ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ಶುರು

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 16: ಮುಂಬರುವ ಕೇರಳ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎನ್ನಲಾಗಿರುವ 'ದೇವರ ಸ್ವಂತ ನಾಡಿನ' ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಸಿಪಿಎಂ ನಾಯಕತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಗಳಿಗೆ ತಳಮಟ್ಟದಿಂದ ತಮ್ಮ ಬಲಾಬಲವನ್ನು ಕಂಡುಕೊಳ್ಳಲು ಇದು ವೇದಿಕೆಯಾಗಿದೆ.

941 ಗ್ರಾಮ ಪಂಚಾಯಿತಿಗಳ 15,962 ವಾರ್ಡ್‌ಗಳು, 152 ಬ್ಲಾಕ್ ಪಂಚಾಯತಿಗಳ 2080 ವಾರ್ಡ್‌ಗಳು, 14 ಜಿಲ್ಲಾ ಪಂಚಾಯಿತಿಗಳ 331 ವಿಭಾಗಗಳು, 86 ಮುನಿಸಿಪಾಲಿಟಿಗಳ 3078 ವಾರ್ಡ್‌ಗಳು ಮತ್ತು ಆರು ಮುನಿಸಿಪಲ್ ಕಾರ್ಪೊರೇಷನ್‌ಗಳ 414 ವಾರ್ಡ್‌ಗಳಿಗೆ ಚುನಾವಣೆ ನಡೆದಿದೆ. ಡಿಸೆಂಬರ್ 8, 10 ಮತ್ತು 14ರಂದು ಮೂರು ಹಂತಗಳಲ್ಲಿ ಸ್ಥಳೀಯ ಕದನಗಳಿಗೆ ಮತದಾನ ನಡೆದಿತ್ತು. 2015ರಲ್ಲಿ ನಡೆದಿದ್ದ ಚುನಾವಣೆಗಳಲ್ಲಿ ಶೇ 77.76ರಷ್ಟು ಮತದಾನ ನಡೆದಿದ್ದರೆ, ಈ ಬಾರಿ ಅದಕ್ಕಿಂತ ಕೊಂಚ ಕಡಿಮೆ ಶೇ 76ರಷ್ಟು ಮತದಾನ ನಡೆದಿದೆ.

ಲಸಿಕೆ ಉಚಿತವಾಗಿ ಹಂಚುತ್ತೇನೆ ಎಂದ ಸಿಎಂ, ವಿಪಕ್ಷಗಳು ಗರಂಲಸಿಕೆ ಉಚಿತವಾಗಿ ಹಂಚುತ್ತೇನೆ ಎಂದ ಸಿಎಂ, ವಿಪಕ್ಷಗಳು ಗರಂ

2015ರ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ 941 ಗ್ರಾಮ ಪಂಚಾಯಿತಿಗಳಲ್ಲಿ 551ರಲ್ಲಿ ಗೆಲುವು ಕಂಡಿತ್ತು. ಜತೆಗೆ 86 ಮುನಿಸಿಪಾಲಿಟಿಗಳಲ್ಲಿ 42ರಲ್ಲಿ, 14 ಜಿಲ್ಲಾ ಪಂಚಾಯಿತಿಗಳ ಪೈಕಿ 7ರಲ್ಲಿ, 152 ಬ್ಲಾಕ್ ಪಂಚಾಯಿತಿಗಳ ಪೈಕಿ 88ರಲ್ಲಿ ಮತ್ತು 6 ಕಾರ್ಪೊರೇಷನ್‌ಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿತ್ತು.

 Kerala Local Body Election Counting Begins

ಮತದಾರರ ಸಹಾಯಕ್ಕೆ ನಿಂತ ರೋಬೋಟ್; ಕೇರಳದಲ್ಲೊಂದು ಹೊಸ ಪ್ರಯೋಗ ಮತದಾರರ ಸಹಾಯಕ್ಕೆ ನಿಂತ ರೋಬೋಟ್; ಕೇರಳದಲ್ಲೊಂದು ಹೊಸ ಪ್ರಯೋಗ

ಎರಡನೆಯ ಸ್ಥಾನ ಪಡೆದಿದ್ದ ಯುಡಿಎಫ್, 362 ಪಂಚಾಯಿತಿಗಳು, 7 ಜಿಲ್ಲಾ ಪಂಚಾಯಿತಿಗಳು, 2 ಕಾರ್ಪೊರೇಷನ್, 40 ಮುನಿಸಿಪಾಲಿಟಿ ಮತ್ತು 63 ಬ್ಲಾಕ್ ಪಂಚಾಯಿತಿಗಳಲ್ಲಿ ಗೆಲುವು ಕಂಡಿತ್ತು. ಬಿಜೆಪಿ ಕೇವಲ 14 ಪಂಚಾಯಿತಿಗಳು ಮತ್ತು 1 ಮುನಿಸಿಪಾಲಿಟಿಯಲ್ಲಿ ಜಯಗಳಿಸಿತ್ತು.

English summary
The counting of votes for local body elections in Kerala has begun on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X