೆ ಆರ್ಡರ್ ಮಾಡಿದೆ. ಕಳೆದ ವರ್ಷ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸಾರ್ವಜನಿಕ ಬಳಕೆಗೆ ವಾಟರ್ ಟ್ಯಾಕ್ಸಿಗಳನ್ನು ಖರೀದಿಸಲು ಮುಂದಾಗಿದೆ.

ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆಯೇ ಕಾರ್ಯ ನಿರ್ವಹಣೆ

ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆಯೇ ಕಾರ್ಯ ನಿರ್ವಹಣೆ

ರಸ್ತೆಗಳಲ್ಲಿಸ ಸಂಚರಿಸುವ ಟ್ಯಾಕ್ಸಿಗಳಂತೆಯೇ ಇದ್ದರೂ ಕೂಡ ನೀರಿನಲ್ಲಿ ಸಂಚರಿಸುವುದಾಗಿದೆ. ಸಾರ್ವಜನಿಕರ ಬಳಕೆಗಾಗಿ ಟ್ಯಾಕ್ಸಿ ಖರೀದಿಸಲಾಗುತ್ತಿದೆ. ನಿಗದಿತ ಸಂಖ್ಯೆಗೆ ಕರೆ ಮಾಡಿ ಬುಕ್ ಮಾಡಬಹುದಾಗಿದೆ. ಟ್ಯಾಕ್ಸಿಯು ಹೇಳಿದ ಸ್ಥಳಕ್ಕೆ ಆಗಮಿಸಿ ಪಿಕ್ ಮಾಡಲಿದೆ. ಬಳಿಕ ಮತ್ತೆ ನೀವು ಹೇಳಿದ ಜಾಗಕ್ಕೆ ಕರೆದೊಯ್ಯಲಿದೆ.

ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು

ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು

ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು, ಹಾಗೆಯೇ ಸಾಮಾನ್ಯ ಜನರು ಪಾವತಿಸಬಹುದಾದ ಬೆಲೆಯನ್ನೇ ಇರಿಸಲಾಗಿದೆ ಎಂದು ಎಸ್‌ಡಬ್ಲ್ಯೂಟಿಡಿ ನಿರ್ದೇಶಕ ತಿಳಿಸಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ

ಕಾರ್ಯ ನಿರ್ವಹಣೆ ಹೇಗೆ

ಇದು ಡೀಸೆಲ್‌ನಿಂದ ಚಲಿಸುತ್ತದೆ. 10 ಮಂದಿ ಕೂರುವಷ್ಟು ಸಾಮರ್ಥ್ಯವಿರಲಿದೆ. ಗಂಟೆಗೆ 15 ಕಿ.ಮೀ ಸಂಚರಿಸಬಲ್ಲದು. ಹೀಗಾಗಿ ಜನರನ್ನು ಬೇಗ ಬೇಗ ಅವರು ತಲುಪಬೇಕಾದ ಜಾಗವನ್ನು ತಲುಪಿಸಬಲ್ಲದು.

ಬೋಟ್ ಸ್ಟೇಷನ್‌ಗಳಿಗೆ ಸಂಪರ್ಕ

ಬೋಟ್ ಸ್ಟೇಷನ್‌ಗಳಿಗೆ ಸಂಪರ್ಕ

ಈ ವಾಟರ್ ಟ್ಯಾಕ್ಸಿಗಳು ಬೀಟ್‌ ಸ್ಟೇಷನ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿಂದ ಬೋಟ್‌ನಲ್ಲಿ ತೆರಳಬಹುದಾಗಿದೆ. ಬೋಟ್‌ಗಳನ್ನು ನವಗತಿ ಅಭಿವೃದ್ಧಿಪಡಿಸಿವೆ. ಕೊಚ್ಚಿ ಮೂಲದ ಫರ್ಮ್ ಇದಾಗಿದೆ. ಬೋಟ್‌ಗಳನ್ನು ಫೈಬರ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಗಂಟೆಗೆ 30 ಲೀಟರ್ ಇಂಧನವನ್ನು ಬಳಕೆ ಮಾಡಲಿದೆ.

English summary
Sailing in a new direction in the public water transport sector, Kerala is set to experiment with 10-seater water taxis, the first of which will be launched next month in the backwaters in Alappuzha district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X