ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿರುವ ದಂಪತಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿಗೆ ಕೋರ್ಟ್ ಅಸ್ತು

|
Google Oneindia Kannada News

ತಿರುವನಂತಪುರಂ, ಜೂ.14: ಸಾಂಕ್ರಾಮಿಕ ರೋಗದ ಮಧ್ಯೆ ದೇಶದಲ್ಲಿ ಪ್ರಯಾಣ ನಿರ್ಬಂಧಗಳ ಕಾರಣದಿಂದಾಗಿ ಕೇರಳ ಹೈಕೋರ್ಟ್ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ದಂಪತಿಗಳಿಗೆ ವಿವಾಹದ ನೋಂದಣಿ ನಿಯಮಗಳು, 2008 ರ ಅನ್ವಯ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿಗೆ ನೋಂದಾಯಿಸಲು ಅನುಮತಿ ನೀಡಿದೆ.

ಅರ್ಜಿದಾರರಾದ ಥಾಮಸ್ ಕುಟ್ಟಿ ಜೋಸೆಫ್ ಮತ್ತು ಬ್ಲೋಸಮ್ ಥಾಮಸ್‌ ತಮ್ಮ ವಿವಾಹ ನೋಂದಣಿ ಮಾಡಬೇಕಾದರೆ ತಾವು ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇಬ್ಬರೂ ಹಾಜರಿರಬೇಕು ಎಂದು ಸ್ಥಳೀಯ ವಿವಾಹ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗಳು ತಿಳಿಸಿದ್ದರು. ಈ ಹಿನ್ನೆಲೆ ಥಾಮಸ್ ಕುಟ್ಟಿ ಜೋಸೆಫ್ ಮತ್ತು ಬ್ಲೋಸಮ್ ಥಾಮಸ್ ಪವರ್ ಆಫ್ ಅಟಾರ್ನಿ ಮೂಲಕ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಅರ್ಜಿದಾರರ ಪರ ವಕೀಲ ಜಾಕೋಬ್ ಪಿ. ಅಲೆಕ್ಸ್ ಪ್ರಕಾರ, ಅರ್ಜಿದಾರರು 1997 ರ ಜೂನ್‌ 30 ರಂದು ವಿವಾಹವಾಗಿದ್ದಾರೆ. ಪ್ರಸ್ತುತ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಅರ್ಜಿಯಲ್ಲಿ ಏನಿದೆ?

ಅರ್ಜಿಯಲ್ಲಿ ಏನಿದೆ?

ತಾತ್ಕಾಲಿಕ ವೀಸಾದ ಮೇಲೆ ಈ ದಂಪತಿಗಳು ಇತ್ತೀಚೆಗೆ ಯುಎಇಯಿಂದ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ವಲಸೆ ನಿಯಮಗಳಲ್ಲಿನ ಬದಲಾವಣೆಯಿಂದಾಗಿ, ಈ ದಂಪತಿಯು ತಮ್ಮ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಜೋಡಿಯು 1997 ರ ಜೂನ್‌ 30 ರಂದು ವಿವಾಹವಾಗಿದ್ದಾರೆ ಎಂದು ಕೂಡಾ ಉಲ್ಲೇಖ ಮಾಡಲಾಗಿದೆ.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿ

ಈ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿವಾಹದ ನೋಂದಣಿ ಮಾಡುವ ಅವಕಾಶವಿದೆ ಎಂದು ಹೇಳಿದೆ. ಅರ್ಜಿದಾರರು ಹಾಜರುಪಡಿಸಿದ ಸಾಕ್ಷ್ಯಗಳಿಂದ ಈ ದಂಪತಿಗಳು ಪತಿ, ಪತ್ನಿ ಎಂಬುವುದು ಸಾಬೀತಾಗಿದೆ. ಮದುವೆಗಳ ನೋಂದಣಿಯನ್ನು ರಿಜಿಸ್ಟ್ರಾರ್ ಜನರಲ್ ಆಫ್ ಮ್ಯಾರೇಜ್ ನಡೆಸುತ್ತದೆ. ಆದರೆ ಈ ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ಅರ್ಜಿದಾರರು ಆಸ್ಟ್ರೇಲಿಯಾದಿಂದ ಇಲ್ಲಿಗೆ ಬಂದು ಸಹಿ ಮಾಡುವುದು ಅಸಾಧ್ಯವೆಂದು ಕೋರ್ಟ್ ಗಮನಿಸಿದೆ.

