ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ವೈರಲ್; ನಾಯಿ ಕುತ್ತಿಗೆಗೆ ಹಗ್ಗ ಕಟ್ಟಿ ಕಾರು ಓಡಿಸಿದ ವ್ಯಕ್ತಿ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 12: ಸಾಕು ನಾಯಿಯನ್ನು ಕಾರಿಗೆ ಕಟ್ಟಿ, ಜೋರಾಗಿ ಕಾರು ಓಡಿಸುತ್ತಾ ರಸ್ತೆಯಲ್ಲಿ ಎಳೆದುಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿ ಈ ಘಟನೆ ನಡೆದಿದೆ. ಪ್ರಾಣಿಯನ್ನು ಈ ರೀತಿ ಕ್ರೂರವಾಗಿ ನಡೆಸಿಕೊಂಡಿರುವ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ

ಯೂಸುಫ್ ಎಂಬ ಈ ವ್ಯಕ್ಯಿಯು ಕಾರಿನ ಮಾಲೀಕನಾಗಿದ್ದು, ಈತನೇ ತಾನು ಸಾಕಿದ ನಾಯಿಯನ್ನು ಹೀಗೆ ಕಟ್ಟಿ ಹಾಕಿ ಕಾರು ಚಲಾಯಿಸಿದ್ದಾನೆ. ನಾಯಿಯ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕಾರಿನ ಡಿಕ್ಕಿಗೆ ಕಟ್ಟಿ ಕಾರನ್ನು ಜೋರಾಗಿ ಓಡಿಸಿದ್ದಾನೆ. ತನ್ನ ಮನೆಯಲ್ಲಿ ನಾಯಿ ಕಿರಿಕಿರಿ ಮಾಡುತ್ತಿದ್ದು, ಅದನ್ನು ಬೇರೆಡೆಗೆ ಬಿಟ್ಟುಬರಲು ಈ ರೀತಿ ಕರೆದುಕೊಂಡು ಹೋಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

Kerala Police Arrested Man After Video Of Dog Tied To Car On Road Viral

ಕಾರಿನ ಹಿಂದೆ ಬೈಕ್ ನಲ್ಲಿ ಬರುತ್ತಿದ್ದ ಅಖಿಲ್ ಎಂಬಾತ ಈ ದೃಶ್ಯದ ವಿಡಿಯೋ ಮಾಡಿದ್ದಾನೆ. "ಮೊದಲು ಕಾರನ್ನು ನಾಯಿ ಅಟ್ಟಾಡಿಸಿಕೊಂಡು ಹೋಗುತ್ತಿರುವಂತೆ ಕಂಡಿತ್ತು. ಆ ನಂತರ ಕಾರಿನ ವೇಗವನ್ನೂ ಹೆಚ್ಚಿಸಿದ್ದು, ನಾಯಿ ರಸ್ತೆಯ ಮೇಲೆ ಎಳೆದಾಡುವಂತೆ ಕಾಣಿಸುತ್ತಿತ್ತು. ಸಮೀಪ ಹೋದಾಗ ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿದ್ದು ಕಂಡುಬಂತು" ಎಂದು ಅಖಿಲ್ ವಿವರಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಖಿಲ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಪ್ರಾಣಿಗಳ ಮೇಲೆ ಕ್ರೂರತ್ವ ತೋರಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಗೆ ಪ್ರಾಣಿ ದಯಾ ಸಂಘದವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ನಾಯಿಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಆರೈಕೆ ಮಾಡಲಾಗುತ್ತಿದೆ.

English summary
Video of dog tied to car and dragged on road is viral. Kerala ernakulam police arrested car owner,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X