• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಲಾಕ್ ಡೌನ್ ನಡುವೆ ಪ್ರವೇಶ ಪರೀಕ್ಷೆ; ಅಂತರ ಮರೆತ ವಿದ್ಯಾರ್ಥಿಗಳು

|

ತಿರುವನಂತಪುರಂ, ಜುಲೈ.17: ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬಾರಿ ಬಾರಿ ಹೇಳಿದರೂ ಕೇಂದ್ರ ಸರ್ಕಾರದ ಸೂಚನೆ ಬಗ್ಗೆ ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ.

   Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

   ಕೇರಳ ಸರ್ಕಾರವು ರಾಜ್ಯಾದ್ಯಂತ ಕೆಇಎಎಂ ಪ್ರವೇಶ ಪರೀಕ್ಷೆಯನ್ನು ನಡೆಸಿತು. ಈ ವೇಳೆ ಸಾಮಾಜಿಕ ಅಂತರವನ್ನು ಮರೆತು ಕಾಲೇಜ್ ಎದುರಿಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ನೆರೆದಿರುವುದು ಇದೀಗ ಸಖತ್ ಸುದ್ದಿಯಾಗಿದೆ.

   ಮಹಾರಾಷ್ಟ್ರ, ಕೇರಳ, ತಮಿಳುನಾಡು ಕೋವಿಡ್ ಕೇಸುಗಳ ವಿವರ

   ತಿರುವನಂತಪುರಂ ಪತ್ತೋಮ್ ನಲ್ಲಿ ಇರುವ ಕೇರಳ ಆರ್ಕಿಟೆಕ್ಟರ್ ಮೆಡಿಕಲ್(ಕೆಇಎಎಂ) ಕಾಲೇಜಿನ ಪರೀಕ್ಷಾ ಕೇಂದ್ರದ ಎದುರು ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿ ತೂರಿದ್ದರು.

   ಪ್ರವೇಶ ಪರೀಕ್ಷೆ ಮುಗಿಯುತ್ತಿದ್ದಂತೆ ಜನಜಾತ್ರೆ:

   ಕೇರಳದ ಪತ್ತೋಮ್ ನಲ್ಲಿ ಇರುವ ಸೇಂಟ್ ಮೇರಿಸ್ ಪ್ರೌಢಶಾಲೆ ಎದುರಿನಲ್ಲೂ ಪ್ರವೇಶ ಪರೀಕ್ಷೆ ಅಂತ್ಯವಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಜಾತ್ರೆಯೇ ಸೇರಿತ್ತು. ಈ ವೇಳೆ ಕೇಂದ್ರ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿಗಳನ್ನೆಲ್ಲ ಉಲ್ಲಂಘಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

   ಇನ್ನು, ತಿರುವನಂತಪುರಂ ನಗರದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಇದರ ನಡುವೆಯೂ ನಡೆಸಿದ ಕೆಇಎಎಂ ಪ್ರವೇಶ ಪರೀಕ್ಷೆಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಧಿಕಾರವು ತಿಳಿಸಿತ್ತು.

   English summary
   Kerala: Social Distancing Norms Violate By Students And Parents In Thiruvananthapuram.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X