• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

14 ವರ್ಷ, 6 ಕೊಲೆ; ಸರಣಿ ಹಂತಕಿ ಜಾಲಿ ಜೋಸೆಪ್ ಕೊಲೆಗಾಗಿ ಬಳಸಿದ್ದು ಸೈನಡ್ ಅಲ್ಲ!

|

ತಿರುವನಂತಪುರಂ, ಫೆಬ್ರವರಿ 11: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಕೇರಳ ಶ್ರೀಮಂತ ಕ್ರಿಶ್ಚಿಯನ್ ಕುಟುಂಬದ ಸರಣಿ ಹತ್ಯೆ ಪ್ರಕರಣದ ಆರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಕೇರಳದ ಕೋಜಿಕೋಡ್ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಪ್ರಮುಖ ಆರೋಪಿ, ಸರಣಿ ಹಂತಕಿ ಜಾಲಿ ಜೋಸೆಪ್‌ ಬಗ್ಗೆ ಸ್ವಾರಸ್ಯಕಾರಿ ಸಂಗತಿಗಳು ಬಯಲಾಗಿವೆ. ಜಾಲಿ ಜೋಸೆಪ್ ಬಂಧನದ ನಂತರ ಸೈನಡ್‌ ನೀಡಿ ಕೊಲೆ ಮಾಡುತ್ತಿದ್ದಳು ಎಂದು ವರದಿಯಾಗಿದ್ದವು. ಆದರೆ, ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಹಂತಕಿ ಕೊಲೆ ಮಾಡಲು ಬಳಸುತ್ತಿದ್ದದ್ದು ನಾಯಿ ವಿಷ ಎಂದು ಹೇಳಿದ್ದಾರೆ! ಗುಣಮುಖ ಆಗದ ಅನಾರೋಗ್ಯ ಪೀಡಿತ ನಾಯಿಗಳಿಗೆ ನೀಡುವ ವಿಷವನ್ನು (ದಯಾಮರಣ) ಜಾಲಿ ತನ್ನದೇ ಕುಟುಂಬದವರಿಗೆ ತಿನಿಸಿ ಕೊಲೆ ಮಾಡುತ್ತಿದ್ದಳು ಎಂಬುದು ಬಹಿರಂಗವಾಗಿದೆ.

ಸೈನೈಡ್ ಸರಣಿ ಹಂತಕಿ ಇನ್ನಷ್ಟು ಸಂಚು ಬಯಲು ಮಾಡಿದ ಪೊಲೀಸರು

ಕೋಜಿಕೋಡ್ ಜಿಲ್ಲೆಯ ಕೊಡತಾಯ್ ಬಳಿಯ ಪೊನ್ನಪಟ್ಟಂ ಕ್ರಿಶ್ಚಿಯನ್ ಕುಟುಂಬದ 6 ಸದಸ್ಯರು ಸಹಜ ಎಂಬಂತೆ ಬೇರೆ ಬೇರೆ ವರ್ಷಗಳಲ್ಲಿ ಸಾವನ್ನಪ್ಪಿದ್ದರು. ಗಂಡ ಸೇರಿದಂತೆ ಆರು ಮಂದಿಯನ್ನು ಜಾಲಿ ಜೋಸೆಪ್ ತುಂಬಾ ತಾಳ್ಮೆವಹಿಸಿ ಹತ್ಯೆ ಮಾಡಿದ್ದಳು. ಈ ಎಲ್ಲ ಕೊಲೆಗಳು 2002 ರಿಂದ 2016 ರ ನಡುವೆ ಮಾಡಲಾಗಿತ್ತು. ಆದರೆ, ಮೆಜೊ ಥಾಮಸ್ ಎನ್ನುವ ಥಾಮಸ್ ಕುಟುಂಬದ ಸಂಬಂಧಿ ಈ ಸಾವುಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ವಿಶೇಷ ತನಿಖಾ ದಳ (ಎಸ್‌ಐಟಿ) ಈ ಬಗ್ಗೆ ತನಿಖೆ ನಡೆಸಿ, ಜಾಲಿ ಜೋಸೆಪ್ ಹಾಗೂ ಅವಳ ಎರಡನೇ ಗಂಡ ಶಜುನನ್ನು ಬಂಧಿಸಿದೆ.

