ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಹೊಸ ಐಡಿಯಾ

|
Google Oneindia Kannada News

ತಿರುವನಂತಪುರಂ, ಜುಲೈ 01: ಕೊರೊನಾ ಸೋಂಕಿನ ಕಾರಣವಾಗಿ ಕೇರಳದಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಕೊರೊನಾ ನಿರ್ಬಂಧಗಳಿಂದಾಗಿ ಹಾಗೂ ಸುರಕ್ಷತೆ ದೃಷ್ಟಿಯಿಂದ ಕೇರಳಕ್ಕೆ ಬರುವವರ ಸಂಖ್ಯೆ ತಗ್ಗಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಹೊಸ ಐಡಿಯಾ ಮಾಡಿದೆ.

ಇಲ್ಲಿಗೆ ಬರುವ ಪ್ರವಾಸಿಗರಿಗೆ ತಮ್ಮ ಕಾರಿನಲ್ಲೇ ಕುಳಿತು ಇಲ್ಲಿನ ಸ್ಥಳೀಯ ಖಾದ್ಯಗಳನ್ನು ಸವಿಯುವ ಅವಕಾಶ ಕಲ್ಪಿಸಿದೆ. ಬುಧವಾರದಿಂದ "ಇನ್‌-ಕಾರ್ ಡೈನಿಂಗ್" ಅವಕಾಶವನ್ನು ಪ್ರವಾಸಿಗರಿಗೆ ಬಿಡುಗಡೆ ಮಾಡಿದೆ. ಮುಂದೆ ಓದಿ...

 ಇನ್‌-ಕಾರ್ ಡೈನಿಂಗ್ ವ್ಯವಸ್ಥೆ

ಇನ್‌-ಕಾರ್ ಡೈನಿಂಗ್ ವ್ಯವಸ್ಥೆ

ಕೊರೊನಾ ಹಲವು ಉದ್ಯಮಗಳಿಗೆ ಪೆಟ್ಟು ನೀಡಿದೆ. ಹೊರಗೆ ತಿನ್ನುವ ಅಭ್ಯಾಸವೂ ಕಡಿಮೆಯಾಗಿದೆ. ಆದರೆ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ರಾಜ್ಯಗಳಿಗೆ ನುಂಗಲಾರದ ತುತ್ತಾಗಿದೆ. ಕೊರೊನಾ ಒಡ್ಡುವ ಈ ಸವಾಲುಗಳನ್ನು ಜಯಿಸುತ್ತಲೇ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೇರಳ ಮುಂದಾಗಿದ್ದು, ರಾಜ್ಯಾದ್ಯಂತ ಪ್ರವಾಸಿಗರಿಗೆ ಕಾರಿನಲ್ಲೇ ಕುಳಿತು ಊಟ-ತಿಂಡಿ ಸೇವನೆ ಮಾಡಲು ವ್ಯವಸ್ಥೆ ರೂಪಿಸಿದೆ. ಈ ವ್ಯವಸ್ಥೆ ಹೇಗಿರುತ್ತದೆ ಎಂದು ನೋಡಲು ಕೇರಳ ಪ್ರವಾಸೋದ್ಯಮ ಸಚಿವ ಪಿಎ ಮೊಹಮದ್ ರಿಯಾಸ್ ತಾವೇ ಇದನ್ನು ಪರೀಕ್ಷಿಸಿದ್ದಾರೆ.

ಬೆಂಗಳೂರಿನಲ್ಲಿ ಕೇರಳ ಪ್ರವಾಸೋದ್ಯಮ ಪ್ರಚಾರ ಅಭಿಯಾನಬೆಂಗಳೂರಿನಲ್ಲಿ ಕೇರಳ ಪ್ರವಾಸೋದ್ಯಮ ಪ್ರಚಾರ ಅಭಿಯಾನ

