• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ ಜುಲೈ 17, 18ರಂದು ಸಂಪೂರ್ಣ ಲಾಕ್‌ಡೌನ್‌ ಘೋಷಣೆ

|
Google Oneindia Kannada News

ತಿರುವನಂತಪುರಂ, ಜುಲೈ 14: ಕೇರಳದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ವೇಗ ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಸರ್ಕಾರ ಜುಲೈ 17 ಮತ್ತು 18ರಂದು ಸಂಪೂರ್ಣ ಲಾಕ್‌ಡೌನ್‌ನನ್ನು ಜಾರಿಗೊಳಿಸುವುದಕ್ಕೆ ತೀರ್ಮಾನಿಸಿದೆ.

ರಾಜ್ಯದಲ್ಲಿ ಕಳೆದ ಏಳು ದಿನಗಳ ಸರಾಸರಿ ಪರೀಕ್ಷಾ ಸಕಾರಾತ್ಮಕ ದರ (ಟಿಪಿಆರ್) ಆಧಾರದ ಮೇಲೆ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳ (ಎಲ್‌ಎಸ್‌ಜಿಐ) ವರ್ಗೀಕರಣವನ್ನು ಮುಂದುವರಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

"ಕೇರಳದಲ್ಲಿ ಜುಲೈ 17 ಮತ್ತು 18ರಂದು ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗುತ್ತದೆ. ಕಳೆದ ಜೂನ್ 12 ಮತ್ತು 13ರಂದು ಜಾರಿಗೊಳಿಸಿದ ಲಾಕ್‌ಡೌನ್‌ ನಿಯಮಗಳನ್ನು ಮುಂದವರಿಸುವುದು," ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನಾಲ್ಕು ಭಾಗಗಳಲ್ಲಿ ವರ್ಗೀಕರಣ:

ರಾಜ್ಯದಲ್ಲಿ ಶೇ.6ರಷ್ಟು ಪಾಸಿಟಿವಿಟಿ ದರವನ್ನು ಹೊಂದಿರುವ 165 ಸ್ಥಳೀಯ ಸಂಸ್ಥೆಗಳನ್ನು ಎ ಕೆಟಗರಿ, ಶೇ.6 ರಿಂದ 12ರಷ್ಟು ಪಾಸಿಟಿವಿಟಿ ದರವನ್ನು ಹೊಂದಿರುವ 473 ಸ್ಥಳೀಯ ಸಂಸ್ಥೆಗಳನ್ನು ಬಿ ಕೆಟಗರಿ, ಶೇ.12 ರಿಂದ 18ರಷ್ಟು ಪಾಸಿಟಿವಿಟಿ ದರವುಳ್ಳ 316 ಸ್ಥಳೀಯ ಸಂಸ್ಥೆಗಳನ್ನು ಸಿ ಕೆಟಗರಿ ಹಾಗೂ ಅಂತಿಮವಾಗಿ ಶೇ.18ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ಹೊಂದಿರುವ 80 ಸ್ಥಳೀಯ ಸಂಸ್ಥೆಗಳನ್ನು ಡಿ ಕೆಟಗರಿಯಲ್ಲಿ ವಿಂಗಡಿಸಲಾಗಿದೆ.

ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿದ ಅಂಶಗಳು:

* ಕೇರಳ ಸರ್ಕಾರದ ಆದೇಶದಂತೆ ವಾರದ ಐದು ದಿನ ಬ್ಯಾಂಕ್ ಸಾರ್ವಜನಿಕ ಸೇವೆಗೆ ತೆರೆದಿರುತ್ತದೆ.

* ಈಗಾಗಲೇ ಅನುಮತಿ ನೀಡಿರುವಂತೆ ಎ, ಬಿ, ಮತ್ತು ಸಿ ಕೆಟಗರಿಯ ಪ್ರದೇಶದಲ್ಲಿ ರಾತ್ರಿ 8 ಗಂಟೆವರೆಗೂ ಅಂಗಡಿಗಳನ್ನು ತೆರೆಯಬಹುದು

* ಕೊರೊನಾವೈರಸ್ ಪಾಸಿಟಿವಿಟಿ ದರ ಆಧಾರದ ಮೇಲೆ ಎ, ಬಿ, ಸಿ ಕೆಟಗರಿ ಪ್ರದೇಶಗಳಲ್ಲೂ ಸೂಕ್ಷ್ಣ ವಲಯ ಮತ್ತು ಅತಿಸೂಕ್ಷ್ಮ ವಲಯಗಳನ್ನು ಗುರುತಿಸಿ, ವಿಶೇಷ ನಿರ್ಬಂಧಗಳನ್ನು ವಿಧಿಸಲಾಗುವುದು.

* ಜುಲೈ 15ರ ಮಧ್ಯರಾತ್ರಿ 12 ಗಂಟೆಯಿಂದ ಮಾರ್ಗಸೂಚಿಗಳು ಜಾರಿಗೆ ಬರಲಿದೆ

English summary
Kerala Govt Imposes Complete Lockdown On July 17, 18: Read Here For More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X