ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: ಒಂದೇ ವ್ಯಕ್ತಿಗೆ ಆರು ತಿಂಗಳಲ್ಲಿ ಮೂರು ಬಾರಿ ಕೊರೊನಾ ಸೋಂಕು

|
Google Oneindia Kannada News

ತ್ರಿಶೂರ್, ಸೆಪ್ಟೆಂಬರ್ 25: ಕೊರೊನಾ ವೈರಸ್ ಪಾಸಿಟಿವ್ ಬಂದು ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲಿದ ಕೆಲವು ಪ್ರಕರಣಗಳು ವರದಿಯಾಗಿವೆ, ಕೇರಳದಲ್ಲಿ 38 ವರ್ಷದ ವ್ಯಕ್ತಿಯೊಬ್ಬರಿಗೆ ಆರು ತಿಂಗಳಲ್ಲಿ ಮೂರನೇ ಬಾರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.

ಕೇರಳದ ಪೊನ್ನುಕ್ಕರದ ಪಳವೆಲಿಲ್ ಸಾವಿಯೋ ಜೋಸೆಫ್ (38) ಮಸ್ಕತ್‌ನಲ್ಲಿ ಕೆಲಸ ಮಾಡುವಾಗ ಸೋಂಕಿಗೆ ಒಳಗಾಗಿದ್ದರು. ಬಳಿಕ ಗುಣಮುಖರಾಗಿ ಕೇರಳಕ್ಕೆ ಮರಳಿದ್ದರು. ಇಲ್ಲಿ ಎರಡು ಬಾರಿ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಅವರು ಆರ್‌ಟಿ-ಪಿಸಿಆರ್ (ರಿಯಲ್ ಟೈಮ್ ಪಾಲಿಮೆರಸ್ ಚೈನ್ ರಿಯಾಕ್ಷನ್) ಪರೀಕ್ಷೆಗಳಿಗೆ ಒಳಪಟ್ಟಿದ್ದರು. ಈ ಪ್ರಕರಣದ ಸಮಗ್ರ ವಿಶ್ಲೇಷಣೆ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ ಕೊರೊನಾ ವೈರಸ್ ಕೆಲವರ ಜೀವಕ್ಕೆ ಮಾತ್ರ ಕುತ್ತು ಏಕೆ? ಇಲ್ಲಿದೆ ಮಾಹಿತಿ

'ಮಸ್ಕತ್‌ನಲ್ಲಿದ್ದಾಗ ಫೆಬ್ರವರಿ ಅಂತ್ಯದಲ್ಲಿ ನನಗೆ ಕೆಲವು ಲಕ್ಷಣಗಳು ಉಂಟಾಗಿದ್ದವು. ಚೀನಾಕ್ಕೆ ಪ್ರಯಾಣಿಸಿದ್ದ ಸ್ನೇಹಿತನ ಸಂಪರ್ಕಕ್ಕೆ ಬಂದಿದ್ದೆ. ಆತನಿಗೆ ನ್ಯುಮೋನಿಯಾಕ್ಕೆ ಚಿಕಿತ್ಸೆ ನಿಡಲಾಗಿತ್ತು. ಮೂರು ವಾರದ ಬಳಿಕ ನನಗೂ ಅದೇ ರೀತಿಯ ಲಕ್ಷಣಗಳು ಕಂಡುಬಂದವು. ಜ್ವರ, ಕೆಮ್ಮು, ಗಂಟಲು ಮತ್ತು ಎದೆ ನೋವು ಹಾಗೂ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಆದರೆ ಅದು ಕೊರೊನಾ ಎಂದು ಆಸ್ಪತ್ರೆ ಗುರುತಿಸಿರಲಿಲ್ಲ' ಎಂದು ಅವರು ತಿಳಿಸಿದ್ದಾರೆ. ಮುಂದೆ ಓದಿ.

