ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

|
Google Oneindia Kannada News

ತಿರುವನಂತಪುರಂ, ನವೆಂಬರ್ 22: ಬೈಕ್ ಸವಾರರಿಗೆ ಸಂಚಾರಿ ಪೊಲೀಸರ ಕಾಟ ಅಷ್ಟಿಷ್ಟಲ್ಲ. ಆದರೆ ಕೇರಳ ಹೈಕೋರ್ಟ್ ನೀಡಿರುವ ಆದೇಶ ಅಲ್ಲಿನ ಬೈಕ್ ಸವಾರರಿಗೆ ನಿರಾಳತೆ ನೀಡಿದೆ.

ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ನಿಲ್ಲಲು ಸಂಚಾರಿ ಪೊಲೀಸರು ಸೂಚಿಸಬಹುದೇ ವಿನಃ ಅವರನ್ನು ನಿಲ್ಲುವಂತೆ ಒತ್ತಡ ಹೇರುವಂತಿಲ್ಲ. ಬಲ ಪ್ರದರ್ಶನ ಮಾಡುವಂತಿಲ್ಲ, ಹಾಗೂ ಅವರನ್ನು ಬೆನ್ನಟ್ಟಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿದೆ. ಕೇರಳ ಹೈಕೋರ್ಟ್‌ನ ಈ ಆದೇಶ ಡಿಸೆಂಬರ್ 1 ರಿಂದ ಜಾರಿ ಆಗಲಿದೆ.

ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!

ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ, ಕೇರಳ ಹೈಕೋರ್ಟ್‌ ನ್ಯಾಯಾಧೀಶ ರಾಜಾ ವಿಜಯರಂಗನ್ ಅವರು ಈ ಆದೇಶ ಹೊರಡಿಸಿದ್ದು, ಬೈಕ್ ಸವಾರರನ್ನು ತಡೆಯಲು ಪೊಲೀಸರು 'ಬಲ ಪ್ರದರ್ಶನ' ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.

ಪೊಲೀಸರನ್ನು ಗುದ್ದಿದ್ದ ಕೇಸ್ ವಿಚಾರಣೆ ವೇಳೆ ಆದೇಶ

ಪೊಲೀಸರನ್ನು ಗುದ್ದಿದ್ದ ಕೇಸ್ ವಿಚಾರಣೆ ವೇಳೆ ಆದೇಶ

ಕೇರಳದ ಮುಫ್ಲಿ ಎಂಬ ವ್ಯಕ್ತಿ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದರು. ಆಗ ಆತನ ವಾಹನವು ತನ್ನನ್ನು ತಡೆದ ಪೊಲೀಸರಿಗೆ ಗುದ್ದಿದೆ. ಇದರ ವಿರುದ್ಧ ಪ್ರಕರಣ ದಾಖಲಾಗಿ ಮುಫ್ಲಿ ಜೈಲು ಅನುಭವಿಸುವಂತಾಗಿತ್ತು. ಆತನ ಜಾಮೀನು ಅರ್ಜಿ ವಿಚಾರಣೆ ವೇಳೆ ಮೇಲಿನಂತೆ ಆದೇಶ ಹೊರಡಿಸಲಾಗಿದೆ. ಮುಫ್ಲಿಗೆ ಜಾಮೀನು ಸಹ ಮಂಜೂರಾಗಿದೆ.