ಹಂತಕಿ ಮಾಡಿದ ಆ ಆರು ಕೊಲೆಗಳು

ಹಂತಕಿ ಮಾಡಿದ ಆ ಆರು ಕೊಲೆಗಳು

ಟಾಮ್ ಥಾಮಸ್ ಕುಟುಂಬದ ಸೊಸೆಯಾಗಿದ್ದ ಹಂತಕಿ ಜಾಲಿ ಜೋಸೆಪ್, ಥಾಮಸ್ ಕುಟುಂಬದ ಅಪಾರ ಆಸ್ತಿ ಲಪಟಾಯಿಸಲು 2002 ರಿಂದ ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಬಂದಿದ್ದಳು. ಮೊದಲು ಜಾಲಿ ಅತ್ತೆ 'ಅಣ್ಣಮ್ಮ ಥಾಮಸ್' 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅಣ್ಣಮ್ಮ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು.

ನಿಲ್ಲಲಿಲ್ಲ ಸಾವಿನ ಸರಣಿ

ನಿಲ್ಲಲಿಲ್ಲ ಸಾವಿನ ಸರಣಿ

2011 ರಲ್ಲಿ ಜಾಲಿ ಪತಿ ರಾಯ್ ಥಾಮಸ್ (40) ಕೂಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತ ಪಟ್ಟಿದ್ದರು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

ಹೃದಯಾಘಾತ ಸರಣಿ ಸಾವು, ಕೇರಳದ ನಿಗೂಢ ಹತ್ಯೆ ರಹಸ್ಯ ಬಯಲು

ನಾಯಿಗೆ ದಯಾಮರಣ ನೀಡಬೇಕು ಎಂದಿದ್ದಳು!

ನಾಯಿಗೆ ದಯಾಮರಣ ನೀಡಬೇಕು ಎಂದಿದ್ದಳು!

ಅಣ್ಣಮ್ಮ ಥಾಮಸ್‌ಗೆ ಸುಳ್ಳು ಹೇಳಿ ರಾಯ್ ಥಾಮಸ್‌ರನ್ನು ವರಿಸಿದ್ದ ಜಾಲಿ ಜೋಸೆಪ್‌, ಥಾಮಸ್ ಕುಟುಂಬದ ಮೇಲೆ ಆರಂಭದಲ್ಲೇ ವಕೃದೃಷ್ಠಿ ಬೀರಿದ್ದಳು. ಇದಕ್ಕಾಗಿ ಆಕೆ ಬಹಳ ತಾಳ್ಮೆಯಿಂದ ಯಾರಿಗೂ ಎಳ್ಳಷ್ಟು ಅನುಮಾನ ಬರದ ಹಾಗೇ ತನ್ನ ಸಂಚನ್ನು ಹಂತ ಹಂತವಾಗಿ ಕಾರ್ಯಗತ ಮಾಡಿಕೊಂಡು ಬಂದಿದ್ದಳು. ಆರಂಭದಲ್ಲಿ ಅಣ್ಣಮ್ಮನನ್ನು ಕೊಲ್ಲಲು ಮನೆಯಲ್ಲಿನ ಸಾದಾರಣ ವಿಷಕಾರಿ ಪದಾರ್ಥವನ್ನು ಬಳಸಿ ಜಾಲಿ ವಿಫಲಳಾಗಿದ್ದಳು. ನಂತರ ಸ್ಥಳೀಯ ಪಶುವೈದ್ಯರ ಬಳಿ ಹೋಗಿ, 'ನಮ್ಮ ಮನೆಯ ನಾಯಿ ಅನಾರೋಗ್ಯದಲ್ಲಿದೆ. ಅದಕ್ಕೆ ದಯಾಮರಣ ಕೊಡಬೇಕು. ಹಾಗಾಗಿ ವಿಷಕಾರಿ ಔಷಧಿ ಕೊಡಿ' ಎಂದು ಕೇಳಿದ್ದಳು. ತನ್ನ ಮಹಾ ಸಂಚನ್ನು ಯಶಸ್ವಿ ಮಾಡಲು ಜಾಲಿ ಇಲ್ಲಿಂದಲೇ ಗೆದ್ದಿದ್ದಳು.

