ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬದ 6 ಮಂದಿಯನ್ನು ಕೊಂದಿದ್ದ ಮಹಿಳೆ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 27: ಒಂದೇ ಕುಟುಂಬದ ಆರು ಮಂದಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ ಮಹಿಳೆ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕುಟುಂಬದ ಆರು ಜನರನ್ನು ಕೊಂದಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜಾಲಿ ಥಾಮಸ್ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಸೈನೈಡ್ ಸರಣಿ ಹಂತಕಿ ಇನ್ನಷ್ಟು ಸಂಚು ಬಯಲು ಮಾಡಿದ ಪೊಲೀಸರುಸೈನೈಡ್ ಸರಣಿ ಹಂತಕಿ ಇನ್ನಷ್ಟು ಸಂಚು ಬಯಲು ಮಾಡಿದ ಪೊಲೀಸರು

14 ವರ್ಷಗಳ ಅವಧಿಯಲ್ಲಿ ಜಾಲಿ ಥಾಮಸ್​ ತನ್ನ ಕುಟುಂಬದ ಆರು ಜನರನ್ನು ಉಪಾಯ ಮಾಡಿ ಕೊಲೆ ಮಾಡಿದ್ದಳು. ಸೈನೆಡ್​ ಬಳಸಿಕೊಂಡು ಎಲ್ಲರನ್ನು ಕೊಂದಿದ್ದ ಜಾಲಿಯನ್ನು 2019ರಲ್ಲಿ ಪೊಲೀಸರು ಬಂಧಿಸಿದ್ದರು.

Keralas Cyanide Killer Attempts Suicide In Jail

ಜಾಲಿ ಸೇರಿದಂತೆ ಒಟ್ಟು ಮೂರು ಜನರು ಆ ಕೊಲೆಗಳಲ್ಲಿ ಭಾಗಿಯಾಗಿದ್ದನ್ನು ಪತ್ತೆ ಹಚ್ಚಿ ಅವರನ್ನೆಲ್ಲ ಜೈಲಿಗೆ ಕಳುಹಿಸಲಾಗಿತ್ತು. ವರದಿಯ ಪ್ರಕಾರ ಆಕೆ ಜೈಲಿಗೆ ಬಂದಾಗಿನಿಂದಲೂ ಆಕೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಕಾಲೇಜಿನಲ್ಲಿ ಆಕೆಗೆ ಕೌನ್ಸೆಲಿಂಗ್​ ನಡೆಸಲಾಗುತ್ತಿತ್ತು.

ಶ್ರೀರಾಮುಲು ಆಪ್ತ ಬಂಡೆ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್ ಹಿಂದಿದೆ ಇನ್ನಷ್ಟು ಸಂಗತಿಶ್ರೀರಾಮುಲು ಆಪ್ತ ಬಂಡೆ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್ ಹಿಂದಿದೆ ಇನ್ನಷ್ಟು ಸಂಗತಿ

ಗುರುವಾರ ಬೆಳಗ್ಗೆ ಜಾಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ ಎನ್ನಲಾಗಿದೆ. ಆಸ್ತಿ ಆಸೆಯಿಂದಾಗಿ ಮನೆಯವರನ್ನೆಲ್ಲಾ ಕೊಲೆ ಮಾಡಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.

