• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ

|
   Sabarimala Verdict : ಶಬರಿಮಲೈ ದೇಗುಲದಲ್ಲಿ ಅಯ್ಯಪ್ಪನ ಎದುರು ಕಣ್ಣೀರಿಟ್ಟ ಕೇರಳ ಐಜಿಪಿ | Oneindia Kannada

   ತುಲಾ ಮಾಸದ ಪೂಜೆಗಾಗಿ ಬುಧವಾರ (ಅ 17) ಸಂಜೆ ತೆರೆಯಲಾಗಿದ್ದ ಪುರಾಣಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಯನ್ನು, ಶಾಸ್ತ್ರೋಕ್ತವಾಗಿ ಸೋಮವಾರ (ಅ 22) ಸಂಜೆ ಮುಚ್ಚಲಾಗಿದೆ. ಮತ್ತೆ ನವೆಂಬರ್ ತಿಂಗಳಲ್ಲಿ ದೇವಾಲಯ ತೆರೆಯಲಾಗುತ್ತದೆ.

   ಬಹುಷಃ ಕಂಡುಕೇಳರಿಯದ ಪ್ರತಿಭಟನೆಗೆ ಸಾಕ್ಷಿಯಾದ ದೇವಾಲಯದ ಆವರಣವನ್ನು, ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಭಕ್ತರು ಮತ್ತು ದೇವಾಲಯದ ಪೂಜಾಕೈಂಕರ್ಯಗಳನ್ನು ನೋಡಿಕೊಳ್ಳುವ ತಂತ್ರಿಗಳು ಅನುವು ಮಾಡಿಕೊಡಲಿಲ್ಲ.

   ಮತ್ತೆ ಮುಚ್ಚಲಿದೆ ಶಬರಿಮಲೆ ಬಾಗಿಲು... ಐದು ದಿನಗಳಲ್ಲಿ ಆಗಿದ್ದೇನು?

   ಕವಿತಾ ಕೋಷಿ ಜಕ್ಕಲ್, ಮೇರಿ ಸ್ವೀಟಿ, ಫಾತಿಮಾ ರೆಹನಾ ಸೇರಿದಂತೆ ಅನ್ಯ ಕೋಮಿನ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮಾಡಿದ ಎಲ್ಲಾ ಪ್ರಯತ್ನಗಳನ್ನು ಭಕ್ತಾದಿಗಳು ವಿಫಲಗೊಳಿಸಿದ್ದರು. ಇವರಿಗೆಲ್ಲರಿಗೂ, ಖುದ್ದು ಭದ್ರತೆ ನೀಡಿದ್ದ ಕೇರಳದ ಪೊಲೀಸ್ ಐಜಿಪಿ ಶ್ರೀಜಿತ್, ಸೋಮವಾರ ಮುಂಜಾನೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಅಕ್ಷರಸಃ ಕಣ್ಣೀರಿಟ್ಟಿದ್ದಾರೆ.

   ಕೇರಳದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಸ್ ಶ್ರೀಜಿತ್ ಗರ್ಭಗುಡಿಯ ಮುಂದೆ ಕಣ್ಣೀರುಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆಯೇ, ಜಾತಿ ವಿಚಾರದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿಗಳ ಮೇಲೆ ನಡೆಯುವ ಯಾವುದೇ ರೀತಿಯ ದಾಳಿಯನ್ನು ನಾವು ಸಹಿಸುವುದಿಲ್ಲ ಎಂದು ಡಿಜಿಪಿ ಲೋಕನಾಥ್ ಬೆಹ್ರಾ ಎಚ್ಚರಿಕೆ ನೀಡಿದ್ದಾರೆ.

   ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ

   ಈ ನಡುವೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವ ವಿಚಾರದ, ತುರ್ತು ಮೇಲ್ಮನವಿ ವಿಚಾರಣೆಯನ್ನು ನ್ಯಾಯಪೀಠ ಮಂಗಳವಾರ (ಅ 23) ಕೈಗೆತ್ತಿಕೊಳ್ಳಲಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸ್ ಐಜಿಪಿ ಅಯ್ಯಪ್ಪನ ಮುಂದೆ ಕ್ಷಮೆಯಾಚಿಸಿದರೇ? ಮುಂದೆ ಓದಿ..

