• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಕೋವಿಡ್‌ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಜು.15: ''ಕಳೆದ ಎರಡು ವಾರಗಳಲ್ಲಿ ಕೇರಳದ ಸರಾಸರಿ ಹೊಸ ದೈನಂದಿನ ಕೋವಿಡ್‌ ಪ್ರಕರಣಗಳು ಏರಿಕೆಯಾಗಿದ್ದರೂ, ಇದು ಸಂಭವನೀಯ ಮೂರನೇ ಅಲೆಯ ಆರಂಭವೆಂದು ಪರಿಗಣಿಸಬಾರದು. ಏಕೆಂದರೆ ಈಗ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚಳವಾಗುತ್ತಿದೆ, ಒಮ್ಮೆಲೇ ಏರಿಕೆಯಾಗುತ್ತಿಲ್ಲ. ಈ ಮೂರನೇ ಅಲೆಯು ಆಗಸ್ಟ್‌ನಲ್ಲಿ ಬರಬಹುದು ಎಂದು ಕೆಲವು ತಜ್ಞರು ಊಹಿಸಿದ್ದಾರೆ,'' ಎಂದು ಇಂಡಿಯಾ ಸ್ಪೆಂಡ್ ವರದಿಯು ವಿಶ್ಲೇಷಿಸಿದೆ.

ಜುಲೈ 11 ರ ಹಿಂದಿನ ಎರಡು ವಾರಗಳಲ್ಲಿ ಕೇರಳದಲ್ಲಿ ಸರಾಸರಿ ದೈನಂದಿನ ಹೊಸ ಕೋವಿಡ್‌ ಪ್ರಕರಣಗಳು ಶೇ.15.2 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಏಪ್ರಿಲ್‌ನಲ್ಲಿನ ಎರಡನೇ ಅಲೆಯಲ್ಲಿ, ಸರಾಸರಿ ದೈನಂದಿನ ಪ್ರಕರಣಗಳು ಶೇ. 472 ರಷ್ಟು ತೀವ್ರವಾಗಿ ಏರಿಕೆ ಕಂಡಿತ್ತು. ಕಳೆದ ಎರಡು ವಾರಗಳಲ್ಲಿ, ದೈನಂದಿನ ಪ್ರಕರಣಗಳು 11,357 ರಿಂದ 13,086 ಕ್ಕೆ ಏರಿದೆ ಎಂದು ವರದಿಯು ವಿವರಿಸಿದೆ.

ಇತರೆ ರಾಜ್ಯಗಳಂತೆ ಕೇರಳದಲ್ಲಿ ಕೋವಿಡ್‌ ಪ್ರಕರಣ ಕುಸಿದಿಲ್ಲವೇಕೆ?ಇತರೆ ರಾಜ್ಯಗಳಂತೆ ಕೇರಳದಲ್ಲಿ ಕೋವಿಡ್‌ ಪ್ರಕರಣ ಕುಸಿದಿಲ್ಲವೇಕೆ?

ಬುಧವಾರ, ಕೇರಳದಲ್ಲಿ 4,084 ಹೊಸ ಪ್ರಕರಣಗಳು ಸೇರಿ ಸಕ್ರಿಯ ಕೋವಿಡ್‌ ಪ್ರಕರಣಗಳು ಏರಿಕೆಯಾಗಿದೆ. ಕೇರಳದಲ್ಲಿ ಒಟ್ಟು ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,15,662 ಕ್ಕೆ ತಲುಪಿದೆ ಎಂದು ವರದಿಯಾಗಿದೆ. ಸಕ್ರಿಯ ಕೋವಿಡ್‌ ಪ್ರಕರಣಗಳಲ್ಲಿ ನಾಲ್ಕು ಅಂಕಿಗಳ ಹೆಚ್ಚಳ ಕೇರಳದಲ್ಲಿ ಕಂಡು ಬಂದಿದೆ.

 ಕೋವಿಡ್‌ ಹೆಚ್ಚಳಕ್ಕೆ ಕಾರಣವೇನು?

ಕೋವಿಡ್‌ ಹೆಚ್ಚಳಕ್ಕೆ ಕಾರಣವೇನು?

''ಲಾಕ್‌ಡೌನ್ ನಿರ್ಬಂಧಗಳು ಮತ್ತು ಇತರ ಅಂಶಗಳ ಸಡಿಲಗೊಳಿಸುವಿಕೆಯಿಂದಾಗಿ ಈ ಪ್ರಕರಣಗಳ ಹೆಚ್ಚಳವಾಗಿರಬಹುದು,'' ಎಂದು ತಜ್ಞರು ಇಂಡಿಯಾ ಸ್ಪೆಂಡ್‌ಗೆ ತಿಳಿಸಿದರು. ''ಕೇರಳದಲ್ಲಿ ಕೋವಿಡ್‌ ಪ್ರತಿಕಾಯಗಳನ್ನು ಹೊಂದಿರುವ ಜನರ ಸರಾಸರಿ ಸಂಖ್ಯೆ ರಾಷ್ಟ್ರೀಯ ಸರಾಸರಿಯ ಅರ್ಧದಷ್ಟಿದೆ. ಹಾಗೆಯೇ ಇಲ್ಲಿ ಕೋವಿಡ್‌ ಪ್ರಕರಣಗಳು ಈವರೆಗೆ ಕಾಣಿಸಿಕೊಳ್ಳದ ಪ್ರದೇಶಗಳು ಹೆಚ್ಚಿದೆ ಎಂದು ಈ ಹಿಂದಿನ ಸಿರೊಸರ್ವೇಗಳು ತೋರಿಸಿದೆ. ಆದ್ದರಿಂದ ಜನರು ಈ ಪ್ರದೇಶದ ಜನರು ಸೋಂಕಿಗೆ ಒಳಗಾಗಿರಬಹುದು. ಈ ಕಾರಣದಿಂದಾಗಿ ಸೋಂಕು ಪ್ರಮಾಣ ಅಧಿಕವಾಗಿರಬಹುದು,'' ಎಂದು ಅಶೋಕ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ಪ್ರಾಧ್ಯಾಪಕ ಗೌತಮ್ ಮಿಯಾನ್ ಇಂಡಿಯಾ ಸ್ಪೆಂಡ್‌ಗೆ ತಿಳಿಸಿದರು.

 ಡೆಲ್ಟಾ ಬಗ್ಗೆ ಕೇರಳ ಎಚ್ಚರ ಅಗತ್ಯ

ಡೆಲ್ಟಾ ಬಗ್ಗೆ ಕೇರಳ ಎಚ್ಚರ ಅಗತ್ಯ

''ಕೇರಳ ಉತ್ತಮವಾಗಿ ಕೊರೊನಾ ನಿರ್ವಹಣೆ ಮಾಡುತ್ತಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ಹೆಚ್ಚಿನ ಪ್ರಸರಣ ಇಲ್ಲಿ ನಿರಾಕರಿಸುತ್ತಿದೆ. ಆದರೆ ವೈರಸ್‌ನ ಏರಿಕೆಯ ವಿಚಾರದಲ್ಲಿ ರಾಜ್ಯವು ಇನ್ನೂ ಜಾಗರೂಕರಾಗಿರಬೇಕು. ಈ ಸೋಂಕು ಒಬ್ಬ ರೋಗಿಯಿಂದ ಎಷ್ಟು ಜನರು ಸೋಂಕಿಗೆ ಒಳಗಾಗಬಹುದು ಎಂಬುದು ಮುಖ್ಯ. ಈ ಸೋಂಕು 1 ಕ್ಕಿಂತ ಹೆಚ್ಚು ಜನರಿಗೆ ಹರಡುತ್ತದೆ,'' ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರಕೋವಿಡ್‌ ಹೆಚ್ಚಳ: ಆರು ರಾಜ್ಯಗಳಿಗೆ ತಂಡ ಕಳುಹಿಸಿದ ಕೇಂದ್ರ ಸರ್ಕಾರ

