ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ವಾರಗಳ ಬಳಿಕ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್: ಆದೇಶ ತಡೆಗೆ ಕೇರಳ ಹೈಕೋರ್ಟ್ ನಕಾರ

|
Google Oneindia Kannada News

ಕೊಚ್ಚಿ, ಸೆಪ್ಟೆಂಬರ್ 28: ನಾಲ್ಕು ವಾರಗಳ ಬಳಿಕ ಕೊರೊನಾ ಲಸಿಕೆಯಾದ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಕೇರಳ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ಸೋಮವಾರ ನಿರಾಕರಿಸಿದೆ.

ನಿಗದಿತ 84 ದಿನಗಳಿಗೂ ಮುನ್ನ 10000 ಕ್ಕೂ ಹೆಚ್ಚು ಕಾರ್ಮಿಕರಿಗೆ ಎರಡು ಡೋಸ್ ಲಸಿಕೆ ಹಾಕಿಸಲು ಅನುಮತಿ ಕೋರಿ ಕಿಟಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಕೇಂದ್ರ ಸರ್ಕಾರ ವಿದೇಶಕ್ಕೆ ಹೋಗಬೇಕಾದ ಕೆಲವು ವರ್ಗಗಳ ವ್ಯಕ್ತಿಗಳಿಗೆ ಲಸಿಕೆ ಅಂತರವನ್ನು ಸಡಿಲಗೊಳಿಸಿದೆ ಎಂಬ ಆಧಾರದ ಮೇಲೆ 4 ವಾರಗಳ ನಂತರ ಎರಡನೇ ಡೋಸ್ ಗೆ ಅನುಮತಿ ನೀಡಿ ಎಂದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ನಕಲಿ ಕೋವಿಶೀಲ್ಡ್ ಲಸಿಕೆ ಕುರಿತು ಎಚ್ಚರಿಕೆ ರವಾನಿಸಿದ WHOನಕಲಿ ಕೋವಿಶೀಲ್ಡ್ ಲಸಿಕೆ ಕುರಿತು ಎಚ್ಚರಿಕೆ ರವಾನಿಸಿದ WHO

ಪ್ರಸ್ತುತ 84 ದಿನಗಳ ನಂತರವೇ ಕೋವಿಶೀಲ್ಡ್ ಲಸಿಕೆ ಪಡೆಯಲು ಅವಕಾಶ ಇದೆ. ಆದರೆ 4 ವಾರಗಳ ನಂತರ ಕೋವಿಶೀಲ್ಡ್ ಲಸಿಕೆ ಪಡೆಯಲು ಅನುಮತಿ ನೀಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ ಆದೇಶ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ ಮತ್ತು ಮುಂದಿನ ಗುರುವಾರ ಪ್ರಕರಣದ ವಿಚಾರಣೆ ಮುಂದೂಡಿದೆ.

Kerala HC Declines To Stay Single Bench Order On Early Second jab

ಏಕ ಸದಸ್ಯ ಪೀಠದ ತೀರ್ಪಿಗೆ ತಡೆ ನೀಡದಿದ್ದರೆ ಕೋವಿಡ್ -19 ವಿರುದ್ಧ ಹೋರಾಡುವ ಕೇಂದ್ರ ಸರ್ಕಾರದ ಕಾರ್ಯತಂತ್ರದ ಅನುಷ್ಠಾನದಲ್ಲಿ ಅಸ್ವಸ್ಥತೆ ಉಂಟಾಗುತ್ತದೆ ಎಂದು ಕೇಂದ್ರ ಸರ್ಕಾರದ ವಕೀಲರು ವಾದಿಸಿದರು.

ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ಶರವೇಗದಲ್ಲಿ ಹಬ್ಬುವ ಮೂಲಕ ಆತಂಕ ಮೂಡಿಸಿರುವ 'ಡಬಲ್‌ ಮ್ಯುಟೆಂಟ್‌' (ಬಿ1.617.2) ಕೊರೊನಾ ವೈರಸ್‌ಗೆ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳು ಅತ್ಯಂತ ಪರಿಣಾಮಕಾರಿ ಎಂದು ಇದೇ ಮೊದಲ ಬಾರಿಗೆ ಅಧ್ಯಯನವೊಂದರಲ್ಲಿ ಸಾಬೀತಾಗಿದೆ.

ಫೈಜರ್‌/ಬಯೋಎನ್‌ಟೆಕ್‌ ಕಂಪನಿಯ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಎರಡು ವಾರಗಳ ಬಳಿಕ ಡಬಲ್‌ ಮ್ಯುಟೆಂಟ್‌ ಸೋಂಕಿನಿಂದ ಶೇ.88ರಷ್ಟುರಕ್ಷಣೆ ದೊರೆಯುತ್ತದೆ. ಆಕ್ಸ್‌ಫರ್ಡ್‌/ಆಸ್ಟ್ರಾಜೆನೆಕಾ ಕಂಪನಿಯ (ಭಾರತದಲ್ಲಿ ಕೋವಿಶೀಲ್ಡ್‌) ಲಸಿಕೆಯಿಂದ ಶೇ.60ರಷ್ಟುರಕ್ಷಣೆ ಸಿಗುತ್ತದೆ ಎಂದು ಬ್ರಿಟನ್‌ನ ಆರೋಗ್ಯ ಅಧಿಕಾರಿಗಳು ನಡೆಸಿರುವ ಅಧ್ಯಯನ ವಿವರಿಸಿದೆ.

ಆದರೆ ಈ ಲಸಿಕೆಗಳ ಒಂದೇ ಡೋಸ್‌ ಪಡೆದವರಲ್ಲಿ ಡಬಲ್‌ ಮ್ಯುಟೆಂಟ್‌ನಿಂದ ಕೇವಲ ಶೇ.33ರಷ್ಟುರಕ್ಷಣೆ ದೊರೆಯುತ್ತದೆ ಎಂದು ತಿಳಿಸಿದೆ.

ಈ ಅಧ್ಯಯನವನ್ನು ಐತಿಹಾಸಿಕ ಎಂದು ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಬಣ್ಣಿಸಿದ್ದಾರೆ. ನಾವು ಪ್ರೀತಿಸುವ ಜನರನ್ನು ರಕ್ಷಿಸುವಲ್ಲಿ ನಮ್ಮ ಕೋವಿಡ್‌ ಲಸಿಕೆ ಅಭಿಯಾನ ಎಷ್ಟುಮೌಲ್ಯಯುತವಾಗಿದೆ ಎಂಬುದನ್ನು ಅಧ್ಯಯನ ನಿರೂಪಿಸಿದೆ. ಅಲ್ಲದೆ ಕೊರೊನಾದಿಂದ ರಕ್ಷಣೆ ಪಡೆಯಲು ಎರಡನೇ ಡೋಸ್‌ ಎಷ್ಟುಮಹತ್ವದ್ದು ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಿರಿ ಎಂದು ತಿಳಿಸಿದ್ದಾರೆ.

English summary
A division bench of the Kerala high court on Monday declined to stay an order by a single judge bench of the court directing the Union government to the allow the administration of the second dose of Covishield vaccine after a four-week gap to people who wanted it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X