   ಕೇರಳ ಪೊಲೀಸರು ಭಾರೀ ಭದ್ರತೆಯನ್ನು ನೀಡಿದ್ದರು

   ಕೇರಳ ಪೊಲೀಸರು ಭಾರೀ ಭದ್ರತೆಯನ್ನು ನೀಡಿದ್ದರು

   ಫಾತಿಮಾ ರೆಹನಾ ಸೇರಿದಂತೆ ಮಹಿಳೆಯರು ಪಂಪಾದಿಂದ ಶಬರಿಮಲೆ ಪ್ರವೇಶಿಸಲು ಹೊರಟಾಗ ಕೇರಳ ಪೊಲೀಸರು ಭಾರೀ ಭದ್ರತೆಯನ್ನು ನೀಡಿದ್ದರು. ಖುದ್ದು ಐಜಿಪಿ ಶ್ರೀಜಿತ್ ಅವರಿಗೆ ಸಾಥ್ ನೀಡಿದ್ದರು. ಪ್ರತಿಭಟನಾಕಾರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಾಗ, ನಾನು ಕೇರಳ ಸರಕಾರ ಮತ್ತು ಸರ್ವೋಚ್ಚ ನ್ಯಾಯಾಯಲದ ಆದೇಶವನ್ನು ಪಾಲಿಸುತ್ತಿದ್ದೇನೆಂದು ಶ್ರೀಜಿತ್ ಮನವಿ ಮಾಡುತ್ತಿದ್ದರು.

   ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

   ನಾನೂ ಹಿಂದೂ, ನಾನೂ ಒಬ್ಬ ಅಯ್ಯಪ್ಪನ ಭಕ್ತ

   ನಾನೂ ಹಿಂದೂ, ನಾನೂ ಒಬ್ಬ ಅಯ್ಯಪ್ಪನ ಭಕ್ತ

   ನಾನೂ ಹಿಂದೂ, ನಾನೂ ಒಬ್ಬ ಅಯ್ಯಪ್ಪನ ಭಕ್ತ. ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದ ಶ್ರೀಜಿತ್, ಅಯ್ಯಪ್ಪ ಭಕ್ತರ ಪ್ರತಿಭಟನೆ ತೀವ್ರವಾದಾಗ, ಭಕ್ತರ ಭಾವನೆಗೆ ನಾನು ಅಡ್ಡಿಪಡಿಸುವುದಿಲ್ಲ ಎಂದು ಫಾತಿಮಾ ಸೇರಿದಂತೆ, ದೇವಾಲಯ ಪ್ರವೇಶಿಸಲು ಹೊರಟಿದ್ದ ಮೂವರನ್ನು ತನ್ನ ಕಚೇರಿಗೆ ಕರೆಸಿಕೊಂಡಿದ್ದರು. ನಿಮ್ಮ ಹೋರಾಟಕ್ಕೆ ದೇವಾಲಯದ ಆವರಣವನ್ನು ಬಳಸಿಕೊಳ್ಳಬೇಡಿ ಎಂದು ಶ್ರೀಜಿತ್, ಫಾತಿಮಾ ಸೇರಿದಂತೆ ಮೂವರಿಗೂ ಖಡಕ್ ವಾರ್ನಿಂಗ್ ನೀಡಿದ್ದರು. (ಚಿತ್ರಕೃಪೆ: ಯೂಟ್ಯೂಬ್)

