ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಮಾರಾಟದ ಸರ್ಕಾರ ಆದೇಶಕ್ಕೆ ತಡೆ ತಂದ ಕೇರಳ ಹೈಕೋರ್ಟ್

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 2: ಲಾಕ್‌ಡೌನ್‌ನಿಂದ ಇಡೀ ದೇಶದಲ್ಲಿ ಮಧ್ಯ ಮಾರಾಟ ಮಾಡುವಂತೆ ಇರಲಿಲ್ಲ. ಆದರೆ, ಕೇರಳದಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇದ್ದರೆ, ಅಂತಹವರಿಗೆ ಮಧ್ಯ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಆದರೆ, ಈ ನಿಯಮಕ್ಕೆ ಕೇರಳ ಹೈಕೋರ್ಟ್ ತಡೆ ತಂದಿದೆ.

ಸಂಸದ ಟಿ ಎನ್ ಪ್ರತಾಪನ್ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದ ಸರ್ಕಾರ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಮದ್ಯ ಮಾರಾಟದ ಸರ್ಕಾರದ ಆದೇಶಕ್ಕೆ ಮೂರು ವಾರಗಳ ಕಾಲ ತಡೆಯಾಜ್ಞೆ ವಿಧಿಸಿದೆ.

ಮಧ್ಯ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿಮಧ್ಯ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ

ಮದ್ಯ ಸೇವಿಸಲು ಆಗಲಿಲ್ಲ ಎನ್ನುವ ಕಾರಣಕ್ಕೆ ಕೇರಳದಲ್ಲಿ ಏಳು ಆತ್ಮಹತ್ಯೆಗಳು ನಡೆದಿದೆ. ಹೀಗಾಗಿ, ಸರ್ಕಾರ ವೈದ್ಯರ ಬಳಿ ಪ್ರಿಸ್ಕ್ರಿಪ್ಷನ್ ತೆಗೆದುಕೊಂಡರೆ, ಮದ್ಯ ನೀಡುವಂತೆ ಆದೇಶ ಹೊರಡಿಸಿತ್ತು. ಅದರಂತೆ ಆಲ್ಕೋಹಾಲ್ ಬೇಕೇ ಬೇಕು ಎನ್ನುವವರು ಡಾಕ್ಟರ್‌ರಿಂದ ಚೀಟಿ ಬರೆಸಿಕೊಂಡು ಬರುತ್ತಿದ್ದರು.

Kerala HC Imposed A Stay On The Decision Of The State Government To Provide Liquor

ಒಂದು ಕಡೆ ದೇಶವೇ ಲಾಕ್‌ಡೌನ್‌ ಆಗಿದೆ. ಇತ್ತ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇಂತಹ ಸಮಯದಲ್ಲಿ ಮಧ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಸಂಸದ ಟಿ ಎನ್ ಪ್ರತಾಪನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮದ್ಯಪ್ರಿಯರಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪಮದ್ಯಪ್ರಿಯರಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ

ಈವರೆಗೆ ಕೇರಳದಲ್ಲಿ 265 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. 25 ಜನರು ಗುಣಮುಖರಾಗಿದ್ದಾರೆ. ಇಬ್ಬರು ಕೊರೊನಾದಿಂದ ಮರಣ ಹೊಂದಿದ್ದಾರೆ.

English summary
The Kerala High Court Thursday imposed a stay on the decision of the state government to provide liquor to those producing a doctor's prescription reporting withdrawal syndrome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X