ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜಾನ್‌ನಲ್ಲಿ ಐಫೋನ್‌ ಆರ್ಡರ್‌ ಮಾಡಿದರೆ ಬಂತು ಸೋಪು!

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್‌ 25: ಕೇರಳದಲ್ಲಿ ವ್ತಕ್ತಿಯೊಬ್ಬರು ಆ್ಯಪಲ್‌ ಐಫೋನ್‌ 12 ಅನ್ನು ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದು ಸೋಪು ಹಾಗೂ ಐದು ರೂಪಾಯಿಯ ನಾಣ್ಯ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಘಟನೆ ಈ ತಿಂಗಳ ಆರಂಭದಲ್ಲಿ ನಡೆದಿದೆ ಎಂದು ಕೂಡಾ ವರದಿಯು ಹೇಳಿದೆ.

ನೂರುಲ್‌ ಅಮೀನ್‌ ಎಂಬವರು ಹೆಚ್ಚಾಗಿ ಅಮೆಜಾನ್‌ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡುತ್ತಿದ್ದರು. ಅಕ್ಟೋಬರ್‌ 12 ರಂದು ಸುಮಾರು 70,900 ರೂಪಾಯಿ ಮೌಲ್ಯದ ಐಫೋನ್‌ ಅನ್ನು ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದರು. ಇದಕ್ಕಾಗಿ ಅಮೆಜಾನ್‌ ಪೇ ಕಾರ್ಡ್ ಅನ್ನು ಬಳಸಿದ್ದರು. ಆದರೆ ಅಕ್ಟೋಬರ್‌ 15 ರಂದು ಇದು ಡೆಲವರಿ ಆಗಿದೆ. ಆದರೆ 70,900 ರೂಪಾಯಿ ಮೌಲ್ಯದ ಐಫೋನ್‌ ಬದಲಾಗಿ ಸೋಪು ಹಾಗೂ ನಾಣ್ಯ ಅದರಲ್ಲಿ ಇತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.

ಡಿಸ್ಕೌಂಟ್ ಆಸೆಗೆ ಬಿದ್ದವರ ದುಡ್ಡಿಗೆ ಕನ್ನ ಹಾಕುವ ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆಡಿಸ್ಕೌಂಟ್ ಆಸೆಗೆ ಬಿದ್ದವರ ದುಡ್ಡಿಗೆ ಕನ್ನ ಹಾಕುವ ನಕಲಿ ವೆಬ್ ಸೈಟ್ ವಂಚಕ ಜಾಲ ಪತ್ತೆ

ಇನ್ನು ಈ ಹಣವನ್ನು ಅಮೆಜಾನ್‌ ತನ್ನ ಗ್ರಾಹಕರಿಗೆ ವಾಪಾಸ್‌ ನೀಡಿದೆ ಎಂದು ಕೂಡಾ ವರದಿ ಆಗಿದೆ. ಹೈದಾರಾಬಾದ್‌ನಿಂದ ಈ ಪ್ಯಾಕೇಜ್‌ ರವಾನೆಯಾದ ಬಳಿಕ ಒಂದು ದಿನ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ನೂರುಲ್‌ ಅಮೀನ್‌ ಅವರಿಗೆ ಅನುಮಾನ ಉಂಟಾಗಿದೆ. ಹೆಚ್ಚಾಗಿ ಅಮೆಜಾನ್‌ ಅನ್ನು ಬಳಕೆ ಮಾಡಿ ತಿಳಿದಿರುವ ನೂರುಲ್‌ ಅಮೀನ್‌ ಆನ್‌ಲೈನ್‌ ಆರ್ಡರ್‌ ಮಾಡಿದ ಬಳಿಕ ಅದು ಎಂದು ತಲುಪುತ್ತದೆ ಎಂದು ತಿಳಿದಿದ್ದರು.

 Kerala man orders iPhone from Amazon, gets soap bar, ₹5 coin

ಹೆಚ್ಚಾಗಿ ಹೈದರಾಬಾದ್‌ನಿಂದ ಕೊಚ್ಚಿಗೆ ಬರಲು ಎರಡು ದಿನಗಳು ಬೇಕಾಗುತ್ತದೆ. ಆದರೆ ಈ ಐಫೋನ್‌ ಬರುವಾಗ ಮೂರು ದಿನಗಳು ತಗುಲಿದೆ. ಈ ಹಿನ್ನೆಲೆ ನೂರುಲ್‌ ಅಮೀನ್‌ ಅವರಿಗೆ ಅನುಮಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನೂರುಲ್‌ ಅಮೀನ್‌ ಅಮೆಜಾನ್‌ನಿಂದ ಈ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಸಾಮಾಗ್ರಿಯನ್ನು ವಿತರಣೆ ಮಾಡುವ ವ್ಯಕ್ತಿಯ ಎದುರಲ್ಲೇ ಈ ಪ್ಯಾಕೇಜ್‌ ಅನ್ನು ತೆರೆದಿದ್ದಾರೆ.

