ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಪೊಲೀಸ್-ನಕ್ಸಲರ ಮಧ್ಯೆ ಗುಂಡಿನ ಚಕಮಕಿ: ಓರ್ವ ಮಾವೋವಾದಿ ಹತ

|
Google Oneindia Kannada News

ತಿರುವನಂತಪುರಂ, ನವೆಂಬರ್ 03: ಕೇರಳದ ವಯನಾಡಿನಲ್ಲಿ ನಡೆದ ಎನ್‌ಕೌಂಟ್‌ನಲ್ಲಿ ಓರ್ವ ಮಾವೋವಾದಿಯನ್ನು ಹತ್ಯೆ ಮಾಡಲಾಗಿದೆ.

ಪೊಲೀಸರು ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಕೇರಳ ಪೊಲೀಸ್ ಪಡೆಯ ಥಂಡರ್ ಬೋಲ್ಟ್ ಕಮಾಂಡೋ ನಡೆಸಿದ ಎನ್ ಕೌಂಟರ್ ನಲ್ಲಿ ಒಬ್ಬ ಮಾವೋವಾದಿ ಬಲಿಯಾಗಿದ್ದಾನೆ.

ಛತ್ತೀಸ್‌ಗಢದಲ್ಲಿ ತಮ್ಮ ಮುಖಂಡನನ್ನೇ ಹತ್ಯೆ ಮಾಡಿದ ನಕ್ಸಲರುಛತ್ತೀಸ್‌ಗಢದಲ್ಲಿ ತಮ್ಮ ಮುಖಂಡನನ್ನೇ ಹತ್ಯೆ ಮಾಡಿದ ನಕ್ಸಲರು

ಕಮಾಂಡೋ ಪಡೆಗಳು ಘಟನಾ ಸ್ಥಳದಲ್ಲಿ ಕೆಲ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮೃತ ಮಾವೋವಾದಿ ಗುರುತು ಪತ್ತೆಯಾಗಿಲ್ಲ.

Kerala Police Kill Maoist In Wayanad Forest Gun Battle

ಎನ್‌ಕೌಂಟರ್ ಕುರಿತಂತೆ ಕಾಂಗ್ರೆಸ್ ನಕಲಿ ಎನ್ ಕೌಂಟರ್ ಮೂಲಕ ಪಿಣರಾಯಿ ಸರ್ಕಾರ ಮಾವೋವಾದಿಗಳನ್ನು ಹತ್ಯೆ ಮಾಡಿಸುತ್ತಿದೆ ಎಂದು ಆರೋಪಿಸಿದೆ.

ಕೇರಳದ ವಯನಾಡ್ ಜಿಲ್ಲೆಯ ಬಣಾಸುರಮನೆ ಬಳಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಥಂಡರ್ ಬೋಲ್ಟ್ ಕಮಾಂಡೊಗಳು ಗುಸ್ತು ತಿರುಗುತ್ತಿದ್ದು ಈ ವೇಳೆ ಮೂವರು ಶಂಕಿತ ಮಾವೋವಾದಿಗಳು ಪ್ರತ್ಯಕ್ಷರಾಗಿದ್ದಾರೆ.

ಈ ವೇಳೆ ಕಮಾಂಡೋ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಇದರಲ್ಲಿ ಓರ್ವ ಮಾವೋವಾದಿ ಹತ್ಯೆಯಾಗಿದ್ದಾನೆ. ಇನ್ನುಳಿದಂತೆ ಇಬ್ಬರು ಮಾವೋವಾದಿಗಳ ಅಲ್ಲಿಂದ ಪರಾರಿಯಾಗಿದ್ದಾರೆ.

English summary
The Kerala police on Tuesday said they had killed at least one suspected Maoist in a gun battle at Padinjarathara forests in Wayanad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X