 ಸುರಕ್ಷಿತವಾಗಿ ಆಹಾರ ಸೇವಿಸಲು ಕ್ರಮ

ಸುರಕ್ಷಿತವಾಗಿ ಆಹಾರ ಸೇವಿಸಲು ಕ್ರಮ

"ಕೊರೊನಾದಿಂದ ಹೊಡೆತ ಕಂಡಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತೆ ದಾರಿಗೆ ತರಲು ಈ "ಇನ್ ಕಾರ್ ಡೈನಿಂಗ್" ಯೋಜನೆ ರೂಪಿಲಾಗಿದೆ. ಕೇರಳಕ್ಕೆ ಬರುವ ಪ್ರವಾಸಿಗರು ಈ ಯೋಜನೆಯನ್ನು ಬಳಸಿಕೊಳ್ಳಬಹುದಾಗಿದೆ. ಕೊರೊನಾ ನಡುವೆ ರೆಸ್ಟೊರೆಂಟ್‌, ಹೋಟೆಲ್‌ಗಳಲ್ಲಿ ಜನದಟ್ಟಣೆ ನಡುವೆ ಊಟ ತಿಂಡಿ ಸೇವಿಸುವ ಬದಲು ಸುರಕ್ಷಿತವಾಗಿ ಆಹಾರ ಸೇವನೆಗೆ ಈ ವ್ಯವಸ್ಥೆ ಮಾಡಲಾಗಿದೆ" ಎಂದು ಸಚಿವ ರಿಯಾಸ್ ವಿವರಣೆ ನೀಡುತ್ತಾರೆ.

 ಪ್ರವಾಸೋದ್ಯಮ ಇಲಾಖೆಯಿಂದ ಇನ್ನಷ್ಟು ಯೋಜನೆಗಳು

ಪ್ರವಾಸೋದ್ಯಮ ಇಲಾಖೆಯಿಂದ ಇನ್ನಷ್ಟು ಯೋಜನೆಗಳು

ಪ್ರವಾಸೋದ್ಯಮದಿಂದ ಕೇರಳಕ್ಕೆ 11% ಎಸ್‌ಡಿಪಿ ದೊರೆಯುತ್ತದೆ. ಆದರೆ ಕೊರೊನಾ ಇದರ ಮೇಲೂ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿನಿಂದ ಹೊರಬರಲು, ಸಂಪೂರ್ಣ ಲಸಿಕೆ ನಂತರದ ಪ್ರವಾಸೋದ್ಯಮ ಹಾಗೂ ಹೊಸ ಪ್ರವಾಸೋದ್ಯಮ ತಾಣಗಳ ಅನ್ವೇಷಣೆ ಎಂಬ ಹೊಸ ಪರಿಕಲ್ಪನೆಗಳನ್ನೂ ಪ್ರವಾಸೋದ್ಯಮ ಇಲಾಖೆ ರೂಪಿಸುತ್ತಿದೆ. ಪ್ರತಿ ಪಂಚಾಯತ್‌ನಲ್ಲಿಯೂ ಹೊಸ ತಾಣಗಳನ್ನು ರೂಪಿಸುವ ವ್ಯವಸ್ಥೆ ಜಾರಿಗೊಳಿಸುವುದಾಗಿ ತಿಳಿಸಿದೆ.

ಏನಾಗುತ್ತಿದೆ? ಕೇರಳ ವಿವಿಗೆ ಪ್ರವೇಶ ಪಡೆಯಲು ದಾಖಲೆ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಅರ್ಜಿ!ಏನಾಗುತ್ತಿದೆ? ಕೇರಳ ವಿವಿಗೆ ಪ್ರವೇಶ ಪಡೆಯಲು ದಾಖಲೆ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಅರ್ಜಿ!

 ಕೆಟಿಡಿಸಿ ಹೋಟೆಲ್‌ಗಳಲ್ಲಿ ವ್ಯವಸ್ಥೆ ಜಾರಿ

ಕೆಟಿಡಿಸಿ ಹೋಟೆಲ್‌ಗಳಲ್ಲಿ ವ್ಯವಸ್ಥೆ ಜಾರಿ

ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಪರಂಪರೆ ಹಾಗೂ ಯಾತ್ರಾ ತಾಣಗಳನ್ನು ರೂಪಿಸುವ ಯೋಜನೆ ಜಾರಿಯಲ್ಲಿರುವುದಾಗಿ ಇಲಾಖೆ ತಿಳಿಸಿದೆ. ಇನ್ ಕಾರ್ ಡೈನಿಂಗ್ ವ್ಯವಸ್ಥೆಯನ್ನು ಕೆಟಿಡಿಸಿ ಹೋಟೆಲ್‌ ಗಳಲ್ಲಿ ಮಾಡಲಾಗಿದ್ದು, "ಮಿಷನ್ ಫೇಸ್‌ಲಿಫ್ಟ್" ಯೋಜನೆಯಡಿ ಆದ್ಯತೆ ಮೇರೆಗೆ ಹೋಟೆಲ್‌ಗಳ ಪರಿಷ್ಕರಣೆ ಮಾಡುತ್ತಿದೆ. ಫ್ಲೋಟಿಂಗ್ ರೆಸ್ಟೊರೆಂಟ್‌ಗಳ ಪರಿಕಲ್ಪನೆ ಜಾರಿಗೆ ತರುವುದಾಗಿ ಮಾಹಿತಿ ನೀಡಿದೆ.

English summary
Kerala tourism department launched in car dining to boost tourism and also to meet the challenges of corona virus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X