ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಎಂಇಎಸ್ ಶಾಲಾ, ಕಾಲೇಜು ಆವರಣದಲ್ಲಿ ಬುರ್ಖಾ ನಿಷೇಧ

|
Google Oneindia Kannada News

ತಿರುವನಂತಪುರಂ, ಮೇ 3: ಕೇರಳದ ಮುಸ್ಲಿಂ ಎಜುಕೇಷನ್ ಸೊಸೈಟಿ(ಎಂಇಎಸ್) ಆವರಣದಲ್ಲಿ ಬುರ್ಖಾ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2019-20) ಜಾರಿಗೆ ಬರುವಂತೆ ತನ್ನೆಲ್ಲ ಶಾಲೆ, ಕಾಲೇಜುಗಳ ಆವರಣದಲ್ಲಿ ಮುಸ್ಲಿಂ ಬಾಲಕಿಯರು ಮತ್ತು ತರುಣಿಯರು ಬುರ್ಖಾ ಧರಿಸುವುದನ್ನು ನಿಷೇಧಿಸಿ ಆದೇಶಿಸಿದೆ.

ಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧ ಆತ್ಮಾಹುತಿ ಬಾಂಬ್ ದಾಳಿ: ಶ್ರೀಲಂಕಾದಲ್ಲಿ ಇಂದಿನಿಂದ ಬುರ್ಖಾ ನಿಷೇಧ

ವೃತ್ತಿಯಲ್ಲಿ ವೈದ್ಯರಾಗಿರುವ ಎಂಇಎಸ್​ ಅಧ್ಯಕ್ಷ ಫಜಲ್​ ಗಫೂರ್​ ಕಳೆದ ತಿಂಗಳು ಈ ಆದೇಶವನ್ನು ಹೊರಡಿಸಿದ್ದು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳ ವರ್ಗಗಳೆರಡಕ್ಕೂ ಈ ಆದೇಶ ಅನ್ವಯವಾಗುವುದಾಗಿ ಹೇಳಿದ್ದಾರೆ.

Kerala Muslim Education Group Bans Face Veils On Campuses

ನಾವು ಕೇರಳ ಇಸ್ಲಾಂ ಧರ್ಮವನ್ನು ಪಾಲಿಸೋಣ. ಮಧ್ಯಪ್ರಾಚ್ಯ ಇಸ್ಲಾಂ ಧರ್ಮದ ನೀತಿನೇಮಗಳನ್ನಲ್ಲ. ಸಂಪ್ರದಾಯವಾದಿ ಮುಸ್ಲಿಂ ಗುಂಪುಗಳು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ಐದು ವರ್ಷಗಳಿಂದ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿವೆ. ಈ ಪಿಡುಗನ್ನು ನಿಯಂತ್ರಿಸಲು ಈಗ ನಿರ್ಧರಿಸಿದ್ದೇವೆ. ಧರಿಸುವ ಉಡುಪು ಸಭ್ಯವಾಗಿರಬೇಕು. ಮುಖವನ್ನು ಮುಚ್ಚಿಕೊಳ್ಳುವ ಯಾವುದೇ ಬಟ್ಟೆಗಳನ್ನು ಧರಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇರಳದ ಜನಪ್ರಿಯ ಮುಸ್ಲಿಂ ಸಂಘಟನೆ ಸಂಸ್ಥಾ ಕೇರಳ ಜಮೈತುಲ್ಲಾ ಉಲ್ಲಮಾ ಎಂಇಎಸ್​ ಅಧ್ಯಕ್ಷರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಬುರ್ಖಾ ಧರಿಸುವುದು ಧಾರ್ಮಿಕ ವಿಚಾರ. ಈ ಕುರಿತು ನಿರ್ಧಾರ ಕೈಗೊಳ್ಳಲು ಧಾರ್ಮಿಕ ಸಂಸ್ಥೆಗಳಿಗೆ ಮಾತ್ರವೇ ಅಧಿಕಾರ ಇದೆ ಎಂದು ತಿಳಿಸಿದ್ದಾರೆ.

English summary
A Muslim educational group in Kerala has banned its students from covering their faces with clothing on the campuses of its institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X