   ಶಬರಿಮಲೆ ದೇವಾಲಯಕ್ಕೆ ಆಗಮಿಸಿದ್ದ ಐಜಿಪಿ ಶ್ರೀಜಿತ್

   ಶಬರಿಮಲೆ ದೇವಾಲಯಕ್ಕೆ ಆಗಮಿಸಿದ್ದ ಐಜಿಪಿ ಶ್ರೀಜಿತ್

   ತುಲಾಮಾಸದ ಪೂಜೆಯ ಕೊನೆಯ ದಿನ ಸಿವಿಲ್ ಡ್ರೆಸ್ ನಲ್ಲಿ ಸೋಮವಾರ ನಸುಕಿನ ಐದು ಗಂಟೆ ಸುಮಾರಿಗೆ, ಶಬರಿಮಲೆ ದೇವಾಲಯಕ್ಕೆ ಆಗಮಿಸಿದ್ದ ಐಜಿಪಿ ಶ್ರೀಜಿತ್, ಸುಮಾರು ಐದು ನಿಮಿಷ ಅಯ್ಯಪ್ಪನ ಮುಂದೆ ಕೈಮುಗಿಯುತ್ತಾ ಅಕ್ಷರಸಃ ಕಣ್ಣೀರಿಟ್ಟಿದ್ದಾರೆ. ನನ್ನಿಂದ ತಪ್ಪಾಗಿದೆ, ಕ್ಷಮಿಸು ಎನ್ನುವಂತಿತ್ತು ಅವರ ಬಾಡಿ ಲಾಂಗ್ವೇಜ್. ದೇವಾಲಯದ ತಂತ್ರಿಗಳು, ಪೊಲೀಸ್ ಸಿಬ್ಬಂದಿಗಳು ಅವರನ್ನು ಸಮಾಧಾನ ಪಡಿಸಲು ಮುಂದಾಗುತ್ತಿದ್ದಂತೆಯೇ ಶ್ರೀಜಿತ್, ಮುಂದೆ ಹೋಗಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

   50ರ ನಂತರ ಮತ್ತೆ ಬರುತ್ತೇನೆ: ಅಯ್ಯಪ್ಪನಿಗೆ ಒಂಬತ್ತರ ಬಾಲಕಿಯ ಪ್ರಾರ್ಥನೆ!

   ಮನೋಜ್ ಅಬ್ರಹಾಂ ನೀಡಿದ ಆದೇಶದ ಮೇರೆಗೆ ಲಾಠಿಚಾರ್ಚ್

   ಮನೋಜ್ ಅಬ್ರಹಾಂ ನೀಡಿದ ಆದೇಶದ ಮೇರೆಗೆ ಲಾಠಿಚಾರ್ಚ್

   ಪಂಪಾ ಮತ್ತು ಶಬರಿಮಲೆ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಲಾಠಿಚಾರ್ಜ್ ಅನ್ನು ಇನ್ನೊಬ್ಬರು ಕೇರಳದ ಐಜಿಪಿ ಮನೋಜ್ ಅಬ್ರಹಾಂ ನೀಡಿದ ಆದೇಶದ ಮೇರೆಗೆ ನಡೆಸಲಾಗಿತ್ತು ಎನ್ನುವ ದೂರಿನ ಹಿನ್ನಲೆಯಲ್ಲಿ. ಶ್ರೀಜಿತ್ ಮತ್ತು ಅಬ್ರಹಾಂ ಅವರ ಜಾತಿಯನ್ನು ಆಧರಿಸಿ, ಭಾರೀ ಪರ, ವಿರೋಧ ಚರ್ಚೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿತ್ತು.

   ಫಾತಿಮಾ ರೆಹಾನಳನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಿತ್ತು

   ಫಾತಿಮಾ ರೆಹಾನಳನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಿತ್ತು

   ಶಬರಿಮಲೆ ಪ್ರವೇಶಿಸಲು ವಿಫಲವಾದ ಫಾತಿಮಾ ರೆಹಾನಳನ್ನು ಮುಸ್ಲಿಂ ಸಮುದಾಯ ಬಹಿಷ್ಕರಿಸಿತ್ತು, ಜೊತೆಗೆ ಅವರು ಕೆಲಸ ಮಾಡುವ ಬಿಎಸ್ಎನ್ಎಲ್ ಸಂಸ್ಥೆ ಕೂಡಾ, ವಾರ್ನಿಂಗ್ ನೀಡಿ ವರ್ಗಾವಣೆ ಮಾಡಿತ್ತು. ಶಬರಿಮಲೆ ಅಯ್ಯಪ್ಪನ ದಯೆಯಿಂದಲೇ ನನಗೆ ವರ್ಗಾವಣೆಯಾಗಿದೆ ಎಂದು ಮತ್ತೆ ಫಾತಿಮಾ ಅಣಕವಾಡಿದ್ದಾರೆ.

   ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪಿನ ಮುಖ್ಯಾಂಶ, ಚಿತ್ರ ಮಾಹಿತಿ

   English summary
   A photo of Kerala IGP S. Sreejith, who led the police team during the protest against women’s entry at Sabarimala temple, has gone viral on social media. In the photo, Sreejith, who was dressed in civilian clothes, can be seen praying in front of Lord Ayappa with tears rolling down his cheeks.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more