ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ರಮ್ಮಿ ನಿಷೇಧಕ್ಕೆ ಬ್ರೇಕ್ ಹಾಕಿದ ಕೇರಳ ಹೈಕೋರ್ಟ್

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 27: ಆನ್‌ಲೈನ್‌ ರಮ್ಮಿ ನಿಷೇಧಿಸಿರುವುದನ್ನು ಪ್ರಶ್ನಿಸಿದ್ದ ಕೆಲ ಅರ್ಜಿಗಳನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಕೇರಳ ಸರ್ಕಾರ ಹೊರಡಿಸಿರುವ ಆದೇಶ ಅಸಾಂವಿಧಾನಿಕ ಎಂದು ಸೋಮವಾರದಂದು ತೀರ್ಪು ನೀಡಿದೆ.

ದುಡ್ಡು ಪಾವತಿಸಿ ಆನ್ ಲೈನ್ ನಲ್ಲಿ ಆಡಲಾಗುವ ರಮ್ಮಿ ಆಟವು ಕೌಶಲ್ಯಯುಕ್ತ ಆಟವಾಗಿದೆ. ಸದರಿ ಆಟವನ್ನು ನಿಷೇಧಿಸಿ ಕೇರಳ ಸರ್ಕಾರವು ಹೊರಡಿಸಿರುವ ಆದೇಶವು ಅಸಾಂವಿಧಾನಿಕ, ಆಟಗಳನ್ನು ನಿಷೇಧಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಟಿ ಆರ್ ರವಿ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಆಂಧ್ರಪ್ರದೇಶದಲ್ಲಿ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ನಿಷೇಧ!ಆಂಧ್ರಪ್ರದೇಶದಲ್ಲಿ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ನಿಷೇಧ!

ಕೇರಳ ಗೇಮಿಂಗ್ ಕಾಯಿದೆ 1960ರ ನಿಯಮಗಳ ಅಡಿಯಲ್ಲಿ ಪಿಣರಾಯಿ ಸರ್ಕಾರವು ಫೆಬ್ರವರಿ 23, 2021ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಕೌಶಲ್ಯದ ಮೇಲೆ ಅವಲಂಬಿಸಿರುವ ಸ್ಪರ್ಧೆಗಳು ಜೂಜಿಗೆ ಸಮನಲ್ಲ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಹೀಗಾಗಿ ರಾಜ್ಯದ ಗೇಮಿಂಗ್‌ ಕಾಯಿದೆಯಡಿ ಆನ್‌ಲೈನ್‌ ರಮ್ಮಿಗೆ ನಿಷೇಧ ಹೇರಲಾಗದು. ಆದ್ದರಿಂದ ಅರ್ಜಿದಾರರರು ಪಡೆವ ಲಾಭ ಸಂವಿಧಾನದ 19 (1) (ಜಿ) ಅಡಿ ಸುರಕ್ಷಿತ ವ್ಯಾಪಾರ. ಅಲ್ಲದೆ ಜೂಜಿನ ನಿಯಮಗಳಿಂದ ವಿನಾಯಿತಿ ಪಡೆಯುವ ಕೌಶಲ್ಯದ ಆಟ ಯಾವುದು ಎಂಬುದನ್ನು ನಿರ್ದಿಷ್ಟಪಡಿಸುವುದಕ್ಕೆ ಮಾತ್ರ ಕೇರಳ ಕಾಯಿದೆಯ ಸೆಕ್ಷನ್ 14 ಎ ಸೀಮಿತವಾಗಿದೆ. ರಾಜ್ಯ ಜೂಜು ಮತ್ತು ಗೇಮಿಂಗ್ ನಿಯಮಗಳಡಿ ರಮ್ಮಿ ಒಂದು ಕೌಶಲ್ಯದ ಆಟ ಎಂಬುದು ಸಾಬೀತಾಗಿರುವುದರಿಂದ, ಆನ್‌ಲೈನ್ ರಮ್ಮಿಯನ್ನು ನಿಷೇಧಿಸುವ ಅಧಿಸೂಚನೆಯು ಸಂವಿಧಾನದ 246 ನೇ ವಿಧಿಯ ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದರು.

Kerala High Court lifts ban on Online Rummy

ಈ ವಾದವನ್ನು ಮನ್ನಿಸಿದ ನ್ಯಾಯಾಲಯ ಆನ್‌ಲೈನ್‌ ರಮ್ಮಿಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಆದೇಶಿಸಿತು.

ಈ ಹಿಂದೆ ಕೇರಳ ಗೇಮಿಂಗ್ ಕಾಯ್ದೆ 1960 ಸೆಕ್ಷನ್ 14ರ ಅನ್ವಯ ಎಲ್ಲಾ ಬಗೆಯ ದುಡ್ಡು ಕಟ್ಟಿ ಆಡುವ ರಮ್ಮಿ ಗೇಮ್ ಮೇಲೆ ನಿಷೇಧ ಹೇರಬೇಕಾಗುತ್ತದೆ. ಆದರೆ, ಆನ್ ಲೈನ್ ಗೇಮ್ ರಮ್ಮಿ ಇದಕ್ಕೆ ಸೇರ್ಪಡೆಗೊಂಡಿಲ್ಲ, ಕಾಯ್ದೆ ತಿದ್ದುಪಡಿ ಮಾಡಿ ರಮ್ಮಿ ನಿಷೇಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಸುಪ್ರೀಂ ತೀರ್ಪಿನಿಂದ ಆನ್‌ಲೈನ್ ಫ್ಯಾಂಟಸಿ ಗೇಮ್ಸ್‌ಗೆ ಭರ್ಜರಿ ಗೆಲುವುಸುಪ್ರೀಂ ತೀರ್ಪಿನಿಂದ ಆನ್‌ಲೈನ್ ಫ್ಯಾಂಟಸಿ ಗೇಮ್ಸ್‌ಗೆ ಭರ್ಜರಿ ಗೆಲುವು

ಕೊಹ್ಲಿ ಹಾಗೂ ತಮನ್ನಾ ಮೊಬೈಲ್ ಪ್ರೀಮಿಯರ್ ಲೀಗ್ ಪರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಸುದೀಪ್, ಗಂಗೂಲಿ ಮೈ11 ಸರ್ಕಲ್ ಪರ ಪ್ರಚಾರ ಮಾಡಿದ್ದಾರೆ. ಎಂಪಿಎಲ್ ಸದ್ಯ ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಕೂಡಾ ಪಡೆದಿದೆ. ಫ್ಯಾಂಟಸಿ ಲೀಗ್ ಡ್ರೀಮ್11 ಸದ್ಯ ಐಪಿಎಲ್ ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಕಳೆದ ವರ್ಷ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ದುಡ್ಡು ಕಟ್ಟಿ ಆಡುವ ಎಲ್ಲಾ ಬಗೆಯ ಆನ್‌ಲೈನ್ ಗೇಮ್ ನಿಷೇಧಕ್ಕೆ ಅಲ್ಲಿನ ಸರ್ಕಾರಗಳು ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ, ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ ಆನ್‌ಲೈನ್ ರಮ್ಮಿ ಮತ್ತು ಆನ್‌ಲೈನ್ ಪೋಕರ್ ಸೇರಿದಂತೆ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸುವ ಸಂಬಂಧ ತಮಿಳುನಾಡು ಗೇಮಿಂಗ್ ಕಾಯಿದೆ- 1930ಕ್ಕೆ ರಾಜ್ಯ ಸರ್ಕಾರ ಮಾಡಿದ್ದ ತಿದ್ದುಪಡಿಯನ್ನು ರದ್ದುಗೊಳಿಸಿತ್ತು.

ಆನ್‍ಲೈನ್ ಆಟಗಳ ನಿಷೇಧ, ಸಾವಿರಾರು ಉದ್ಯೋಗಗಳಿಗೆ ಅಪಾಯಆನ್‍ಲೈನ್ ಆಟಗಳ ನಿಷೇಧ, ಸಾವಿರಾರು ಉದ್ಯೋಗಗಳಿಗೆ ಅಪಾಯ

ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ, 2021 ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಎಲ್ಲಾ ವಿಧಗಳನ್ನು ("ಬಿಲ್") ನಿಷೇಧಿಸಲು ಗೇಮಿಂಗ್ ಮತ್ತು ಪೊಲೀಸ್ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಆದರೆ, ಕಾನೂನುಬಾಹಿರ ಆನ್ಲೈನ್ ಜೂಜು, ಬೆಟ್ಟಿಂಗ್ ಮತ್ತು ಬಾಜಿಕಟ್ಟುವ ಪ್ಲಾಟ್ ಫಾರ್ಮ್ ಗಳಿಗೆ ಸರಿಸಮಾನವಾಗಿ ವ್ಯವಹರಿಸುವ ಮೂಲಕ ಕಾನೂನುಬದ್ಧ ವ್ಯವಹಾರಗಳಿಗೆ ದಂಡ ವಿಧಿಸುವುದರಿಂದ ಮಸೂದೆ ದಾರಿ ತಪ್ಪಿದಂತೆ ಕಾಣುತ್ತದೆ ಎಂದು ಆಲ್ ಇಂಡಿಯಾ ಗೇಮಿಂಗ್ ಫೇಡರೇಷನ್ (AIGF) ಅಭಿಪ್ರಾಯಪಟ್ಟಿದೆ.

English summary
The Kerala High Court on Monday lifted ban on Online Rummy, quashed an amendment to a government notification issued under Section 14A of the Kerala Gaming Act, 1960 banning online skilled games
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X