ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಈ ಪಂಚಾಯಿತಿಯಲ್ಲಿ 'ಸರ್‌, ಮೇಡಮ್‌' ಎಂದು ಕರೆಯುವಂತಿಲ್ಲ!

|
Google Oneindia Kannada News

ಪಾಲಕ್ಕಾಡ್‌, ಸೆಪ್ಟೆಂಬರ್‌ 02: ಕೇರಳದಲ್ಲಿ ಪಂಚಾಯತ್‌ ಒಂದರಲ್ಲಿ ಇನ್ನೊಬ್ಬರಿಗೆ ಗೌರವಯುತವಾಗಿ ಸರ್‌ ಹಾಗೂ ಮೇಡಮ್‌ ಎಂದು ಕರೆಯುವಂತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಂದರ್ಶಕರನ್ನು 'ಸರ್' ಅಥವಾ 'ಮೇಡಂ' ನಂತಹ ಸಾಮಾನ್ಯ ಗೌರವಪೂರ್ವಕವಾಗಿ ಕರೆಯುವಂತಿಲ್ಲ. ಬದಲಾಗಿ ಹೆಸರು ಅಥವಾ ಪದನಾಮದಿಂದ ಕರೆಯಬೇಕು ಎಂದು ಆದೇಶಿಸಲಾಗಿದೆ.

ಉತ್ತರ ಕೇರಳದಲ್ಲಿ ಮಾಥೂರ್ ಗ್ರಾಮ ಪಂಚಾಯತ್‌ನಲ್ಲಿ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವೆ ಒಂದು ವ್ಯತ್ಯಾಸವನ್ನು ತಗೆದು ಹಾಕುವ ಉದ್ದೇಶದಿಂದ ಹಾಗೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸದ ಬಾಂಧವ್ಯ ಸೃಷ್ಟಿ ಮಾಡುವ ಉದ್ದೇಶದಿಂದ ತನ್ನ ಕಚೇರಿ ಆವರಣದಲ್ಲಿ 'ಸರ್' ಮತ್ತು 'ಮೇಡಂ' ನಂತಹ ವಸಾಹತುಶಾಹಿ ಗೌರವಗಳನ್ನು ನಿಷೇಧಿಸಿದೆ.

'ಮದುವೆಯಾಗಲು ಹುಡುಗಿ ಬೇಕು': ಅಂಗಡಿ ಎದುರು ಬೋರ್ಡ್ ಹಾಕಿದ ಯುವಕನಿಗೆ ವಿದೇಶದಿಂದ ಕರೆ!'ಮದುವೆಯಾಗಲು ಹುಡುಗಿ ಬೇಕು': ಅಂಗಡಿ ಎದುರು ಬೋರ್ಡ್ ಹಾಕಿದ ಯುವಕನಿಗೆ ವಿದೇಶದಿಂದ ಕರೆ!

ಈ ಮೂಲಕ ಪರಸ್ಪರ ಸರ್‌, ಮೇಡಂ ಎನ್ನುವ ಮೂಲಕ ಪರಸ್ಪರ ಗೌರವ ನೀಡುವುದನ್ನು ನಿಷೇಧ ಮಾಡಿದ ದೇಶದ ಮೊದಲ ನಾಗರಿಕ ಸಂಸ್ಥೆ ಮಾಥೂರ್ ಗ್ರಾಮ ಪಂಚಾಯತ್‌ ಆಗಿದೆ. ಇತರ ನಾಗರಿಕ ಸಂಸ್ಥೆಗಳಿಗೆ ವಿಶಿಷ್ಟವಾದ ಸುಧಾರಣಾ ಮಾದರಿಯನ್ನು ಸ್ಥಾಪಿಸಿದೆ.

Kerala panchayat office bans honorifics, No more Sir or Madam

ಇತ್ತೀಚೆಗೆ ನಡೆದ ಪಂಚಾಯತ್ ಕೌನ್ಸಿಲ್ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡು ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ರಾಜಕೀಯ ಭಿನ್ನತೆಯನ್ನು ಬದಿಗೊತ್ತಿ, ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು 16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯತ್‌ನ ಒಬ್ಬ ಬಿಜೆಪಿ ಸದಸ್ಯರು ಈ ವಾರದ ಆರಂಭದಲ್ಲಿ ಈ ನಿರ್ಣಯವನ್ನು ಮಂಡಿಸಿದ್ದಾರೆ.

ಮಾಥೂರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್ ಈ ಬಗ್ಗೆ ಮಾತನಾಡಿ, "ತಮ್ಮ ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಲು ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡುವ ಸಾಮಾನ್ಯರು ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಸರ್‌ ಹಾಗೂ ಮೇಡಮ್‌ ಎಂದು ಕರೆಯುವುದನ್ನು ನಿಷೇಧಿಸಲಾಗಿದೆ," ಎಂದು ತಿಳಿಸಿದ್ದಾರೆ.

