ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ತೆರಿಗೆ ದುಡ್ಡಿನಲ್ಲಿ ಈ ಸಚಿವರುಗಳಿಗೆ ಕಾರ್ ಟೈರ್ ಬದಲಾಯಿಸುವುದೇ ದೊಡ್ಡ ಚಟ

|
Google Oneindia Kannada News

ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ಎನ್ನುವ 'ಗುಂಡಿಯೊಳಗಿನ ಹೈವೇ'ಯಲ್ಲಿ ಪ್ರಯಾಣಿಸಿದರೆ, ಬಹುಷಃ ನಾಲ್ಕೈದು ತಿಂಗಳಿಗೊಮ್ಮೆ ವಾಹನದ ಟೈರ್ ಅನ್ನು ಬದಲಾಯಿಸುವ ಪ್ರಮೇಯ ಬರಬಹುದು.

ಆದರೆ, ಅದ್ಯಾವುದೂ ಇಲ್ಲದೇ, ಎರಡೂವರೆ ವರ್ಷದಲ್ಲಿ ಕಾರಿನ ಟೈರ್ ಅನ್ನು ಮೂವತ್ತನಾಲ್ಕು ಬಾರಿ ಬದಲಾಯಿಸುತ್ತಾರೆ, ಅದೂ ಸಾರ್ವಜನಿಕರ ತೆರೆಗೆ ದುಡ್ಡಲ್ಲಿ ಅಂದರೆ, ಅದಕ್ಕೆ ಏನನ್ನೋಣ?

ಹೀಗೆ.. ಬೇಕಾಬಿಟ್ಟಿ ಕಾರಿನ ಟೈರ್ ಬದಲಾಯಿಸಿದವರು, ಕೇರಳದ ಇಂಧನ ಸಚಿವ ಎಂ.ಎಂ.ಮಣಿ. ಇದಕ್ಕಾಗಿ ಸರಕಾರೀ ಬೊಕ್ಕಸದಿಂದ ಸಂದ ದುಡ್ಡು ಬರೋಬ್ಬರಿ 3.4 ಲಕ್ಷ ರೂಪಾಯಿ. ಇವರೊಬ್ಬರೇ ಹೀಗೆ ಅಲ್ಲ, ಇನ್ನೂ ಒಬ್ಬರು ಇದೇ ರೀತಿ ಟೈರ್ ಬದಲಾಯಿಸಿದವರ ಪಟ್ಟಿಯಲ್ಲಿದ್ದಾರೆ.

ಮೂರುವರೆ ವರ್ಷ ನಾನೇ ಸಿಎಂ: ಯಡಿಯೂರಪ್ಪ ವಿಶ್ವಾಸಕ್ಕೆ ಷರಾ ಬರೆದ ಅಂಶಗಳುಮೂರುವರೆ ವರ್ಷ ನಾನೇ ಸಿಎಂ: ಯಡಿಯೂರಪ್ಪ ವಿಶ್ವಾಸಕ್ಕೆ ಷರಾ ಬರೆದ ಅಂಶಗಳು

ಇನ್ನೋವಾ ಕ್ರಿಸ್ಟಾ ಕಾರನ್ನು ಹೊಂದಿರುವ ಸಚಿವ ಮಣಿಯವರ ವಾಹನದ ನೊಂದಾಣಿ ಸಂಖ್ಯೆ ಕೆಎಲ್ - 01-ಸಿಬಿ - 8340. ಈ ಸುದ್ದಿ ವ್ಯಾಪಕ ಟೀಕೆಗೆ ಒಳಗಾಗುತ್ತಿದ್ದಂತೇ, ಸಚಿವರು ನೀಡಿದ ಸಮಜಾಯಿಷಿ ಹೀಗಿದೆ..

ಪಿಣರಾಯಿ ಸರಕಾರದ ಸಚಿವ

ಪಿಣರಾಯಿ ಸರಕಾರದ ಸಚಿವ

ಕೇರಳದ ಎರ್ನಾಕುಲಂ ಮೂಲದ ವ್ಯಕ್ತಿ, ಪಿಣರಾಯಿ ಸರಕಾರದ ಸಚಿವರ ವಾಹನ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ, RTIಗೆ ಅರ್ಜಿ ಸಲ್ಲಿಸಿದ್ದರು. ಹಲವು ಸಚಿವರ ವಾಹನ ವೆಚ್ಚದ ಬಗ್ಗೆ ಮಾಹಿತಿ ಬಂದಿದ್ದು, ಇದರಲ್ಲಿ ಇಂಧನ ಸಚಿವ ಮಣಿ, ಅವರದ್ದು ಎಲ್ಲಾ ಸಚಿವರ ಖರ್ಚುವೆಚ್ಚ ಮೀರಿಸುವಂತದ್ದು.

