ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ಕಚ್ಚಿಸಿ ಪತ್ನಿ ಹತ್ಯೆ ಕೇಸ್: ಎಲ್ಲರೆದುರು ತಪ್ಪೊಪ್ಪಿಕೊಂಡ ಪತಿ

|
Google Oneindia Kannada News

ಕೊಲ್ಲಂ, ಜುಲೈ 15: ಹೆಂಡಿತಿಗೆ ಹಾವು ಕಚ್ಚಿಸಿ ಕೊಲೆ ಮಾಡಿದ್ದು ತಾನೇ ಎಂದು ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಯನ್ನು ಕೊಂದು ಹಾವು ಕಚ್ಚಿ ಸತ್ತಳೆಂದು ಕಥೆ ಹೆಣೆದಿದ್ದ ಪತಿಯನ್ನು ಜೈಲಿಗಟ್ಟಿದ್ದರು. ಆತನ ಮೊದಲು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದ, ಇದೀಗ ಸಾರ್ವಜನಿಕವಾಗಿ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

ಅಡೂರ್ ಮೂಲದ ಸೂರಜ್ (27) ಎಂಬಾತ ಪತ್ನಿಯನ್ನು ಕೊಲ್ಲಲು ಹಾವುಗಳನ್ನು ಖರೀದಿಸಿದ್ದ. ಆಕೆ ಹಾವಿನ ಕಡಿತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ಹೇಳಿದ್ದರು.. ಸೂರಜ್ ತನ್ನ ಪತ್ನಿ ಉತ್ತರಾ (25) ರನ್ನು ಕೊಂದು ಅವಳ ಬಳಿಯಿದ್ದ ಚಿನ್ನದ ಒಡವೆಗಳನ್ನು ದೋಚಿ ಬಳಿಕ ಇನ್ನೊಬ್ಬಳನ್ನು ವಿವಾಹವಾಗಲು ಯೋಜಿಸಿದ್ದ ಎಂದು ಹೇಳಲಾಗಿದ್ದು ಸೂರಜ್ ಮಾತ್ರ ಇಡೀ ಘಟನೆಯನ್ನು ಆಕಸ್ಮಿಕ ಸಾವೆಂದು ನಂಬಿಸಲು ಪ್ರಯತ್ನಿಸಿದ್ದ.

ಕೇರಳದಲ್ಲಿ ನಾಗರಹಾವಿನಿಂದ ಕಚ್ಚಿಸಿ ಪತ್ನಿ ಕೊಲೆಕೇರಳದಲ್ಲಿ ನಾಗರಹಾವಿನಿಂದ ಕಚ್ಚಿಸಿ ಪತ್ನಿ ಕೊಲೆ

ಮೊದಲು ಉತ್ತರಾಗೆ ವಿಷಕಾರಿ ಹಾವಿನಿಂದ ಮಾರ್ಚ್ 2 ರಂದು ತನ್ನ ಮನೆಯಲ್ಲೇ ಕಚ್ಚಿಸಿ ಹತ್ಯೆ ಮಾಡಲು ಯತ್ನಿಸಿದ್ದ ಸೂರಜ್ ಬಳಿಕ ಒಂದು ವಾರದೊಳಗೆ ನಾಗರಹಾವಿನಿಂದ ಕಚ್ಚಸಿ ಕೊಲೆ ಮಾಡಿದ್ದಾನೆ.ಎರಡನೇ ಘಟನೆ ನಡೆಯುವ ವೇಳೆ ಆಕೆ ಮೊದಲ ಬಾರಿಯ ಹಾವಿನ ಕಡಿತದಿಂದ ಚೇತರಿಸಿಕೊಳ್ಳುತ್ತಿದ್ದಳು.

Kerala Snakebite Murder: Accused Sooraj Confesses Of Killing Wife

ಪ್ರಕಾರ, ಮೇ 7 ರಂದು ಸೂರಜ್ ಹಾಜರಿದ್ದಂತೆ ಉತ್ತರಾ ಅವರ ಪೋಷಕರು ತಮ್ಮ ಪುತ್ರಿ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾಳೆ ಎನ್ನುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಮುನ್ನ ಅವರು ಮಾರ್ಚ್ 2 ರಂದು ಬ್ಯಾಂಕ್ ಲಾಕರ್‌ನಿಂದ ಉತ್ತರಾಗೆ ಸೇರಿದ್ದ ಚಿನ್ನವನ್ನು ಹಿಂಪಡೆದಿದ್ದರು.

ತನ್ನ ಹೆಂಡತಿಯನ್ನು ಕೊಲ್ಲುವ ಮೊದಲ ಪ್ರಯತ್ನ ವಿಫಲವಾದ ನಂತರ ಸೂರಜ್ ಏಪ್ರಿಲ್ 24 ರಂದು ನಾಗರಹಾವು ಖರೀದಿಸಿ ಅದನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. ಎರಡೂ ಹಾವುಗಳನ್ನು ತಲಾ 5,000 ರೂ.ಗೆ ಖರೀದಿಸಲಾಗಿದೆ.

ಮೇ 7 ರಂದು, ಅವರು ಉತ್ತರಾಳ ಮನೆಗೆ ತೆರಳಿದ್ದರು, ನಾಗರಹಾವನ್ನು ಬಾಟಲಿಯಲ್ಲಿ ಮರೆಮಾಡಿ ಆಕೆ ಮಲಗಿದ್ದಾಗ ಹಾವನ್ನು ತನ್ನ ಹೆಂಡತಿಯ ಮೇಲೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ ಆಕೆ ಹೆಸರಿನಲ್ಲಿದ್ದ ಪಾಲಿಸಿಯ ಹಣವನ್ನೂ ಬಿಡಿಸಿಕೊಳ್ಳಲು ಯತ್ನಿಸಿದ್ದ.

English summary
Sooraj, the prime accused in the Uthra snakebite murder case, has publicly confessed to killing his wife Uthra in front of the media on Tuesday when he was brought to his house in Adoor by Forest personnel for evidence collection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X