ಅಗತ್ಯವಿದ್ದರೆ ಡಿಜಿಟಲ್ ಸಹಿ ಬಳಕೆ

ಅಗತ್ಯವಿದ್ದರೆ ಡಿಜಿಟಲ್ ಸಹಿ ಬಳಕೆ

ಈ ಬಗ್ಗೆ ತೀರ್ಪು ನೀಡಿದ ನ್ಯಾಯಮೂರ್ತಿ ಸಿ.ಎಸ್. ಡಯಾಸ್, "ಈ ಹೆಚ್ಚುವರಿ-ಸಾಮಾನ್ಯ ಪರಿಸ್ಥಿತಿಯಲ್ಲಿ ಕಾರ್ಯವಿಧಾನದ ಕಟ್ಟುನಿಟ್ಟಿನ ಜಾರಿಗೊಳಿಸಲು ಒತ್ತಾಯಿಸಲಾಗದು. ಈ ಸಂಕಷ್ಟದ ಸಂದರ್ಭದಲ್ಲಿ ಅರ್ಜಿದಾರರು ತಮ್ಮ ಮದುವೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೋಂದಾಯಿಸಲು ಅನುಮತಿ ನೀಡಬೇಕು. ವಕೀಲರ ಅಧಿಕಾರದ ಮೂಲಕ ಮತ್ತು ಅಗತ್ಯವಿದ್ದರೆ ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸುವ ಡಿಜಿಟಲ್ ಸಹಿಯನ್ನು ಬಳಸಬಹುದು. ಪ್ರಸ್ತುತ ಅಂತಹ ಅಪ್ಲಿಕೇಶನ್‌ಗಳನ್ನು ಬಳಸಿ ದಾಖಲೆಗಳಲ್ಲಿ ಅರ್ಜಿದಾರರ ಸಹಿಯನ್ನು ಡಿಜಿಟಲ್‌ ರೂಪವಾಗಿ ಹಾಕಿಸಬೇಕು" ಎಂದು ಹೇಳಿದ್ದಾರೆ.

ಕೋರ್ಟ್ ನಿರ್ದೇಶನಗಳು

ಕೋರ್ಟ್ ನಿರ್ದೇಶನಗಳು

ಮೊದಲು ಸ್ಥಳೀಯ ರಿಜಿಸ್ಟ್ರಾರ್ ಅರ್ಜಿದಾರರ ವಿವಾಹವನ್ನು ನೋಂದಾಯಿಸಲು ಸಮರ್ಥ ಪ್ರಾಧಿಕಾರಕ್ಕೆ ಜ್ಞಾಪಕ ಪತ್ರವನ್ನು (ಮೆಮೊರೆಂಡಮ್‌) ರವಾನಿಸಬೇಕಾಗಿದೆ. ಅರ್ಜಿದಾರರ ಪವರ್ ಆಫ್ ಅಟಾರ್ನಿ ಹೋಲ್ಡರ್ (ಅರ್ಜಿದಾರರ ಪರವಾಗಿ ಹಾಜರಿರುವ ವ್ಯಕ್ತಿ) ಪಿಒಎ ನಕಲನ್ನು ಹಾಜರುಪಡಿಸಿ, ಎಲ್ಲಾ ಇತರ ಅರ್ಜಿಗಳು ಮತ್ತು ದಾಖಲೆಗಳೊಂದಿಗೆ ಮದುವೆ ರಿಜಿಸ್ಟರ್‌ನಲ್ಲಿ ಸಹಿ ಹಾಕಲು ಅರ್ಜಿದಾರರಿಂದ ಸೂಕ್ತವಾಗಿ ಅಧಿಕಾರ ಹೊಂದಿದ್ದಾನೆ ಎಂದು ಅಫಿಡವಿಟ್ ಸಲ್ಲಿಸಬೇಕು. ವಿವಾಹದ ರಿಜಿಸ್ಟ್ರಾರ್ ಜನರಲ್, ಅಗತ್ಯವಿದ್ದಲ್ಲಿ, ಅರ್ಜಿದಾರರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಬಹುದಾಗಿದೆ. ಅರ್ಜಿದಾರರ ಡಿಜಿಟಲ್ ಸಹಿಯೊಂದಿಗಿನ ನಕಲನ್ನು ಇ-ಮೇಲ್ ಮೂಲಕ ಅಥವಾ ಕೊರಿಯರ್ ಮೂಲಕ ಪಡೆದುಕೊಳ್ಳಬೇಕು. ಬಳಿಕ ರಿಜಿಸ್ಟ್ರಾರ್ ಜನರಲ್ ಆಫ್ ಮ್ಯಾರೇಜ್ ಸಿಬ್ಬಂದಿಗಳು ಅರ್ಜಿದಾರರ ಮದುವೆಯನ್ನು ನೋಂದಾಯಿಸಿ ವಿವಾಹ ಪ್ರಮಾಣಪತ್ರವನ್ನು ಅರ್ಜಿದಾರರ ಪವರ್ ಆಫ್ ಅಟಾರ್ನಿ ಹೊಂದಿರುವವರಿಗೆ ನೀಡಬೇಕು.

(ಒನ್‌ಇಂಡಿಯಾ ಸುದ್ದಿ)

English summary
Kerala HC Permits Couple Residing Abroad To Register Marriage Through Video Conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X