ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಬಸ್ ಸಂಚಾರ: ಟಿಕೆಟ್ ದರ ಶೇ.50 ರಷ್ಟು ಏರಿಕೆ

|
Google Oneindia Kannada News

ತಿರುವನಂತಪುರಂ, ಮೇ 19: ಕೇರಳದಲ್ಲಿ ಮಾರ್ಚ್ 20 ರಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ.ಒಂದು ಬಸ್‌ನಲ್ಲಿ 25 ಜನರಿಗೆ ಮಾತ್ರವೇ ಅವಕಾಶ ನೀಡಿರುವುದರಿಂದ ಅರ್ಧದಷ್ಟು ಜನ ಮಾತ್ರ ಪ್ರಯಾಣಿಸಿದಂತಾಗುತ್ತದೆ. ಇದರಿಂದ ಸಾರಿಗೆ ನಿಗಮಕ್ಕೆ ದಿನವೊಂದಕ್ಕೆ ಸುಮಾರು 42 ಲಕ್ಷ ರೂ ನಷ್ಟವಾಗುತ್ತದೆ.

ಒಂದು ಬಸ್‌ನಲ್ಲಿ 25ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಎರಡು ಆಸನಗಳು ಸೇರಿ ಓರ್ವ ಪ್ರಯಾಣಿಕ ಮಾತ್ರ ಕುಳಿತುಕೊಳ್ಳಬಹುದಾಗಿದೆ. ಬಸ್ ಹತ್ತುವ ಮುನ್ನ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ.

ಕೇರಳದಲ್ಲಿ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸ್‌ಗಳ ಸಂಖ್ಯೆಕೇರಳದಲ್ಲಿ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸ್‌ಗಳ ಸಂಖ್ಯೆ

ಸಂಚಾರ ಪುನರಾರಂಭಿಸುವ ಬಗ್ಗೆ ಖಾಸಗಿ ಬಸ್ ಮಾಲೀಕರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.ಲಾಕ್‌ಡೌನ್ 4.0ದಲ್ಲಿ ಬಸ್ ಸಂಚಾರಕ್ಕೆ ವಿನಾಯಿತಿ ನೀಡಲಾಗಿರುವುದರಿಂದ ಅಂತರಜಿಲ್ಲಾ ಸಂಚಾರಕ್ಕೂ ಅನುಮತಿಸಲಾಗಿದೆ.

Kerala Hikes Bus Ticket Fare By 50 Percent

ಗರಿಷ್ಠ ಸಂಖ್ಯೆಯಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ. ಸಂಚರಿಸಬೇಕಾದ ಮಾರ್ಗಗಳು ಮತ್ತು ಪ್ರಯಾಣದ ವೇಳಾಪಟ್ಟಿ ಅಂತಿಮಗೊಳಿಸಲು ಎಲ್ಲಾ ಡಿಪೊಗಳಿಗೆ ಸೂಚನೆ ನೀಡಲಾಗಿದೆ. ಕನಿಷ್ಠ ದರ 8 ರಿಂದ 12 ರೂ.ಗಳಿಗೆ ಹೆಚ್ಚಿಸಲಾಗಿದೆ.

English summary
The Kerala State Road Transport Corporation (KSRTC) is all set to resume short-distance service from Wednesday, as the government has permitted intra district service as part of lockdown 4 relaxations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X