ಭಾರತದಲ್ಲಿ ಯುದ್ಧಗಳ ಸಾವಿಗಿಂತಲೂ ಕೊರೊನಾ ಸಾವಿನ ಸಂಖ್ಯೆ ಹೆಚ್ಚುಭಾರತದಲ್ಲಿ ಯುದ್ಧಗಳ ಸಾವಿಗಿಂತಲೂ ಕೊರೊನಾ ಸಾವಿನ ಸಂಖ್ಯೆ ಹೆಚ್ಚು

ಕೇರಳಕ್ಕೆ ಮರಳಿದ್ದರು

ಕೇರಳಕ್ಕೆ ಮರಳಿದ್ದರು

ಸಾವಿಯೋ ಅವರ ಕೆಲಸ ಮಾಡುತ್ತಿದ್ದ ಕಂಪೆನಿಯ ಬಹುತೇಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಐದು ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಜೂನ್ 28ರಂದು ಅವರು ಕೇರಳಕ್ಕೆ ಮರಳಿದ್ದರು. ಕ್ವಾರೆಂಟೈನ್‌ನಲ್ಲಿದ್ದ ಅವರು ಜುಲೈ 18ರಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಾಗ ಪಾಸಿಟಿವ್ ಎಂದು ವರದಿ ಬಂದಿತ್ತು.

ಎರಡನೆಯ ಬಾರಿ ಪಾಸಿಟಿವ್

ಎರಡನೆಯ ಬಾರಿ ಪಾಸಿಟಿವ್

ತ್ರಿಶ್ಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಗಸ್ಟ್‌ 1ರಂದು ಬಿಡುಗಡೆಯಾಗಿದ್ದರು. ಆದರೆ ಉಸಿರಾಟದ ಸಮಸ್ಯೆ ಹಾಗೂ ಎದೆ ನೋವು ಮತ್ತೆ ಕಾಣಿಸಿಕೊಂಡಿದ್ದರಿಂದ ಸೆ. 1ರಂದು ಪುನಃ ಪರೀಕ್ಷೆಗೆ ಒಳಗಾದರು. ಆಗ ಮತ್ತೆ ಪಾಸಿಟಿವ್ ಕಂಡುಬಂದಿತ್ತು. ಈಗ ಚಿಕಿತ್ಸೆ ಪಡೆದು ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದರಿಂದ ಸೆ. 11ರಂದು ಅವರು ಬಿಡುಗಡೆಯಾಗಿದ್ದರು.

ಸೋಂಕು ಮರುಕಳಿಸಿದ್ದು ಹೇಗೆ?

ಸೋಂಕು ಮರುಕಳಿಸಿದ್ದು ಹೇಗೆ?

ಗುಣಮುಖರಾಗಿ ಯಾರ ಸಂಪರ್ಕಕ್ಕೂ ಮತ್ತೆ ಬಾರದೆ ಇದ್ದಾಗಲೂ ಪುನಃ ಸೋಂಕು ಹೇಗೆ ಕಾಣಿಸಿಕೊಂಡಿತ್ತು ಎನ್ನುವುದರ ಬಗ್ಗೆ ಸಾವಿಯೋ ಹಾಗೂ ಆರೋಗ್ಯ ಸಿಬ್ಬಂದಿ ತಲೆಕೆಡಿಸಿಕೊಂಡಿದ್ದಾರೆ. ನಾಶವಾಗಿದೆ ಎಂದುಕೊಂಡಿದ್ದ ಸೋಂಕು ಮತ್ತೆಜೀವ ಪಡೆದುಕೊಂಡಿದೆಯೇ ಎನ್ನುವುದು ಗೊತ್ತಾಗಿಲ್ಲ.

Recommended Video

ಬಿಹಾರ್ election ಜಟಾಪಟಿ !! | Oneindia Kannada
ಪರೀಕ್ಷೆಗಳು ನಿಖರ ಫಲಿತಾಂಶ ನೀಡುವುದಿಲ್ಲ

ಪರೀಕ್ಷೆಗಳು ನಿಖರ ಫಲಿತಾಂಶ ನೀಡುವುದಿಲ್ಲ

ವೈರಸ್‌ಗಳ ಅವಶೇಷಗಳು ದೇಹದೊಳಗೆ 60 ದಿನಕ್ಕೂ ಹೆಚ್ಚು ಕಾಲ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಆಂಟಿಜೆನ್ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸಂಪೂರ್ಣ ಪರಿಣಾಮಕಾರಿ ಎನ್ನಲಾಗದು. ಪರೀಕ್ಷೆಗಳಲ್ಲಿ ಶೇ 30-70ರಷ್ಟು ತಪ್ಪುಗಳು ಕಾಣಿಸಬಹುದು. ಈ ಬಗ್ಗೆ ಇನ್ನೂ ಆಳವಾದ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ತ್ರಿಶ್ಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಿನ್ಸಿಪಾಲ್ ಎಂ.ಎ. ಆಂಡ್ರೂಸ್ ಹೇಳಿದ್ದಾರೆ.

English summary
A Kerala man who returned from Muscat has tested positive for coronavirus thrice in six months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X