ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ಸೇರಿದ್ದ ಕೇರಳದ ಉಗ್ರ ಅಮೆರಿಕದ ಡ್ರೋನ್ ದಾಳಿಯಲ್ಲಿ ಸಾವು

|
Google Oneindia Kannada News

ತಿರುವನಂತಪುರಂ, ಜುಲೈ 31: ಸುಮಾರು ಎರಡು ವರ್ಷದ ಹಿಂದೆ ಕೇರಳದಿಂದ ತೆರಳಿ ಐಸಿಸ್ ಉಗ್ರ ಸಂಘಟನೆ ಸೇರಿದ್ದ ವ್ಯಕ್ತಿಯೊಬ್ಬ ಜುಲೈ 18ರಂದು ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಳ್ ಪಟ್ಟಣದ ನಿವಾಸಿಯಾಗಿದ್ದ ಮುಹಮ್ಮದ್ ಮುಹಾಸಿನ್, 2017ರ ಅಕ್ಟೋಬರ್‌ನಲ್ಲಿ ಐಸಿಸ್ ಸೇರಲು ಮನೆಬಿಟ್ಟಿದ್ದ. ಈಗ ಅಫ್ಘಾನಿಸ್ತಾನದ ಖೋರೊಸಾನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಪ್ರಮುಖ ಕಮಾಂಡರ್ ಹುಜೈಫಾ ಅಲ್ ಬಾಕಿಸ್ತಾನಿಯ ಜತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಬಾಕಿಸ್ತಾನಿ, ಅತ್ಯುನ್ನತ ತರಬೇತಿ ಪಡೆದಿರುವ ಪಾಕಿಸ್ತಾನದ ವ್ಯಕ್ತಿಯಾಗಿದ್ದಾನೆ. ಈಗ ಭಾರತದ ಅನೇಕ ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದನೆ ನೀಡಿದ್ದ.

ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಕಟ್ಟಲು ದುಬೈನಲ್ಲಿ ಹಣ ಸಂಗ್ರಹ ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಕಟ್ಟಲು ದುಬೈನಲ್ಲಿ ಹಣ ಸಂಗ್ರಹ

ಮುಹಾಸಿನ್‌ನ ಸಾವಿನ ಕುರಿತು ಕೇರಳದಲ್ಲಿರುವ ಆತನ ಕುಟುಂಬಕ್ಕೆ ಅಫ್ಘಾನಿಸ್ತಾನದಿಂದ ಅಪರಿಚಿತ ಸಂಖ್ಯೆಯೊಂದರಿಂದ ವಾಟ್ಸಾಪ್ ಮೂಲಕ ಮಾಹಿತಿ ನೀಡಲಾಗಿದೆ.

Kerala ISIS Man Muhammad Muhasin Died In Afghanistan US Drone Strikes

ಮಲಯಾಳಂನಲ್ಲಿಯೇ ಈ ಸಂದೇಶ ಬರೆಯಲಾಗಿದ್ದು, 'ನಿಮ್ಮ ಸಹೋದರ ಹುತಾತ್ಮನಾಗಲು ಬಯಸಿದ್ದ. ಅಲ್ಲಾಹು ಆತನ ಆಸೆಯನ್ನು ನೆರವೇರಿಸಿದ್ದಾನೆ. ಅಮೆರಿಕದ ಪಡೆಗಳು ಹತ್ತು ದಿನಗಳ ಹಿಂದೆ ನಡೆಸಿದ ಡ್ರೋನ್ ದಾಳಿಯಲ್ಲಿ ಆತ ಹುತಾತ್ಮನಾಗಿದ್ದಾನೆ' ಎಂದು ಹೇಳಲಾಗಿದೆ.

'ಈ ಮಾಹಿತಿಯನ್ನು ಪೊಲೀಸರಿಗೆ ದಯವಿಟ್ಟು ನೀಡಬೇಡಿ. ಹಾಗೆ ಮಾಡಿದರೆ ಅವರು ನಿಮ್ಮ ಮನೆಗೆ ಬಂದು ನಿಮಗೆ ಕಷ್ಟ ಕೊಡಲು ಆರಂಭಿಸುತ್ತಾರೆ. ನಿಮ್ಮ ಸಹೋದರ ಇದನ್ನು ಬಯಸಿರಲಿಲ್ಲ' ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಕಾಸರಗೋಡು ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಹತ್ಯೆಕಾಸರಗೋಡು ಮೂಲದ ಐಸಿಸ್ ಉಗ್ರ ಅಫ್ಘಾನಿಸ್ತಾನದಲ್ಲಿ ಹತ್ಯೆ

ಎರಡು ವರ್ಷದ ಹಿಂದೆ ಜೂನ್ 15ರಂದು ಕೇರಳದ ಎಂಟು ಮಹಿಳೆಯರು ಸೇರಿದಂತೆ 40 ಮಂದಿ ಐಸಿಸ್ ಸೇರಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 98 ಮಂದಿ ಕೇರಳದ ಜನರು ಇಸ್ಲಾಮಿಕ್ ಸ್ಟೇಟ್ ಸೇರಿಕೊಂಡಿದ್ದಾರೆ. ಅವರಲ್ಲಿ 38 ಮಂದಿ ಹತ್ಯೆಯಾಗಿದ್ದು, 60 ಮಂದಿ ಇನ್ನೂ ಜೀವಂತವಾಗಿದ್ದಾರೆ. ಅವರು ಇಸ್ಲಾಮಿಕ್ ಸ್ಟೇಟ್‌ನಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರಿ ದಾಖಲೆಗಳು ಹೇಳಿವೆ.

English summary
Muhammad Muhasin frim Kerala's Edappal town, who joined ISIS 2 years back was died in an American drine strike in Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X