ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಅಭಿವೃದ್ಧಿಗೆ 739 ಕೋಟಿ ಯೋಜನೆ ಪ್ರಕಟಿಸಿದ ಕೇರಳ ಸರ್ಕಾರ

|
Google Oneindia Kannada News

ಶಬರಿಮಲೆ, ಜನವರಿ 31: ಶಬರಿಮಲೆ ಅಯ್ಯಪ್ಪ ದೇವಾಲಯ ಅಭಿವೃದ್ಧಿಗೆ ಕೇರಳ ಸರ್ಕಾರವು 739 ಕೋಟಿಯ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ.

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಪರ ನಿಂತಿದ್ದ ಕೇರಳ ಸರ್ಕಾರದ ಬಗ್ಗೆ ಕೇರಳದಲ್ಲಿ ವಿರೋಧದ ದನಿಯೂ ಕೇಳಿಬಂದಿತ್ತು ಅದನ್ನು ಸರಿದೂಗಿಸಲೆಂದು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶಬರಿಮಲೆಗೆ ಮಹಿಳೆ ಪ್ರವೇಶ: ‌ಸುಪ್ರೀಂನಲ್ಲಿ ಫೆ. 6ಕ್ಕೆ ಮೇಲ್ಮನವಿ ವಿಚಾರಣೆ ಶಬರಿಮಲೆಗೆ ಮಹಿಳೆ ಪ್ರವೇಶ: ‌ಸುಪ್ರೀಂನಲ್ಲಿ ಫೆ. 6ಕ್ಕೆ ಮೇಲ್ಮನವಿ ವಿಚಾರಣೆ

ಶಬರಿಮಲೆಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ ಎಂದು ಸರ್ಕಾರವು ಹೇಳಿದ್ದು, 739 ಕೋಟಿ ಹಣವನ್ನು ಶಬರಿಮಲೆಯಲ್ಲಿ ಯಾವ ಯಾವ ಕಾರಣಕ್ಕೆ ವೆಚ್ಚ ಮಾಡಬೇಕು ಎಂದು ನೀಲನಕ್ಷೆಯನ್ನು ಸಹ ತಯಾರಿಸಿದೆ.

Kerala governmet gives 739 crore to Sabarimala development

ಪಂಪದಲ್ಲಿ 10 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಚರಂಡಿ ಸಂಸ್ಕರಣಾ ಘಟನವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಎರುಮಲೈ ಮತ್ತು ನಿರಕ್ಕುಲ್‌ನಲ್ಲಿ 147.75 ಕೋಟಿ ವೆಚ್ಚದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ. ಶಬರಿಮಲೆಯ ರಸ್ತೆಗಳಿಗೆ 200 ಕೋಟಿ ಮೀಸಲಿಡಲಾಗಿದೆ.

ಸುಪ್ರೀಂ ತೀರ್ಪು ನಂತರ ಶಬರಿಮಲೆ ಪ್ರವೇಶಿಸಿದ ಮಹಿಳೆಯರೆಷ್ಟು?ಸುಪ್ರೀಂ ತೀರ್ಪು ನಂತರ ಶಬರಿಮಲೆ ಪ್ರವೇಶಿಸಿದ ಮಹಿಳೆಯರೆಷ್ಟು?

ತಿರುವಾಂಕೂರ್ ದೇವಸ್ವಂ ಬೋರ್ಡ್‌ಗೆ 100 ಕೋಟಿ ಅನುದಾನ ನೀಡಲು ನಿಶ್ಚಯಿಸಲಾಗಿದೆ. ಕೊಚ್ಚಿ, ಮಲಬಾರ್ ದೇವಸ್ವಂ ಬೋರ್ಡ್‌ಗೆ 35 ಕೋಟಿ ನೀಡಲಾಗುವುದು ಎಂದು ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ.

ಶಬರಿಮಲೆ ಪ್ರವೇಶಿಸಿದ್ದ ಮಹಿಳೆ ಮನೆಯಿಂದ ಹೊರಕ್ಕೆ ಶಬರಿಮಲೆ ಪ್ರವೇಶಿಸಿದ್ದ ಮಹಿಳೆ ಮನೆಯಿಂದ ಹೊರಕ್ಕೆ

ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯದಲ್ಲಿ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಜನಾಕ್ರೋಶವನ್ನು ತಣಿಸಲೆಂದು ಸರ್ಕಾರವು ಶಬರಿಮಲೆಗೆ ಬೃಹತ್ ಮೊತ್ತದ ಅನುದಾನ ನೀಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

English summary
Kerala government gives 739 crore to Sabarimala development told Finance Minister TM Thomas Isaac.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X