ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಗೆ ಜಾಮೀನು

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 15: ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರಿಗೆ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದ 54 ವರ್ಷ ವಯಸ್ಸಿನ ಫ್ರಾಂಕೋ ಮುಳಕ್ಕಲ್ ಅವರನ್ನು ಸೆ.21 ರಂದು ಬಂಧಿಸಲಾಗಿತ್ತು.

ಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನಅತ್ಯಾಚಾರದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ

2014ರಿಂದ 2016ರ ಅವಧಿಯಲ್ಲಿ 44 ವರ್ಷದ ಕ್ರೈಸ್ತ ಸನ್ಯಾಸಿನಿಯ ಮೇಲೆ ಫ್ರಾಂಕೋ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಷರತ್ತುಬದ್ಧ ಜಾಮೀನು

ಷರತ್ತುಬದ್ಧ ಜಾಮೀನು

ಬಿಷಪ್ ಫ್ರಾಕೋ ಮುಳಕ್ಕಲ್ ಅವರು ಯಾವುದೇ ಕಾರಣಕ್ಕೂ ಕೇರಳ ಪ್ರವೇಶಿಸುವಂತಿಲ್ಲ, ಮತ್ತು ಅವರು ತಮ್ಮ ಪಾಸ್ ಪೋರ್ಟ್ ಅನ್ನು ಕೋರ್ಟಿನ ವಶಕ್ಕೆ ಒಪ್ಪಿಸಬೇಕೆಂಬ ಷರತ್ತಿನೊಂದಿಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಸೆ.21 ರಂದು ಫ್ರಾಂಕೋ ಅವರನ್ನು ಪೊಲೀಸರು ಬಂಧಿಸಿದ್ದರು.

ಏನಿದು ಆರೋಪ?

ಏನಿದು ಆರೋಪ?

ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರು 2014 ರಿಂದ 2016ರವರೆಗೆ ಅಂದರೆ ಎರಡು ವರ್ಷಗಳಷ್ಟು ದೀರ್ಘಕಾಲ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸನ್ಯಾಸಿನಿ ಆರೋಪಿಸಿದ್ದಾರೆ. ಈ ವಿಷಯ ಬಯಲಾಗುತ್ತಿದ್ದಂತೆಯೇ ಕೇರಳದಾದ್ಯಂತ ಸಾಕಷ್ಟು ಕ್ರೈಸ್ತ ಸನ್ಯಾಸಿಯರು ಬಿಷಪ್ ವಿರುದ್ಧ ಪ್ರತಿಭತನೆ ನಡೆಸಿದ್ದರು, ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

ಕಾನ್ವೆಂಟ್ ನಲ್ಲಿ ಅತ್ಯಾಚಾರ?

ಕಾನ್ವೆಂಟ್ ನಲ್ಲಿ ಅತ್ಯಾಚಾರ?

ಸನ್ಯಾಸಿನಿ ನೀಡಿದ ದೂರಿನ ಪ್ರಕಾರ ಮೊದಲ ಬಾರಿಗೆ ಅವರ ಮೇಲೆ ಅತ್ಯಾಚಾರ ನಡೆದಿದ್ದು ಮೇ 5, 2014 ರಂದು ಕೇರಳದ ಕುರವಿಲಂಗಡದ ಕಾನ್ವೆಂಟ್ ವೊಂದರಲ್ಲಿ. ಆ ದಿನ ತಾನು ಕಾನ್ವೆಂಟಿನಲ್ಲಿರಲೇ ಇಲ್ಲ ಎಂದು ಬಿಷಪ್ ಹೇಳಿಕೆ ನೀಡಿದ್ದರೂ, ಅವರು ಅಂದು ಅಲ್ಲಿಯೇ ತಂಗಿದ್ದರು ಎಂಬುದಕ್ಕೆ ಪೊಲೀಸರಿಗೆ ಹಲವು ಸಾಕ್ಷ್ಯಗಳು ಸಿಕ್ಕಿದ್ದವು. ಇದು ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.

ಜವಾಬ್ದಾರಿಯಿಂದ ಕೆಳಗಿಳಿದ ಬಿಷಪ್

ಜವಾಬ್ದಾರಿಯಿಂದ ಕೆಳಗಿಳಿದ ಬಿಷಪ್

ಅತ್ಯಾಚೃ ಆರೋಪ ಮತ್ತು ವಿಚಾರಣೆಗಳ ಹಿನ್ನೆಲೆಯಲ್ಲಿ ಮುಳಕ್ಕಲ್ ಅವರನ್ನು ಬಿಷಪ್ ಸ್ಥಾನದಿಂದ ಪೋಪ್ ಫ್ರಾನ್ಸಿಸ್ ಅವರು ಕೆಳಗಿಳಿಸಿದ್ದರು. ಇದು ತಾತ್ಕಾಲಿಕ ನಿರ್ಣಯವಾಗಿದ್ದು, ವಿಚಾರಣೆಗಳೆಲ್ಲ ಮುಗಿದು, ಬಿಷಪ್ ನಿರ್ದೋಷಿ ಎಂಬುದು ಸಾಬೀತಾಗುವವರೆಗೂ ಅವರು ಈ ಜವಾಬ್ದಾರಿಯನ್ನು ಹೊರುವುದಿಲ್ಲ ಎಂದು ಕ್ಯಾಥೋಲಿಕ್ ಬಿಷಪ್ ಕಾನ್ಪರೆನ್ಸ್ ಆಫ್ ಇಂಡಿಯಾ ಹೇಳಿದೆ.

English summary
Kerala High Court grants conditional bail to Bishop Franco Mulakkal who is the accused in Kerala nun rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X