ಯಾರಿಗೂ ಅನುಮಾನ ಬಂದಿರಲಿಲ್ಲ

ಯಾರಿಗೂ ಅನುಮಾನ ಬಂದಿರಲಿಲ್ಲ

ನಾಯಿಗೆ ನೀಡುವ ವಿಷಕಾರಿ ಔಷಧದ ಚೀಟಿಯನ್ನು ತನ್ನ ಬಳಿ ಇಟ್ಟುಕೊಂಡು 14 ವರ್ಷಗಳಲ್ಲಿ ತಾನು ಅಂದುಕೊಂಡಂತೆ ಥಾಮಸ್ ಕುಟುಂಬವನ್ನು ಸರ್ವನಾಶ ಮಾಡುತ್ತಾಳೆ. ಅದಕ್ಕಾಗಿ ಅವಸರ ಮಾಡದೇ, ನಾಯಿಗೆ ನೀಡುವ ವಿಷಕಾರಿ ಔಷಧಿಯನ್ನು ಥಾಮಸ್ ಕುಟುಂಬದ ಒಬ್ಬರಾದ ಮೇಲೆ ಒಬ್ಬರಿಗೆ ಯಾರಿಗೂ ಅನುಮಾನ ಬಾರದೇ ಆಹಾರ ಪಾನೀಯದಲ್ಲಿ ಮಿಶ್ರಣ ಮಾಡಿ ಕೊಟ್ಟಿದ್ದಳು. ಇದರಿಂದ ಥಾಮಸ್ ಕುಟುಂಬದ ಆರು ಜನ ಸಹಜ ಎಂಬಂತೆ ಸಾವನ್ನಪ್ಪಿದ್ದರು.

ಈ ಹಂತಕ 35 ವರ್ಷದಲ್ಲಿ ಕೊಂದಿದ್ದು ಬರೋಬ್ಬರಿ 93 ಮಹಿಳೆಯರನ್ನು!

ಎಲ್ಲರನ್ನು ಮುಗಿಸಿದ ಮೇಲೆ ಅಸಲಿ ಆಟ ಶುರು

ಎಲ್ಲರನ್ನು ಮುಗಿಸಿದ ಮೇಲೆ ಅಸಲಿ ಆಟ ಶುರು

ಯಾವಾಗ ಹಂತಕಿ ತಾನು ಅಂದುಕೊಂಡ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿ ಮುಗಿಸುತ್ತಾಳೋ ಆಗ ಎರಡನೇ ಗಂಡ ಶಜು ಜೊತೆ ಸೇರಿ ಅಸಲಿ ಆಟ ಶುರು ಮಾಡಿದ್ದಳು. ಥಾಮಸ್ ಕುಟುಂಬದ ಆಸ್ತಿ ತನಗೆ ಸೇರಬೇಕು ಎಂದು ಹೋರಾಟಕ್ಕೆ ಇಳಿಯುತ್ತಾಳೆ. ಆಗ ಪತಿ ಮರಣದ ಬಳಿಕ ಶಜುನನ್ನು ಮದುವೆಯಾಗಿ ಥಾಮಸ್ ಕುಟುಂಬದ ಸಂಪೂರ್ಣ ಅಸ್ತಿ ತಮಗೆ ಸೇರಬೇಕು ಎಂದು ಹೋರಾಟಕ್ಕೆ ಇಳಿದಿದ್ದಳು.

ಜಾಲಿ ಸಂಚು ಬಯಲಿಗೆಳೆದ ಕೇರಳ ಪೊಲೀಸರು

ಜಾಲಿ ಸಂಚು ಬಯಲಿಗೆಳೆದ ಕೇರಳ ಪೊಲೀಸರು

ಆದರೆ ಮೇಜೋ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಕೇರಳ ಪೊಲೀಸರು 2019 ರಲ್ಲಿ ಕೊಲೆಯಾಗಿದ್ದ ಆರೂ ಜನರ ದೇಹಗಳನ್ನು ಹೊರ ತೆಗೆದು (ಒಂದೇ ಕಡೆ ಹೂಳಲಾಗಿತ್ತು) ಮರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಆಗ ಹಂತಕಿ ಜಾಲಿ ಜೋಸೆಪ್‌ಳ 14 ವರ್ಷದ ಸಂಚು ಬಯಲಿಗೆ ಬಂದಿತ್ತು. ಈಗ ಹಂತಕಿ ಜಾಲಿ ಜೋಸೆಪ್ ಹಾಗೂ ಅವಳ ಎರಡನೇ ಗಂಡ ಶಜು ಮತ್ತು ಜಾಲಿಗೆ ಸಹಾಯ ಮಾಡಿದ ಇತರ ಇಬ್ಬರು ಕಂಬಿ ಹಿಂದೆ ಬಿದ್ದಿದ್ದಾರೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Kerala Serial Killer Jolly Joseph Case: SIT Police Submitted Charge Sheet To The Kozhikode Court On Monday. Dog Poison Used by jolly joseph for serial killing. From 2002 to 2014 jolly joseph killed 6 persons in thomas family of Kozhikode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X