ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಮಸೀದಿಯಲ್ಲಿ ಹಿಂದೂ ಜೋಡಿಗೆ ಕೂಡಿಬಂತು ಕಂಕಣಭಾಗ್ಯ!

|
Google Oneindia Kannada News

Recommended Video

ಭಾವೈಕ್ಯತೆಗೆ ಸಾಕ್ಷಿಯಾಯ್ತು ಮಸೀದಿಯಲ್ಲಿ ನಡೆದ ಮದುವೆ| Hindu | Muslim | Marriage | kerala |Oneindia kannada

ತಿರುವನಂತಪುರಂ, ಜನವರಿ.19: ಜಾತಿಯತೆ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕಂಕಣಭಾಗ್ಯ ಕೂಡಿ ಬಂದ ಹಿಂದೂ ಜೋಡಿಗೆ ಮಸೀದಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರವೇ ವಿವಾಹ ನೆರವೇರಿಸಲಾಗಿದೆ.
ಇಂಥದೊಂದು ಘಟನೆ ಕಯಂಕುಲಂನ ಅಲಪ್ಪುಜಾದಲ್ಲಿರುವ ಚೆರುವಾಲಿ ಮುಸ್ಲಿಂ ಮಸೀದಿಯಲ್ಲಿ ನಡೆದಿದೆ. ಸದಾಶಿವ ಸಸಿ, ಮಿನಿ ಸಸಿ ಎಂಬುವವರ ಪುತ್ರ ಸರತ್ ಸಸಿ ಹಾಗೂ ಅಂಜು ಅಶೋಕ್ ಕುಮಾರ್ ಮುಸ್ಲಿಂರ ಪವಿತ್ರ ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿರಿಸಿದರು. ಮಾಂಗಲ್ಯಧಾರಣೆ ಬಳಿಕ ನವಜೋಡಿಗಳು ಮಸೀದಿಯ ಮುಖ್ಯಸ್ಥ ಇಮಾಮ್ ರಿಯಾಜುದ್ದೀನ್ ಫೈಜಿ ಆಶೀರ್ವಾದವನ್ನು ಪಡೆದರು.

ರಾಜ್ಯ ಸರ್ಕಾರದಿಂದ ಸಪ್ತಪದಿ ಕಾರ್ಯಕ್ರಮ: ವಿಶೇಷತೆ ಏನು?
ಇನ್ನು, ತಂದೆಯನ್ನು ಕಳೆದುಕೊಂಡ ಅಂಜು ಅಶೋಕ್ ಕುಮಾರ್ ಮದುವೆಯ ಜವಾಬ್ದಾರಿಯನ್ನು ತಾಯಿಯೇ ಹೊತ್ತುಕೊಂಡಿದ್ದರು. ಮಗಳ ಮದುಗೆ ಹಣ ಜೋಡಿಸಲು ವ್ಯಥೆ ಪಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಡತನದಲ್ಲಿದ್ದ ಕುಟುಂಬದ ನೆರವಿಗೆ ಮುಸ್ಲಿಂ ಜಮಾತ್ ಮಸೀದಿಯ ಕಮಿಟಿ ಧಾವಿಸಿತು.

ನವದಂಪತಿಗೆ ಉಡುಗೊರೆ ನೀಡಿದ ಕಮಿಟಿ:

Kerala Hindu Pair Marriage Host In Mosque

ಮಸೀದಿಯಲ್ಲೇ ಅದ್ಧೂರಿ ಮದುವೆ ನೆರವೇರಿಸುವುದರ ಜೊತೆಗೆ ವಧು ಅಂಜು ಅಶೋಕ್ ಕುಮಾರ್ ಗೆ 10 ಸೆವರೆನ್ ಚಿನ್ನ, 2 ಲಕ್ಷ ರುಪಾಯಿ ಉಡುಗೊರೆ ಜೊತೆಗೆ ಟಿವಿ, ಫ್ರಿಜ್ ಸೇರಿದಂತೆ ಮನೆ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಮಸೀದಿಯ ಕಮಿಟಿ ವತಿಯಿಂದಲೇ ನೀಡಲಾಯಿತು.

Kerala Hindu Pair Marriage Host In Mosque

ಜಾತೀಯತೆಯನ್ನು ಮೆಟ್ಟಿ ನಿಂತು ಸಮಾಜಮುಖಿ ಕಾರ್ಯವನ್ನು ಮಾಡಿದ ಮಸೀದಿಯ ಕಮಿಟಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಭಾಷಯ ಕೋರಿದ್ದಾರೆ. ಇಂದು ನಡೆದಿರುವ ಮದುವೆ ಸಮಾರಂಭವು ಕೇರಳದಲ್ಲಿ ಇರುವ ಭಾವೈಕ್ಯತೆಯ ಸಂಕೇತ ಎಂದು ಹೇಳಿದ್ದಾರೆ.

English summary
Kerala Hindu Pair Marriage Host In Mosque. Chief Minister Pinarayi Vijayan Called This Is A Unity Of Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X