ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡು 'ಸ್ವಾಮಿಯೇ ಶರಣಂ' ಎಂದ ಭಕ್ತ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 13: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು, ಓಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ ಮತ್ತೆ ರಣರಂಗವಾದ ಶಬರಿಮಲೆ: 70 ಕ್ಕೂ ಹೆಚ್ಚು ಜನ ಪೊಲೀಸ್ ವಶಕ್ಕೆ

ಬಿಜೆಪಿಯ ಸಿಕೆ ಪದ್ಮನಾಭನ್ ಎಂಬುವವರು ಆಯೋಜಿಸಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಣುಗೋಪಾಲ್ ನಾಯರ್ ಎಂಬ 49 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಆವೇಶಕ್ಕೊಳಗಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು 'ಸ್ವಾಮಿ ಶರಣಂ' ಎಂಬ ಮಂತ್ರ ಪಠಿಸುತ್ತ ಓಡುತ್ತಿದ್ದ.

'ಹಿಂದೂ ವಿರೋಧಿಯೆಂದು ರಾಜಕೀಯ ಮಾಡೋರನ್ನು ಒದ್ದೋಡಿಸಬೇಕು' 'ಹಿಂದೂ ವಿರೋಧಿಯೆಂದು ರಾಜಕೀಯ ಮಾಡೋರನ್ನು ಒದ್ದೋಡಿಸಬೇಕು'

ನಂತರ ಬೆಂಕಿ ಆರಿಸಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶೇ.60 ರಷ್ಟು ಸುಟ್ಟ ಗಾಯಗಳಿಂದ ಆತ ಪರಿತಪಿಸುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಡಿದ ಮತ್ತಿನಲ್ಲಿ ಆತ ಹೀಗೆ ಮಾಡಿದ್ದಾನೆ ಎಂದು ಪ್ರತಿಭಟನೆಯನ್ನು ಆಯೋಜಿಸಿದ್ದ ಪದ್ಮನಾಭನ್ ಹೇಳಿದ್ದಾರೆ.

Kerala: man sets himself on fire at BJP’s Sabarimala protest venue

ಸೆಪ್ಟೆಂಬರ್ 28 ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಈ ಮೂಲಕ ಹತ್ತರಿಂದ ಅರವತ್ತು ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧದ 800 ವರ್ಷಗಳ ಹಳೆಯ ಪದ್ಧತಿಗೆ ಸುಪ್ರೀಂ ಕೋರ್ಟ್ ತಿಲಾಂಜಲಿ ಬಿಟ್ಟಿತ್ತು.

ಬಂಧನಕ್ಕೊಳಗಾದ ರೆಹನಾ ಫಾತಿಮಾ ಉದ್ಯೋಗದಿಂದ ಅಮಾನತುಬಂಧನಕ್ಕೊಳಗಾದ ರೆಹನಾ ಫಾತಿಮಾ ಉದ್ಯೋಗದಿಂದ ಅಮಾನತು

ಆದರೆ ಈ ದೇವಾಲಯಕ್ಕೆ ಋತುಮತಿಯಾಗುವ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸುತ್ತಿದ್ದು, ಅದಕ್ಕೆ ಬಿಜೆಪಿ ಬೆಂಬಲ ನೀಡಿದೆ.

English summary
On Thursday early morning, a 49-year-old man put himself on fire and ran towards the venue of a sit-in-protest by BJP leader CK Padmanabhan against the anti-Sabarimala stand taken by the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X