ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ, ಆತಂಕದ ಛಾಯೆ

|
Google Oneindia Kannada News

ತಿರುವನಂತರಪುರಂ, ಸೆಪ್ಟೆಂಬರ್ 28: ಕೇರಳದಲ್ಲಿ ಭಾನುವಾರ 7 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದರೂ, ರಾಜ್ಯದ ಜನ ಆತಂಕಕ್ಕೀಡಾಗಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರ ಸೂಚಿಸಿರುವ ನಿಯಮವನ್ನು ಪಾಲಿಸದಿದ್ದರೆ ಮತ್ತೆ ಲಾಕ್‌ಡೌನ್ ಮಾಡಲಾಗುವುದು ಎಂದು ಕೇರಳ ಸರ್ಕಾರ ಎಚ್ಚರಿಸಿದೆ.

ವಿಶ್ವದಾದ್ಯಂತ ಕೊರೊನಾದಿಂದ ಮೃತಪಟ್ಟವರು 10 ಲಕ್ಷ: ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ ವಿಶ್ವದಾದ್ಯಂತ ಕೊರೊನಾದಿಂದ ಮೃತಪಟ್ಟವರು 10 ಲಕ್ಷ: ಯಾವ ದೇಶಗಳ ಮೇಲೆ ಹೆಚ್ಚು ಪರಿಣಾಮ

ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1.75 ಲಕ್ಷದಟ್ಟಿದೆ. ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಮಾತನಾಡಿ, ಜನರು ಅದೆಷ್ಟು ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಬೇರೆ ಆಯ್ಕೆಗಳಿಲ್ಲ, ಹೀಗೆಯೇ ಮುಂದುವರೆದರೆ ಮತ್ತೆ ಲಾಕ್‌ಡೌನ್ ವಿಧಿಸಲಾಗುವುದು.

Kerala Now Has Fourth Highest COVID 19 Active Cases Among States

ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಪಡುತ್ತಿರುವ ಪ್ರಯತ್ನಕ್ಕೆ ಜನರು ಸ್ಪಂದಿಸುತ್ತಿಲ್ಲ, ಹಾಗೆಯೇ ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಳ್ಳುತ್ತಿರುವ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಅಕ್ರಮ ಚಿನ್ನ ಸಾಗಣೆಯಲ್ಲಿ ಶಿಕ್ಷಣ ಸಚಿವ ಕೆಟಿ ಜಲೀಲ್ ಅವರ ಪಾತ್ರವಿದೆ, ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಹೇಳಿ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್, ಹಾಗೂ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಸೆಪ್ಟೆಂಬರ್ ಸುಮಾರು ಒಂದು ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೃತಪಟ್ಟವರಲ್ಲಿ ಶೇ.70ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.

ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ವೇಗವಾಗಿ ಏರಿಕೆ ಕಾಣುತ್ತಿದ್ದು ಕಳೆದ 24 ಗಂಟೆಗಳಲ್ಲಿ 82,170 ಹೊಸ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಜೊತೆಗೆ 1,039 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು 60 ಲಕ್ಷ ದಾಟಿದೆ.

ಇನ್ನು ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ ಈಗಾಗಲೇ 5,01,6521 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ 9,62,640 ಸಕ್ರಿಯ ಪ್ರಕರಣಗಳಿದ್ದು, ಇದುರವರೆಗೆ 95,542 ಜನರು ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Recommended Video

UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

English summary
With Kerala once again reporting more than 7,000 new cases on Sunday, the state government has warned of another complete lockdown if people did not follow the norms of physical distancing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X