• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ ಚಿನ್ನ ಕಳ್ಳಸಾಗಣೆ: 5 ಗಂಟೆ ಟಿವಿ ಪತ್ರಕರ್ತನ ವಿಚಾರಣೆ

|

ತಿರುವನಂತಪುರಂ, ಆಗಸ್ಟ್ 27: ಕೇರಳ ಅಕ್ರಮ ಚಿನ್ನ ಕಳ್ಳ ