ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೋವಿಡ್ -19 ಆರ್ಭಟ; ಒಂದೇ ದಿನ 152 ಪ್ರಕರಣ

|
Google Oneindia Kannada News

ತಿರುವನಂತಪುರಂ, ಜೂನ್ 24 : ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಮತ್ತೆ ಆರ್ಭಟಿಸುತ್ತಿದೆ. ಒಂದೇ ದಿನ 152 ಹೊಸ ಪ್ರಕರಣ ದಾಖಲಾಗಿದೆ. ಕೇರಳ ಪಕ್ಕದ ತಮಿಳುನಾಡು ಮತ್ತು ಕರ್ನಾಟಕದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಕೇರಳ ರಾಜ್ಯದಲ್ಲಿ ಬುಧವಾರ 152 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಕಳೆದ 6 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ 100ಕ್ಕೂ ಅಧಿಕ ಹೊಸ ಪ್ರಕರಣ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,691.

ದುಬೈಗೆ ವಿಮಾನ ಹಾರಾಟ ಆರಂಭಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ದುಬೈಗೆ ವಿಮಾನ ಹಾರಾಟ ಆರಂಭಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ

 Kerala Reports Highest Single Day Spike With 152 COVID Cases

ರಾಜ್ಯದಲ್ಲಿ ಇಂದು ಪತ್ತೆಯಾದ ಪ್ರಕರಣಗಳಲ್ಲಿ 98 ಜನರು ವಿದೇಶದಿಂದ ವಾಪಸ್ ಆದವರು. 46 ಜನರು ಬೇರೆ ರಾಜ್ಯದಿಂದ ಕೇರಳಕ್ಕೆ ಬಂದವರು. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,603ಕ್ಕೆ ಏರಿಕೆಯಾಗಿದೆ.

ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು! ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು!

ತಮಿಳುನಾಡು : ಇನ್ನೂ ಕೇರಳ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಬುಧವಾರ 33 ಜನರು ಮೃತಪಟ್ಟಿದ್ದು, 2865 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 67,000ದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 67,468.

ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ! ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ!

ಕರ್ನಾಟಕ : ಕೇರಳದ ಪಕ್ಕದ ಇನ್ನೊಂದು ರಾಜ್ಯ ಕರ್ನಾಟಕ. ಬುಧವಾರ ರಾಜ್ಯದ್ಲಲಿ 397 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 14 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118 ಮತ್ತು ಮೃತಪಟ್ಟವರ ಸಂಖ್ಯೆ 164.

English summary
Kerala reported highest single-day spike of 152 Coronavirus cases. This is for the sixth consecutive day that Kerala has recorded more than 100 cases per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X