ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಮಾರಾಟಕ್ಕೆ BevQ ಆಪ್ ಸಿದ್ದಪಡಿಸಿದ ಕೇರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ?

|
Google Oneindia Kannada News

ತಿರುವನಂತಪುರಂ, ಮೇ 27: ಕೊರೊನಾ ವೈರಸ್ ಭೀತಿ ಹಿನ್ನೆಲೆ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿರಲಿಲ್ಲ. ಅಂತಿಮವಾಗಿ ಮೂರನೇ ಲಾಕ್‌ಡೌನ್‌ ಮುಕ್ತಾಯದ ನಂತರ ದೇಶದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಯಿತು.

ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರು ವಿಫಲರಾದರು. ಅಂಗಡಿ ಮಾಲೀಕರು ನಿಯಂತ್ರಿಸುವಲ್ಲಿ ಎಡವಿದರು. ಇದರಿಂದ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಮತ್ತೆ ಬ್ರೇಕ್ ಬಿತ್ತು. ಕೇರಳದಲ್ಲೂ ಮದ್ಯ ಮಾರಾಟ ನಿಲ್ಲಿಸಿತು.

ಮುಂಬೈ: ಮನೆ ಮನೆಗೆ ಮದ್ಯ ಪೂರೈಕೆಗೆ ಅವಕಾಶಮುಂಬೈ: ಮನೆ ಮನೆಗೆ ಮದ್ಯ ಪೂರೈಕೆಗೆ ಅವಕಾಶ

ಇದೀಗ, ಕೇರಳದಲ್ಲಿ ಮದ್ಯ ಮಾರಾಟಕ್ಕಾಗಿ ನೂತನ ಆಪ್ ತಯಾರಿಸಲಾಗಿದೆ. ಈ ಆಪ್ ಬಳಸಿ ಮದ್ಯಪ್ರಿಯರು ಆರಾಮಾಗಿ ಮದ್ಯ ಖರೀದಿಸಬಹುದು. ಇದರಿಂದ ಸಾಮಾಜಿಕ ಅಂತರವೂ ಕಾಪಾಡಬಹುದು ಮತ್ತು ಕೊರೊನಾ ಸೋಂಕಿನಿಂದಲೂ ತಪ್ಪಿಸಿಕೊಳ್ಳಬಹುದು. ಅಂದ್ಹಾಗೆ, ಈ ಆಪ್ ಹೇಗೆ ಕಾರ್ಯನಿರ್ವಹಿಸುತ್ತೆ? ಮುಂದೆ ಓದಿ....

BevQ ಆಪ್ ಬಳಕೆಗೆ ಗೂಗಲ್ ಅನುಮತಿ

BevQ ಆಪ್ ಬಳಕೆಗೆ ಗೂಗಲ್ ಅನುಮತಿ

ಆನ್‌ ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕೇರಳ ಸರ್ಕಾರ BevQ ಎಂಬ ನೂತನ ಆಪ್ ತಯಾರಿಸಿದೆ. ಈ ಆಪ್‌ಗೆ ಗೂಗಲ್ ಅನುಮೋದನೆ ನೀಡಿದೆ. ಅತಿ ಶೀಘ್ರದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ BevQ ಆಪ್ ಲಭ್ಯವಾಗಲಿದ್ದು, ಅದನ್ನು ಬಳಸಿ ಮದ್ಯಪ್ರಿಯರು ಮದ್ಯ ಖರೀದಿಸಬಹುದು.

BevQ ಆಪ್‌ನಲ್ಲಿ ಟೋಕನ್ ಪಡೆಯಬಹುದು

BevQ ಆಪ್‌ನಲ್ಲಿ ಟೋಕನ್ ಪಡೆಯಬಹುದು

ಕೊಚ್ಚಿ ಮೂಲದ ಫೇರ್‌ಕೋಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಈ ಆಪ್ ಮೂಲಕ ನೀವು ರಿಜಿಸ್ಟಾರ್ ಆಗಿ ಇ-ಟೋಕನ್ ಪಡೆಯಬಹುದು. ಆ ಟೋಕನ್‌ ಪಡೆದು ನಿಗದಿತ ಸಮಯದಲ್ಲಿ ಅಂಗಡಿಗೆ ಹೋಗಿ ಸುಲಭವಾಗಿ ಮದ್ಯ ಖರೀದಿಸಬಹುದು. ಈ ಟೋಕನ್‌ನಲ್ಲಿ ಅಂಗಡಿ ಹೆಸರು, ಸಮಯ, ಹಾಗೂ ಟೋಕನ್ ನಂಬರ್ ಕೂಡ ನೀಡಲಾಗಿರುತ್ತೆ.

66 ಖಾಸಗಿ ಮದ್ಯದಂಗಡಿ ತೆರೆಯಲು ದೆಹಲಿ ಸರ್ಕಾರ ಅನುಮತಿ66 ಖಾಸಗಿ ಮದ್ಯದಂಗಡಿ ತೆರೆಯಲು ದೆಹಲಿ ಸರ್ಕಾರ ಅನುಮತಿ

ಸಾಮಾಜಿಕ ಅಂತರ ಕಾಪಾಡಬಹುದು

ಸಾಮಾಜಿಕ ಅಂತರ ಕಾಪಾಡಬಹುದು

ಇ-ಟೋಕನ್ ವಿಧಾನ ಬಳಸುವುದರಿಂದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸಂದರ್ಭ ಬರುವುದಿಲ್ಲ. ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಕಷ್ಟ ಇರುವುದಿಲ್ಲ. ಜನದಟ್ಟಣೆಯೂ ಇರುವುದಿಲ್ಲ. ನಿಗದಿತ ಸಮಯಕ್ಕೆ ಬಂದು ಸುಲಭವಾಗಿ ಮದ್ಯ ತೆಗೆದುಕೊಂಡು ಹೋಗಬಹುದು.

ಯಾವಾಗ ಆರಂಭವಾಗುತ್ತೆ?

ಯಾವಾಗ ಆರಂಭವಾಗುತ್ತೆ?

BevQ ಆಪ್‌ ಸಿದ್ಧವಾಗಿದೆ. ಗೂಗಲ್ ಅನುಮೋದನೆ ನೀಡಿದೆ. ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುವ ಕುರಿತು ಕೆಲವು ಪ್ರಯೋಗ ಮಾಡಬೇಕಿದೆ. ನಂತರ ಅದನ್ನು ಗೂಗಲ್ ಪ್ಲೇನಲ್ಲಿ ಸೇರಿಸಲಾಗುವುದು. ಕೇರಳ ಸ್ಟೇಟ್ ಪಾನೀಯಗಳು (ಎಂ & ಎಂ) ಕಾರ್ಪೊರೇಶನ್ ಲಿಮಿಟೆಡ್ ಅಥವಾ ಬೆವ್ಕೊ ನಿಗಮ ಮಂಡಳಿ ಈ ಆಪ್‌ನ್ನು ನಿಯಂತ್ರಿಸಲಿದೆ. ಸದ್ಯಕ್ಕೆ ನಿಖರವಾದ ದಿನಾಂಕ ಪ್ರಕಟಣೆಯಾಗಿಲ್ಲ. ಆದರೆ, ಆದಷ್ಟೂ ಬೇಗ ಮಾರಾಟ ಆರಂಭವಾಗಲಿದೆ ಎಂದಷ್ಟೇ ಹೇಳಲಾಗಿದೆ.

English summary
Google approved to use BevQ app in kerala. govt will start soon online token system for liquor sale. Here's all you need to know about BevQ app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X