ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಬಸ್‌, ಟ್ಯಾಕ್ಸಿ, ಆಟೋ ದರ ಏರಿಕೆ ಹೊರೆ, ಪ್ರಯಾಣಿಕರಿಗೆ ಬರೆ

|
Google Oneindia Kannada News

ಕೇರಳ, ಮೇ 1 : ಇತ್ತೀಚಿಗೆ ಪೆಟ್ರೋಲ್, ಡೀಸೆಲ್‌ ದರ ಏರಿಕೆಯಾಗುತ್ತಿರುವ ಪರಿಣಾಮ ಕೇರಳದಲ್ಲಿ ಇಂದಿನಿಂದ ಸಾರ್ವಜನಿಕ ಸಾರಿಗೆ ವೆಚ್ಚವನ್ನ ಏರಿಕೆ ಮಾಡಲಾಗಿದೆ. ಬಸ್‌, ಟ್ಯಾಕ್ಸಿ, ಆಟೋ ಪ್ರಯಾಣ ದರ ಏರಿಕೆಯ ದರದ ಜೊತೆಗೆ ವಿದ್ಯಾರ್ಥಿಗಳ ಪಾಸ್‌ ದರವನ್ನು ಕೂಡ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಮಾರ್ಚ್‌ 30 ರಂದು ನಡೆದ ಸಭೆಯಲ್ಲಿ ಬಸ್‌, ಆಟೋ, ಟ್ಯಾಕ್ಸಿ ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿತ್ತು. ಈ ಮೂಲಕ ಕೇರಳ ಜನತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಭಾರದ ಜೊತೆಗೆ ಈಗ ಸಾರಿಗೆ ದರವನ್ನು ಸರ್ಕಾರ ಹೆಚ್ಚಿಸಿರುವುದರಿಂದ ಭಾರದ ಹೊರೆ ಮತ್ತಷ್ಟು ಹೆಚ್ಚಾಗಿದೆ.

ವಿಷು ಮುನ್ನ ಇಲ್ಲ ಸಂಬಳ: ಕೆಎಸ್‌ಆರ್‌ಟಿಸಿ ಮುಷ್ಕರಕ್ಕೆ ಎಡ ಪಕ್ಷಗಳ ಕರೆ, ಸರ್ಕಾರಕ್ಕೆ ಇಕ್ಕಟ್ಟುವಿಷು ಮುನ್ನ ಇಲ್ಲ ಸಂಬಳ: ಕೆಎಸ್‌ಆರ್‌ಟಿಸಿ ಮುಷ್ಕರಕ್ಕೆ ಎಡ ಪಕ್ಷಗಳ ಕರೆ, ಸರ್ಕಾರಕ್ಕೆ ಇಕ್ಕಟ್ಟು

ಖಾಸಗಿ ಬಸ್‌ ಮಾಲೀಕರು ಟಿಕೆಟ್‌ ದರವನ್ನು 8 ರಿಂದ 12 ರೂಪಾಯಿಗೆ ಏರಿಕೆ ಮಾಡಬೇಕು ಮತ್ತು ಪ್ರತಿ ಕಿಲೋಮೀಟರ್‌ಗೆ 90 ಪೈಸೆಯಿಂದ 1.10 ಪೈಸೆ ಹೆಚ್ಚಿಸಬೇಕು ಎಂದು ಒತ್ತಾಯಿಸಿತ್ತು. ಇದರ ಜೊತೆಗೆ ವಿದ್ಯಾರ್ಥಿಗಳ ಪಾಸ್‌ ದರವು ಕೂಡ 6 ರುಪಾಯಿ ಹೆಚ್ಚಸಬೇಕೆಂದು ಖಾಸಗಿ ಬಸ್‌ ಮಾಲೀಕರು ಪ್ರತಿಭಟನೆ ನಡೆಸಿದ್ದರು.

Kerala Public Transport Cost More Form Today

ಆದ್ರೆ ಸರ್ಕಾರ ಪ್ರಯಾಣಿಕರ ದರವನ್ನು 8 ರಿಂದ 10 ರೂಪಾಯಿಗೆ ಹಾಗೂ ಪ್ರತಿ ಕಿಲೋಮೀಟರ್‌ಗೆ 90 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲು ನಿರ್ಧಾರ ಮಾಡಿದೆ. ಅಲ್ಲದೆ ವಿದ್ಯಾರ್ಥಿಗಳ ಪಾಸ್‌ ದರ ಹೆಚ್ಚಿಸುವ ವಿಚಾರವನ್ನು ಪರಿಶೀಲಿಸಲು ಆಯೋಗವನ್ನ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಆಟೋ ದರ ಕೂಡ ಹೆಚ್ಚಾಗಿದ್ದು, ಎರಡು ಕಿಲೋಮೀಟರ್‌ಗಳಿಗೆ 30 ರೂಪಾಯಿಗೆ ಏರಿಸಲು ನಿರ್ಧರಿಸಿದ್ದು, ಒಂದೂವರೆ ಕಿಲೋಮೀಟರ್‌ಗೆ ಈಗಿರುವ 25 ರೂಪಾಯಿ, ನಂತರ ಪ್ರತಿ ಕಿಲೋಮೀಟರ್‌ಗೆ ಈಗಿರುವ 12 ರೂಪಾಯಿಯಂತೆ, ನಂತರ ಕಿಲೋಮೀಟರ್‌ಗೂ ಕೂಡ 15 ರೂಪಾಯಿಗೆ ಹೆಚ್ಚಿಸಲಾಗಿದೆ.

Kerala Public Transport Cost More Form Today

ಇನ್ನು ಟ್ಯಾಕ್ಸಿ ದರ ಕೂಡ ಹೆಚ್ಚಾಗಿದ್ದು, 1,500 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ, ಮೊದಲ 5 ಕಿಲೋಮೀಟರ್‌ಗೆ 175 ರೂಪಾಯಿಯಿಂದ 200 ರೂಗೆ ಹೆಚ್ಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರ ಜೊತೆಗೆ ಪ್ರತಿ ಕಿಲೋಮೀಟರ್‌ಗೆ ಈಗಿರುವ 15 ರೂ ದರವನ್ನು 18 ರೂಪಾಯಿಗೆ ಏರಿಸಿದೆ. ಅಲ್ಲದೆ ಇವುಗಳ ಜೊತೆಗೆ ಕ್ವಾಡ್ರಿ ಕನಿಷ್ಟ ದರವನ್ನು ರೂ 30 ರಿಂದ 35ಕ್ಕೆ ಹೆಚ್ಚಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೆ 12 ರೂಪಾಯಿ ಹೆಚ್ಚಿಸಿದೆ.

ಈ ಮೂಲಕ ಎಲ್ಲಾ ರೀತಿಯ ಸಾರಿಗೆ ದರವನ್ನು ಹೆಚ್ಚಿಸುವ ಮೂಲಕ ಸರ್ಕಾರ ಸಾರ್ವಜನಿಕರ ಮೇಲೆ ಮತ್ತಷ್ಟು ಹೊರೆ ಹೊರಿಸಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಸಾರಿಗೆ ದರವು ಹೆಚ್ಚಾಗಿದ್ದು, ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

English summary
The cost of public transport in Kerala have slightly increased from Sunday as the recently hiked fares came into affect. The general public in Kerala from today have to shell out more for travel by bus, auto or taxi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X