• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳಕ್ಕೆ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

|

ತಿರುವನಂತಪುರಂ, ಸೆಪ್ಟೆಂಬರ್ 23: ಕೋವಿಡ್ 19 ಮಾರ್ಗಸೂಚಿಗಳನ್ನು ಕೇರಳ ಸರ್ಕಾರ ಬದಲಾವಣೆ ಮಾಡಿದೆ. ಕ್ವಾರಂಟೈನ್ ನಿಯಮ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಕಾರ್ಯಾಚರಣೆಗೆ ಇದ್ದ ನಿಯಮಗಳನ್ನು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,42,758.

ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಮಾರ್ಗಸೂಚಿಗಳಲ್ಲಿ ಮಾರ್ಪಾಡುಗಳನ್ನು ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ 100ರಷ್ಟು ಉದ್ಯೋಗಿಗಳ ಜೊತೆ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ.

ಕೇರಳ ಅತ್ಯಂತ ಸಾಕ್ಷರ ರಾಜ್ಯ: ಕರ್ನಾಟಕದ ಸಾಕ್ಷರತೆ ಮಟ್ಟವೇನು? ಸಮೀಕ್ಷೆ ವರದಿ

ಕೋವಿಡ್ ಸಂದರ್ಭದಲ್ಲಿ ಕಚೇರಿಗಳ ನಿರ್ವಹಣೆಗೆ ಸಿಬ್ಬಂದಿ ಸಂಖ್ಯೆ ಮಿತಿಗೊಳಿಸಿದ ಕಾರಣ ವಿವಿಧ ಇಲಾಖೆಯಲ್ಲಿ ಹಲವಾರು ಕೆಲಸಗಳು ಬಾಕಿ ಉಳಿದಿದೆ. ಆದ್ದರಿಂದ, ಈಗ ಶೇ 100ರಷ್ಟು ಸಿಬ್ಬಂದಿ ಜೊತೆ ಕೆಲಸ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್ 28ರಿಂದ ತಾಲೂಕು ಕೋರ್ಟ್ ಕಾರ್ಯಾರಂಭ; ಮಾರ್ಗಸೂಚಿ

ದೇಶಿಯ ವಿಮಾನಗಳ ಮೂಲಕ ಮತ್ತು ಕೇರಳ ರಾಜ್ಯಕ್ಕೆ ಆಗಮಿಸುವ ಇತರರಿಗೆ ಕಡ್ಡಾಯ ಹೋಂ ಕ್ವಾರಂಟೈನ್ ಇರಲಿದೆ. ಆದರೆ, 14 ದಿನಗಳ ಕ್ವಾರಂಟೈನ್‌ ಅನ್ನು 7 ದಿನಗಳಿಗೆ ಇಳಿಕೆ ಮಾಡಲಾಗಿದೆ. ಮೊದಲು 24 ದಿನದ ಕ್ವಾರಂಟೈನ್ ನಿಯಮ ಜಾರಿಯಲ್ಲಿತ್ತು, ಬಳಿಕ ಅದನ್ನು 14 ದಿನಕ್ಕೆ ಇಳಿಸಲಾಗಿತ್ತು.

ಜಿಎಸ್‌ಟಿ ನಷ್ಟ ಪರಿಹಾರ, ಕೇಂದ್ರ ಸರ್ಕಾರದ ವಿರುದ್ಧ ನಿಂತ ಕೇರಳ

ಪರೀಕ್ಷೆ ಮಾಡಲಾಗುತ್ತದೆ

ಪರೀಕ್ಷೆ ಮಾಡಲಾಗುತ್ತದೆ

7 ದಿನ ಕ್ವಾರಂಟೈನ್‌ನಲ್ಲಿರುವವರಿಗೆ ಏಳನೇ ದಿನ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆ ವರದಿ ನೆಗೆಟಿವ್ ಬಂದರೆ ಮುಂದಿನ 7 ದಿನಗಳ ಕ್ವಾರಂಟೈನ್ ಅವರ ಆಯ್ಕೆ ಆಗಿರುತ್ತದೆ, ಕಡ್ಡಾಯವೇನಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

14 ದಿನದ ಪೂರ್ಣಗೊಳಿಸಿ

14 ದಿನದ ಪೂರ್ಣಗೊಳಿಸಿ

ಕೇರಳಕ್ಕೆ ಆಗಮಿಸಿರುವವರು ಕೋವಿಡ್ ಪರೀಕ್ಷೆಗೆ ಒಳಗಾಗದಿದ್ದಲ್ಲಿ 14 ದಿನದ ಹೋಂ ಕ್ವಾರಂಟೈನ್ ಪೂರ್ಣಗೊಳಿಸಲು ಸಲಹೆ ನೀಡಲಾಗುತ್ತದೆ. ಹೋಟೆಲ್, ಹಾಸ್ಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿಯೂ ಕ್ವಾರಂಟೈನ್ ಆಗಲು ಅವಕಾಶ ನೀಡಲಾಗಿದೆ.

ಮೆಟ್ರೋದಲ್ಲಿ ಪ್ರಯಾಣ ದರ ಕಡಿತ

ಮೆಟ್ರೋದಲ್ಲಿ ಪ್ರಯಾಣ ದರ ಕಡಿತ

ಕೊಚ್ಚಿಯಲ್ಲಿ ಮೆಟ್ರೋ ರೈಲಿನ ಸಂಚಾರ ಆರಂಭವಾಗಿದೆ. ಮೆಟ್ರೋದ ಪ್ರಯಾಣ ದರವನ್ನು 60 ರಿಂದ 50 ರೂ.ಗೆ ಕಡಿತಗೊಳಿಸಲಾಗಿದೆ. ಕೊಚ್ಚಿ ಒನ್ ಕಾರ್ಡ್ ಹೊಂದಿರುವ ಜನರಿಗೆ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮಗಳಿಗೆ ಅನುಮತಿ

ಕಾರ್ಯಕ್ರಮಗಳಿಗೆ ಅನುಮತಿ

ಕಂಟೈನ್ಮೆಂಟ್ ಝೋನ್‌ಗಳ ಹೊರಗೆ ಶೈಕ್ಷಣಿಕ, ಸಾಮಾಜಿಕ, ಮನೋರಂಜನಾ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇದರಲ್ಲಿ 100 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಚಿತ್ರಮಂದಿರ, ಮಲ್ಟಿಫೆಕ್ಸ್‌ಗಳು ಎಂದಿನಂತೆ ಮುಚ್ಚಿರಲಿವೆ.

   ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ | Oneindia Kannada

   English summary
   Kerala government reduced the mandatory home quarantine period for domestic passengers and all those who come to Kerala from other states from 14 to 7 days.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X