ಜಾಲಿ ಜೋಸೆಫ್ ಕೊಲೆಗೆ ಬಳಸಿದ್ದು ಸೈನೈಡ್ ಅಲ್ಲ

ಜಾಲಿ ಜೋಸೆಫ್ ಕೊಲೆಗೆ ಬಳಸಿದ್ದು ಸೈನೈಡ್ ಅಲ್ಲ

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಕೇರಳ ಶ್ರೀಮಂತ ಕ್ರಿಶ್ಚಿಯನ್ ಕುಟುಂಬದ ಸರಣಿ ಹತ್ಯೆ ಪ್ರಕರಣದ ಆರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕೇರಳದ ಕೋಜಿಕೋಡ್ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಪ್ರಮುಖ ಆರೋಪಿ, ಸರಣಿ ಹಂತಕಿ ಜಾಲಿ ಜೋಸೆಪ್‌ ಬಗ್ಗೆ ಸ್ವಾರಸ್ಯಕಾರಿ ಸಂಗತಿಗಳು ಬಯಲಾಗಿವೆ. ಜಾಲಿ ಜೋಸೆಪ್ ಬಂಧನದ ನಂತರ ಸೈನಡ್‌ ನೀಡಿ ಕೊಲೆ ಮಾಡುತ್ತಿದ್ದಳು ಎಂದು ವರದಿಯಾಗಿದ್ದವು. ಆದರೆ, ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಹಂತಕಿ ಕೊಲೆ ಮಾಡಲು ಬಳಸುತ್ತಿದ್ದದ್ದು ನಾಯಿ ವಿಷ ಎಂದು ಹೇಳಿದ್ದಾರೆ! ಗುಣಮುಖ ಆಗದ ಅನಾರೋಗ್ಯ ಪೀಡಿತ ನಾಯಿಗಳಿಗೆ ನೀಡುವ ವಿಷವನ್ನು (ದಯಾಮರಣ) ಜಾಲಿ ತನ್ನದೇ ಕುಟುಂಬದವರಿಗೆ ತಿನಿಸಿ ಕೊಲೆ ಮಾಡುತ್ತಿದ್ದಳು ಎಂಬುದು ಬಹಿರಂಗವಾಗಿದೆ.

ಇನ್ನಿಬ್ಬರು ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದಳು

ಇನ್ನಿಬ್ಬರು ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದಳು

ತನ್ನ ಈ ಹತ್ಯಾ ಸರಣಿಗೆ ಸಹಾಯಕರಾಗಿ ಎರಡನೇ ಪತಿ ಶಾಜು, ಆಕೆ ಸಂಬಂಧಿಕ ಎಂಎಸ್ ಮ್ಯಾಥ್ಯೂ ಹಾಗೂ ಪ್ರಾಜಿಕುಮಾರ್ ಎಂಬುವವರನ್ನು ಬಳಸಿಕೊಂಡಿದ್ದಾಳೆ. ಎಲ್ಲರನ್ನು ಈಗ ಪೊಲೀಸರು ಬಂಧಿಸಿದ್ದಾರೆ. 'ಮೊದಲಿಗೆ ಎಲ್ಲರಿಗೂ ಆಹಾರದಲ್ಲಿ ವಿಷ ಬೆರೆಸಿ ಕೊಂದಿದ್ದಾಳೆ ಎಂದು ತಿಳಿದು ಬಂದಿತು. ಶವಗಳ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ಮಾಡಿದ ಬಳಿಕ, ಅತ್ಯಲ್ಪ ಪ್ರಮಾಣದ ಸೈನಡ್ ಬೆರೆಸಿ ಕೊಂದಿದ್ದಾಳೆ" ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿರುವ ಸಿಮೋನ್ ಹೇಳಿದ್ದಾರೆ.

ಹಂತಕಿಯಿಂದ ಆರು ಕೊಲೆ

ಹಂತಕಿಯಿಂದ ಆರು ಕೊಲೆ

ಟಾಮ್ ಥಾಮಸ್ ಕುಟುಂಬದ ಸೊಸೆಯಾಗಿದ್ದ ಹಂತಕಿ ಜಾಲಿ ಜೋಸೆಪ್, ಥಾಮಸ್ ಕುಟುಂಬದ ಅಪಾರ ಆಸ್ತಿ ಲಪಟಾಯಿಸಲು 2002 ರಿಂದ ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಬಂದಿದ್ದಳು. ಮೊದಲು ಜಾಲಿ ಅತ್ತೆ 'ಅಣ್ಣಮ್ಮ ಥಾಮಸ್' 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಅಣ್ಣಮ್ಮ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು.

2011ರಲ್ಲೂ ಒಂದು ಹತ್ಯೆ

2011ರಲ್ಲೂ ಒಂದು ಹತ್ಯೆ

2011 ರಲ್ಲಿ ಜಾಲಿ ಪತಿ ರಾಯ್ ಥಾಮಸ್ (40) ಕೂಡ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತ ಪಟ್ಟಿದ್ದರು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

English summary
Kerala's cyanide killer, Jolly Shaju, who is accused of killing 6 members of her family over the years, attempted to commit suicide in jail. Kozhikode Police said Jolly slit her wrist to kill herself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X