"ರಾಜಕೀಯವನ್ನು ಹೊರತುಪಡಿಸಿ ನಮ್ಮ ಪಂಚಾಯಿತಿಯಲ್ಲಿ ಪ್ರತಿಯೊಬ್ಬರೂ ಆಫೀಸಿನಲ್ಲಿ ಸ್ನೇಹಪರ ಮತ್ತು ಉತ್ತಮವಾದ ವಾತಾವರಣವನ್ನು ಸೃಷ್ಟಿಸುವುದರ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಸರ್ ಅಥವಾ ಮೇಡಂ ಎಂಬಂತಹ ಗೌರವ ನೀಡಬೇಕು ಎಂಬ ಉದ್ದೇಶಿತ ಮಾತುಗಳನ್ನು ನಿಷೇಧಿಸಲಾಗಿದೆ. ಈ ಸರ್‌, ಮೇಡಮ್‌ ಎಂಬುವುದರಿಂದ ಜನರು ತಮ್ಮ ಸಮಸ್ಯೆಗಳ ಹಿನ್ನೆಲೆ ನಮ್ಮನ್ನು ಸಂಪರ್ಕಿಸುವ ವೇಳೆ ಅಂತರವು ಸೃಷ್ಟಿಯಾಗುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲೂ ಇತ್ತು," ಎಂದು ಹೇಳಿದ್ದಾರೆ. ಇನ್ನು ಪಂಚಾಯತ್‌ನ ಇತರೆ ಸದಸ್ಯರು ಕೂಡಾ ಈ ಗೌರವಗಳು ವಸಾಹತುಶಾಹಿ ವಿಧಾನ ಎಂದಿದ್ದಾರೆ.

ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?

"ಪ್ರಜಾಪ್ರಭುತ್ವದಲ್ಲಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರಿಗೆ ಸೇವೆ ಸಲ್ಲಿಸಲು ಇದ್ದಾರೆ. ಜನರಿಗೆ ಏನು ಮಾಡಬೇಕು ಎಂಬುವುದನ್ನು ಅವರು ನಮ್ಮಲ್ಲಿ ವಿನಂತಿ ಹೇಳುವ ಅಗತ್ಯವಿಲ್ಲ. ನಮ್ಮಲ್ಲಿ ಕೆಲಸ ಮಾಡುವಂತೆ ಹೇಳುವುದು ಜನರ ಹಕ್ಕು, ಆದ್ದರಿಂದ ಅವರು ಸೇವೆಯನ್ನು ಮಾಡುವಂತೆ ನಮ್ಮಲ್ಲಿ ದೈರ್ಯದಿಂದ ಹೇಳಬಹುದು," ಎಂದು
ಮಾಥೂರ್ ಪಂಚಾಯತ್ ಉಪಾಧ್ಯಕ್ಷ ಪಿ ಆರ್ ಪ್ರಸಾದ್ ತಿಳಿಸಿ‌ದ್ದಾರೆ.

ಇನ್ನು ಸರ್‌, ಮೇಡಮ್‌ ಎಂಬ ಗೌರವ ನೀಡುವುದನ್ನು ನಿಷೇಧ ಮಾಡಿದ ಬಳಿಕ ಪೌರಕಾರ್ಮಿಕರು ಕಚೇರಿಯ ಹೊರಗೆ ನೋಟಿಸ್ ಒಂದನ್ನು ಹಾಕಲಾಗಿದೆ. ಯಾರಾರದೂ ಮೇಡಮ್‌ ಅಥವಾ ಸರ್‌ ಎಂದು ಕರೆದಿಲ್ಲ ಎಂಬ ಕಾರಣಕ್ಕೆ ನಿಮಗೆ ಸೇವೆ ನೀಡಲು ನಿರಾಕರಿಸಿದರೆ, ನೇರವಾಗಿ ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು ಎಂದು ಈ ನೋಟಿಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.

ಪಂಚಾಯಿತಿಯ ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಮೇಜಿನ ಮೇಲೆ ತಮ್ಮ ಹೆಸರನ್ನು ಪ್ರದರ್ಶಿಸುವ ಬೋರ್ಡ್ ಹಾಕುತ್ತಿದ್ದಾರೆ. ಹಾಗೆಯೇ "ಸರ್" ಮತ್ತು "ಮೇಡಂ" ಗೆ ಪರ್ಯಾಯ ಪದಗಳನ್ನು ನೀಡುವಂತೆ ಅಧಿಕೃತ ಭಾಷಾ ಇಲಾಖೆಯನ್ನು ವಿನಂತಿಸಿದ್ದಾರೆ. ಇಲ್ಲಿಯವರೆಗೆ, ವಯಸ್ಸಾದ ಅಧಿಕಾರಿಗಳನ್ನು ತಮ್ಮ ಹೆಸರಿನಿಂದ ಸಂಬೋಧಿಸುವಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಅವರು ಮಲಯಾಳಂನಲ್ಲಿ ''ಚೇಟನ್‌'' (ಅಣ್ಣ) ಅಥವಾ ''ಚೇಚಿ'' (ಅಕ್ಕ) ಎಂಬ ಸ್ನೇಹಪರ ಪದಗಳನ್ನು ಬಳಸಿ ಅವರನ್ನು ಕರೆಯಬಹುದು ಎಂದು ಕೂಡಾ ಹೇಳಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

English summary
The Mathur gram panchayat in Kerala’s Palakkad district has become the first local body in the country to ban the use of salutations such as 'sir' and 'madam'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X