ಕೈ ಚಿಹ್ನೆ, ಅಥವಾ ವಾಹನಕ್ಕೆ ಅಡ್ಡ ಬರುವುದು ಮಾಡುವಂತಿಲ್ಲ

ಕೈ ಚಿಹ್ನೆ, ಅಥವಾ ವಾಹನಕ್ಕೆ ಅಡ್ಡ ಬರುವುದು ಮಾಡುವಂತಿಲ್ಲ

ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಪೊಲೀಸರು ತಂತ್ರಜ್ಞಾನ ಉಪಯೋಗಿಸಿ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕೆ ವಿನಃ ಸವಾರರನ್ನು ಚೇಸ್ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ. ಸವಾರರನ್ನು ತಡೆಯಲು ಸಹ ಚಿಹ್ನೆಗಳು ಅಥವಾ ದೀಪಗಳನ್ನು ಬಳಸಿ ತಡೆಯಬೇಕೆ ವಿನಃ ದೈಹಿಕ ಸಂಜ್ಞೆಗಳನ್ನು ಉಪಯೋಗಿಸಿ, ಅಥವಾ ರಸ್ತೆಗೆ ಅಡ್ಡಲಾಗಿ ಬಂದು ತಡೆಯಬಾರದು ಎಂದು ಹೈಕೋರ್ಟ್ ಹೇಳಿದೆ.

Infographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರInfographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರ

ಸವಾರರಿಗೆ ತೊಂದರೆ ಆಗುವ ರೀತಿಯಲ್ಲಿ ದಂಡ ವಸೂಲಿ ಬೇಡ

ಸವಾರರಿಗೆ ತೊಂದರೆ ಆಗುವ ರೀತಿಯಲ್ಲಿ ದಂಡ ವಸೂಲಿ ಬೇಡ

ಡಿಜಿಟಲ್ ಕ್ಯಾಮೆರಾ, ಟ್ರಾಫಿಕ್ ಕಂಟ್ರೋಲ್ ಕ್ಯಾಮೆರಾ, ಮೊಬೈಲ್ ಕ್ಯಾಮೆರಾ ಮತ್ತಿತರೆ ಪರಿಕರಗಳನ್ನು ಹೆಚ್ಚಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿ ಸಂಚಾರ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕೇ ವಿನಃ ಸವಾರರಿಗೆ ತೊಂದರೆ ಆಗುವ ರೀತಿಯಲ್ಲಿ ನಿಯಮವನ್ನು ಹೇರಲು, ದಂಡ ಕಟ್ಟಿಸಿಕೊಳ್ಳಲು ಯತ್ನಿಸಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.

ನಿಗದಿತ ಸ್ಥಳದಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆ ತಪಾಸಣೆ ಮಾಡಿ

ನಿಗದಿತ ಸ್ಥಳದಲ್ಲಿಯೇ ಸಂಚಾರಿ ನಿಯಮ ಉಲ್ಲಂಘನೆ ತಪಾಸಣೆ ಮಾಡಿ

ಸಂಚಾರಿ ಪೊಲೀಸರು ತಮಗೆ ತೋಚಿದ ಸ್ಥಳದಲ್ಲಿ ನಿಂತು ಸಂಚಾರಿ ತಪಾಸಣೆ ಮಾಡುವ ಬಗ್ಗೆಯೂ ಕೇರಳ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ನಿಗದಿತ ಸ್ಥಳದಲ್ಲಿ ನಿಂತು ಪೊಲೀಸರು ಸಂಚಾರ ತಪಾಸಣೆ ಮಾಡಬೇಕು ಎಂದು ಹೇಳಿದೆ.

ಬೈಕ್ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ

ಬೈಕ್ ಸವಾರರಿಬ್ಬರೂ ಹೆಲ್ಮೆಟ್ ಧರಿಸುವುದು ಕಡ್ಡಾಯ

ಕೇರಳ ರಾಜ್ಯದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಮೊಟಾರು ವಾಹನ ಕಾಯ್ದೆ ತಿದ್ದುಪಡಿ ಅನ್ವಯ ದುಬಾರಿ ದಂಡಗಳನ್ನು ಜನರ ಮೇಲೆ ಹೇರಲು ಕೇರಳ ಸರ್ಕಾರ ವಿರೋಧಿಸಿತ್ತು. ಆದರೆ ಈಗ ಅಂತಿಮವಾಗಿ ಕೇರಳದಲ್ಲೂ ಸಹ ಮುಂಬದಿ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

English summary
Kerala high court orders to traffic police to not to chase and try catch two Wheeler's who not wearing helmet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X