ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ: ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧ ವಾಪಸ್

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 8: ಶಬರಿಮಲೆ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವ ಪೋರ್ಟಲ್‌ನಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ವಯಸ್ಸಿನ ಅಂತರವಿಲ್ಲದೆ ಎಲ್ಲ ಲಿಂಗದ ಜನರೂ ಪ್ರವೇಶಿಸಿ ದೇವರ ದರ್ಶನ ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ದೈನಂದಿನ ಭಕ್ತರ ಸಂಖ್ಯೆಯ ಮಿತಿಗೆ ನಿಯಂತ್ರಣ ಹಾಕಲಾಗಿದೆ.

ಶಬರಿಮಲೆ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶವಿಲ್ಲ: ಉಲ್ಟಾ ಹೊಡೆದ ಕೇರಳ ಸರ್ಕಾರ?ಶಬರಿಮಲೆ ಸನ್ನಿಧಿಗೆ ಮಹಿಳೆಯರಿಗೆ ಪ್ರವೇಶವಿಲ್ಲ: ಉಲ್ಟಾ ಹೊಡೆದ ಕೇರಳ ಸರ್ಕಾರ?

ಭಲ್ತರು ಟ್ರ್ಯಾವಂಕೋರ್ ದೇವಸ್ವಂ ಮಂಡಳಿ ಮತ್ತು ಕೇರಳ ಪೊಲೀಸ್ ಇಲಾಖೆ ನಡೆಸುತ್ತಿರುವ ಪೋರ್ಟಲ್‌ನಲ್ಲಿ ತಮ್ಮ ಯಾತ್ರೆಯ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಆದರೆ ವೆಬ್ ಪೋರ್ಟಲ್‌ನಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಟಿಕೆಟ್ ಖರೀದಿಸಲು ಅವಕಾಶವಿಲ್ಲ ಎಂದು ನಮೂದಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ಪೊಲೀಸ್ ಇಲಾಖೆ ಇ ಪೋರ್ಟಲ್ ನಿಭಾಯಿಸುವುದರಿಂದ ಕೇರಳ ಸರ್ಕಾರವೇ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು.

Kerala Govt Withdraws Curbs On Womens Entry To Sabarimala

ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ವೆಬ್ ಪೋರ್ಟಲ್‌ನಲ್ಲಿ ಮಹಿಳೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಉಲ್ಲೇಖಿಸಿದ್ದ ಸೂಚನೆಯನ್ನು ತೆಗೆದುಹಾಕಿದೆ. ಇದರಿಂದ ಎಲ್ಲ ವಯಸ್ಸಿನ ಮಹಿಳಾ ಭಕ್ತರು ಕೂಡ ಶಬರಿಮಲೆಗೆ ತೆರಳಲು ಟಿಕೆಟ್ ಪಡೆಯಲು ಅವಕಾಶ ನೀಡಲಾಗಿದೆ.

ಶಬರಿಮಲೆ: ದರ್ಶನಕ್ಕೆ ಬುಕಿಂಗ್ ಆರಂಭವಾದ 12 ಗಂಟೆಯಲ್ಲಿಯೇ ಸ್ಥಗಿತಶಬರಿಮಲೆ: ದರ್ಶನಕ್ಕೆ ಬುಕಿಂಗ್ ಆರಂಭವಾದ 12 ಗಂಟೆಯಲ್ಲಿಯೇ ಸ್ಥಗಿತ

ಶಬರಿಮಲೆಗೆ ತೆರಳುವ ಭಕ್ತರ ದೈನಂದಿನ ಮಿತಿಯನ್ನು ಇತ್ತೀಚೆಗೆ 1,000 ದಿಂದ 2,000ಕ್ಕೆ ಮತ್ತು ವಾರಾಂತ್ಯದ ದಿನಗಳು ಹಾಗೂ ರಜಾದಿನಗಳಲ್ಲಿ 2,000 ದಿಂದ 3,000ಕ್ಕೆ ಏರಿಸಲಾಗಿತ್ತು.

English summary
Kerala government has withdrawn the restriction over women's entry to Sabarimala on its booking portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X