ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳುಸುದ್ದಿ: ಇಬ್ಬರ ಬಂಧನ

|
Google Oneindia Kannada News

ತಿರುವನಂತಪುರಂ, ಮಾರ್ಚ್.09: ಕೊರೊನಾ ವೈರಸ್ ಎಂದರೆ ಮೊದಲೇ ಜನರು ಬೆಚ್ಚಿ ಬೀಳುತ್ತಿದ್ದಾರೆ. ಅಂಥದ್ರಲ್ಲಿ ಜನರನ್ನು ಮತ್ತಷ್ಟು ಬೆದರಿಸುವ ಕಿಡಿಗೇಡಿಗಳನ್ನು ಪೊಲೀಸರು ಹಿಡಿದು ಕಂಬಿ ಹಿಂದೆ ತಳ್ಳಿದ್ದಾರೆ.
ಅಚ್ಚರಿ ಎನಿಸಿದರೂ ಇದು ಸತ್ಯ ಘಟನೆ. ಕೇರಳದಲ್ಲಿ ಕೊರೊನಾ ವೈರಸ್ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪರ್ವೇಶ್ ಲಾಲ್ ಮತ್ತು ಅನಸ್ ಎಂದು ಗುರುತಿಸಲಾಗಿದೆ.

ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ
ಪರ್ವೇಶ್ ಲಾಲ್ ಹಾಗೂ ಅನಸ್ ಎಂಬ ಆರೋಪಿಗಳು ಕೊರೊನಾ ವೈರಸ್ ಬಗ್ಗೆ ಸುಳ್ಳು ಸುಳ್ಳು ಮಾಹಿತಿಯನ್ನು ಜನರಲ್ಲಿ ಹರಡುತ್ತಿದ್ದರು. ತ್ರಿಶೂರ್ ಜಿಲ್ಲೆಯ ಕುನ್ನಂಕುಳಂನಲ್ಲಿ ಇರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ದಾಖಲು ಮಾಡಲಾಗಿದೆ ಎಂದು ಸುದ್ದಿ ಹಬ್ಬಿಸಿದ್ದರು ಎಂದು ತಿಳಿದು ಬಂದಿದೆ.

 Kerala Police Arrested Two People For Spread Rumours About Coronavirus

ಕುನ್ನಂಕುಳಂ ಠಾಣೆ ಪೊಲೀಸರಿಂದ ಇಬ್ಬರ ಬಂಧನ:
ಕೇರಳದಲ್ಲಿ ಹರಡಿರುವ ಈ ವದಂತಿ ಬಗ್ಗೆ ತಿಳಿದ ತ್ರಿಶೂರ್ ಜಿಲ್ಲೆ ಕುನ್ನಂಕುಳಂ ಠಾಣೆಯ ಪೊಲೀಸರು ಪರ್ವೇಶ್ ಲಾಲ್ ಮತ್ತು ಅನಸ್ ಎಂಬ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು, ಇದುವರೆಗೂ ಕೇರಳದಲ್ಲಿ 6 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಪೈಕಿ ಮೂರು ವರ್ಷದ ಮಗು ಕೂಡಾ ಸೇರಿದೆ.
ಇತ್ತೀಚೆಗಷ್ಟೇ ಪೋಷಕರ ಜೊತೆ ಇಟಲಿಗೆ ತೆರಳಿ ವಾಪಸ್ಸಾದ ಮಗುವಿನಲ್ಲಿ ಕೊರೊನಾ ವೈರಸ್‌ ಲಕ್ಷಣಗಳು ಕಾಣಿಸಿಕೊಂಡಿದೆ. ಸದ್ಯ ಮಗುವನ್ನು ಎರ್ನಾಕುಲಮ್ ‌ನಲ್ಲಿರುವ ಮೆಡಿಕಲ್ ಕಾಲೇಜಿನ ಐಸೋಲೇಷನ್ ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಇನ್ನು, ಭಾರತದಲ್ಲಿ ಇದುವರೆಗೂ 44 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ.

English summary
Kerala Police Arrested Two People For Spread Rumours About Coronavirus. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X