ಸಚಿವ ಮಣಿ ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ

ಸಚಿವ ಮಣಿ ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ

ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ, ಸಚಿವ ಮಣಿ ಫೇಸ್ ಬುಕ್ ನಲ್ಲಿ ಸ್ಪಷ್ಟೀಕರಣ ನೀಡಿದ್ದು ಹೀಗೆ, "ಸಚಿವನಾಗಿರುವುದರಿಂದ ತುಂಬಾ ಕಡೆ ಪ್ರಯಾಣಿಸಬೇಕಾಗುತ್ತದೆ. ಈ ಅವಧಿಯಲ್ಲಿ ನನ್ನ ಕಾರು ಸುಮಾರು 1.2ಲಕ್ಷ ಕಿಲೋಮೀಟರ್ ಪ್ರಯಾಣಿಸಿದೆ" ಎಂದು.

15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಅರಣ್ಯಖಾತೆಯ ಸಚಿವ ಕೆ.ರಾಜು

ಅರಣ್ಯಖಾತೆಯ ಸಚಿವ ಕೆ.ರಾಜು

ಸಚಿವ ಮಣಿ ನಂತರ, ರಾಜ್ಯದ ಅರಣ್ಯಖಾತೆಯ ಸಚಿವ ಕೆ.ರಾಜು ಕೂಡಾ ಹಿಂದೆ ಬಿದ್ದಿಲ್ಲ. ಕಳೆದ ಮೂವತ್ತು ತಿಂಗಳಲ್ಲಿ, ಈ ಸಚಿವ ಬೇರೆ ಬೇರೆ ಸಂದರ್ಭದಲ್ಲಿ ಹತ್ತೊಂಬತ್ತು ಬಾರಿ ಟೈರ್ ಬದಲಾಯಿಸಿದ್ದಾರೆ ಎನ್ನುವ ಮಾಹಿತಿಯೂ RTI ಮೂಲಕ ಲಭ್ಯವಾಗಿದೆ.

10-13ಸಾವಿರ ರೂಪಾಯಿ ಖರ್ಚು

10-13ಸಾವಿರ ರೂಪಾಯಿ ಖರ್ಚು

ಪ್ರತೀಬಾರಿ ಟೈರ್ ಬದಲಾಯಿಸಿದರೆ, ಸರಾಸರಿ 10-13ಸಾವಿರ ರೂಪಾಯಿ ಖರ್ಚು ತಗಲಿದರೆ, ಈ ಸಚಿವರುಗಳು ಬದಲಾಯಿಸಿದ ಕಾರ್ ಟೈರಿನ ದುಡ್ಡು ಲಕ್ಷ ಲಕ್ಷ ರೂಪಾಯಿಯನ್ನು ದಾಡುತ್ತದೆ. ನಾವು ಪ್ರಯಾಣಿಸುವ ಹಾದಿ ಕೆಲವೊಮ್ಮೆ ಅರಣ್ಯ ಪ್ರದೇಶವನ್ನೂ ಸಾಗಿ ಹೋಗಬೇಕಾಗುತ್ತದೆ. ಹಾಗಾಗಿ, ಟೈರ್ ಬಾಳಿಕೆ ಬರುವುದಿಲ್ಲ ಎನ್ನುವ ಸಮಜಾಯಿಷಿಯನ್ನೂ ಸಚಿವರುಗಳು ನೀಡುತ್ತಾರೆ.

ಕೇರಳ ಈ ಇಬ್ಬರು ಸಚಿವರುಗಳ ಟೈರ್ ಬದಲಾವಣೆ

ಕೇರಳ ಈ ಇಬ್ಬರು ಸಚಿವರುಗಳ ಟೈರ್ ಬದಲಾವಣೆ

ಒಟ್ಟಿನಲ್ಲಿ, ಕೇರಳ ಈ ಇಬ್ಬರು ಸಚಿವರುಗಳ ಟೈರ್ ಬದಲಾವಣೆ, ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಟೀಕೆಗೂ ಗುರಿಯಾಗುತ್ತದೆ. ಸಾರ್ವಜನಿಕರ ದುಡ್ಡನ್ನು ಖರ್ಚು ಮಾಡಲು ಒಂದು ರೀತಿನೀತಿ ಬೇಡವೇ ಎನ್ನುವ ಆಕ್ರೋಶಕ್ಕೂ ಗುರಿಯಾಗಿದೆ.

English summary
Kerala Minister’s car got 34 tyre changes in 30 months costing Rs 3.4 lakh And Another Minister 19 Times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X