• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ

|

ತಿರುವನಂತಪುರಂ, ಏಪ್ರಿಲ್ 13: ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ ನೀಡಿದ್ದಾರೆ.

ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿ ಬೆನ್ನಲ್ಲೇ ಅವರು ರಾಜೀನಾಮೆ ಘೋಷಿಸಿದ್ದಾರೆ.

ಈ ಹಿಂದೆ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಹಾಗೂ ಇತರರಿಗೆ ನೆರವಾದ ಆರೋಪದ ಮೇಲೆ ಜಲೀಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಜಲೀಲ್ ಅವರ ಸೋದರ ಸಂಬಂಧಿ ಆದೀಬ್ ಎಂಬುವವರಿಗೆ ಕೇರಳ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ ಎಂದು ಮುಸ್ಲಿಂ ಲೀಗ್ ನಾಯಕರು 2018ರಲ್ಲಿ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ಆಪ್ತರಿಗೆ ಸಹಾಯ ಮಾಡಿದ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಮ್ಮ ರಾಜೀನಾಮೆಯನ್ನು ಕೆಟಿ ಜಲೀಲ್, ಫೇಸ್‌ಬುಕ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಲೋಕಾಯುಕ್ತ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ.

English summary
In a setback to Chief Minister Pinarayi Vijayan's government, the Kerala Higher Education Minister, KT Jaleel, today resigned days after the state Lokayukta held him guilty of "nepotism, abuse of power, favouritism" and stated that the "minister should not continue in his post
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X