ಈ ಸಂದರ್ಭದಲ್ಲಿ ಸಾಕ್ಷಿಗೆಂದು ನೂರುಲ್‌ ಅಮೀನ್‌ ವಿಡಿಯೋವನ್ನು ಕೂಡಾ ಮಾಡಿದ್ದಾರೆ. ಇನ್ನು ಆ ಪಾರ್ಸೆಲ್‌ ಒಳಗೆ ಇದ್ದ ಐಟಂಗಳು ಐಫೋನ್‌ನ ತೂಕವನ್ನು ಹೋಲುತ್ತದೆ ಎಂದು ಮಾತೃಭೂಮಿಗೆ ನೂರುಲ್‌ ಅಮೀನ್‌ ತಿಳಿಸಿದ್ದಾರೆ. ಈ ಪ್ಯಾಕೇಜ್‌ನಲ್ಲಿ ನೂರುಲ್‌ ಅಮೀನ್‌ ಆರ್ಡರ್‌ ಮಾಡಿದ ಆ್ಯಪಲ್‌ ಐಫೋನ್‌ 12 ಬದಲಾಗಿ ಜನಪ್ರಿಯವಾದ ಪಾತ್ರೆ ತೊಳೆಯುವ ಬಾರ್‌ ವಿಮ್‌, ಸಾಬೂನಿ ತುಂಡು ಹಾಗೂ ಐದು ರೂಪಾಯಿಯ ಒಂದು ನಾಣ್ಯ ಇತ್ತು.

ಶೃಂಗೇರಿ: ಬುಕ್ ಮಾಡಿದ್ದು ಮೊಬೈಲ್, ಬಾಕ್ಸ್ ನಲ್ಲಿದ್ದಿದ್ದು ಆಲೂ, ಕಲ್ಲುಶೃಂಗೇರಿ: ಬುಕ್ ಮಾಡಿದ್ದು ಮೊಬೈಲ್, ಬಾಕ್ಸ್ ನಲ್ಲಿದ್ದಿದ್ದು ಆಲೂ, ಕಲ್ಲು

ಇದನ್ನು ಗಮನಿಸಿದ ಕೂಡಲೇ ನೂರ್‌ ಅಮೀನ್‌ ಅಮೆಜಾನ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದು, ಸೆಪ್ಟೆಂಬರ್ 25 ರಿಂದ ಜಾರ್ಖಂಡ್‌ನಲ್ಲಿ ಯಾರೋ ಈ ಐಫೋನ್‌ ಅನ್ನು ಬಳಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ್ದಾರೆ. ನೂರುಲ್‌ ಅಮೀನ್‌ ಈ ಫೋನ್‌ ಅನ್ನು ಬುಕ್‌ ಮಾಡುವ 15 ದಿನಗಳ ಮೊದಲೇ ಈ ಫೋನ್‌ ಅನ್ನು ಜಾರ್ಖಂಡ್‌ನಲ್ಲಿ ಬಳಕೆ ಮಾಡಲಾಗಿದೆ.

ಸ್ಟಾಕ್‌ ಮುಗಿದಿದೆ, ಹಣ ವಾಪಾಸ್‌ ನೀಡುತ್ತೇವೆ ಎಂದ ಮಾರಾಟಗಾರರು

"ನಾವು ಅಮೆಜಾನ್‌ ಅಧಿಕಾರಿಗಳು ಮತ್ತು ತೆಲಂಗಾಣ ಮೂಲದ ಮಾರಾಟಗಾರರನ್ನು ಸಂಪರ್ಕ ಮಾಡಿದೆವು. ಈ ವರ್ಷದ ಸೆಪ್ಟೆಂಬರ್‌ 25 ರಿಂದಲೇ ಈ ಫೋನ್‌ ಅನ್ನು ಜಾರ್ಖಂಡ್‌ನಲ್ಲಿ ಬಳಕೆ ಮಾಡಲಾಗುತ್ತಿದೆ. ಆದರೆ ಇದನ್ನು ಆರ್ಡರ್‌ ಮಾಡಿರುವುದು ಅಕ್ಟೋಬರ್‌ನಲ್ಲಿ. ನಾವು ಈ ನಿಟ್ಟಿನಲ್ಲಿ ಮಾರಾಟಗಾರರನ್ನು ಸಂಪರ್ಕ ಮಾಡಿದೆವು. ಆ ಫೋನ್‌ನ ಸ್ಟಾಕ್‌ ಮುಗಿದಿದೆ. ನೂರುಲ್‌ ಪಾವತಿ ಮಾಡಿದ ಹಣವನ್ನು ನಾವು ಹಿಂದಿರುಗಿಸಲಾಗುವುದು ಎಂದು ತಿಳಿಸಿದ್ದಾರೆ," ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತೃಭೂಮಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನೂರುಲ್‌ ಅಮೀನ್‌, "ಅಮೆಜಾನ್‌ ಪೇ ಕಾರ್ಡ್ ಮೂಲಕ ನಾನು ಆರ್ಡರ್‌ ಮಾಡಲು ಬಳಸಿದ್ದ ಹಣವನ್ನು ನನ್ನ ಖಾತೆಗೆ ಈಗ ಹಾಕಿದ್ದಾರೆ," ಎಂದು ತಿಳಿಸಿದ್ದಾರೆ. ಇನ್ನು ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಕೇರಳ ಪೊಲೀಸರು, "ಅಮೀನ್‌ಗೆ ಮಾರಾಟಗಾರರು ಹಣವನ್ನು ವಾಪಾಸ್‌ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ," ಎಂದಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Kerala man orders iPhone from Amazon, gets soap bar, ₹5 coin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X