 ಕೇರಳದಲ್ಲಿ ಮೂರನೇ ಅಲೆಯ ಮಾತು ಸರಿಯಲ್ಲ

ಕೇರಳದಲ್ಲಿ ಮೂರನೇ ಅಲೆಯ ಮಾತು ಸರಿಯಲ್ಲ

''ಸಂಖ್ಯೆಗಳು ಹೆಚ್ಚಾಗಲು ಪ್ರಾರಂಭಿಸಿದಾಗ, ಜನರು ತಮ್ಮ ನಡವಳಿಕೆಯನ್ನು ಬದಲಾಯಿಸುತ್ತಾರೆ. ಹೆಚ್ಚು ಜಾಗರೂಕರಾಗುತ್ತಾರೆ. ಈ ಕಾರಣದಿಂದಾಗಿ ಕೊರೊನಾ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಹೀಗೆ ಕೊರೊನಾ ಪ್ರಕರಣಗಳ ಸಂಖ್ಯೆ ಕುಸಿಯಲು ಪ್ರಾರಂಭಿಸಿದಾಗ ಜನರು ಮತ್ತೆ ತಮ್ಮ ನಡವಳಿಕೆಯನ್ನು ಬದಲಾಯಿಸುತ್ತಾರೆ. ಕೊರೊನಾ ಮಾರ್ಗಸೂಚಿಗಳ ಪಾಲನೆ ಅಗತ್ಯವಿಲ್ಲ, ಕೊರೊನಾ ಕಡಿಮೆಯಾಗಿದೆ ಎಂದು ಭಾವಿಸು‌ತ್ತಾರೆ. ಆರಾಮವಾಗಿ ಇರುತ್ತಾರೆ. ಇದರಿಂದಾಗಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತದೆ. ಹೀಗಿರುವಾಗ ಕೇರಳದಲ್ಲಿ ಮೂರನೇ ಕೊರೊನಾ ಅಲೆಯ ಮಾತು ಅರ್ಥಹೀನವಾಗಿದೆ,'' ಎಂದು ಸದಾನಂದನ್ ಇಂಡಿಯಾ ಸ್ಪೆಂಡ್‌ಗೆ ತಿಳಿಸಿದ್ದಾರೆ.

ಕೇರಳದಲ್ಲಿ ಜುಲೈ 17, 18ರಂದು ಸಂಪೂರ್ಣ ಲಾಕ್‌ಡೌನ್‌ ಘೋಷಣೆಕೇರಳದಲ್ಲಿ ಜುಲೈ 17, 18ರಂದು ಸಂಪೂರ್ಣ ಲಾಕ್‌ಡೌನ್‌ ಘೋಷಣೆ

 ದೇಶದಲ್ಲೇ ಅಧಿಕ ಕೊರೊನಾ ಪರೀಕ್ಷೆ ಕೇರಳದಲ್ಲಿ

ದೇಶದಲ್ಲೇ ಅಧಿಕ ಕೊರೊನಾ ಪರೀಕ್ಷೆ ಕೇರಳದಲ್ಲಿ

''ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಇಲ್ಲಿ ಅಧಿಕ ಕೊರೊನಾ ಪರೀಕ್ಷಾ ದರ ಇರುವುದರಿಂದ ಆಗಿರಬಹುದು. ಕೇರಳದ ಪರೀಕ್ಷೆಯು ದೇಶಾದ್ಯಂತದ ಸರಾಸರಿಗಿಂತ ದ್ವಿಗುಣವಾಗಿದೆ. ಆದ್ದರಿಂದ ಕೊರೊನಾ ಸೋಂಕಿತರ ಸಂಖ್ಯೆಯೂ ಅಧಿಕವಾಗಿ ಕಂಡು ಬಂದಿದೆ,'' ಎಂದು ಇಂಡಿಯಾ ಸ್ಪೆಂಡ್ ಹೇಳಿದೆ.

ಪ್ರಕರಣಗಳ ಹೆಚ್ಚಳವನ್ನು ನಿಯಂತ್ರಿಸಲು ಕೇರಳ ಸರ್ಕಾರ ಈ ವಾರಾಂತ್ಯದಲ್ಲಿ (ಜುಲೈ 17 ಮತ್ತು 18) ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಏಳು ದಿನಗಳ ಪರೀಕ್ಷಾ ಸಕಾರಾತ್ಮಕ ದರಕ್ಕೆ ಅನುಗುಣವಾಗಿ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ ಪ್ರಸ್ತುತ ವರ್ಗೀಕರಣವು ಮುಂದುವರಿಸಿದೆ. ಅಂದರೆ ಮೊದಲೇ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಮಯದವರೆಗೆ ನಿರ್ಬಂಧಗಳು ಮುಂದುವರಿಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Kerala’s Covid Cases Are Rising, But May Not Indicate Third Wave says IndiaSpend report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X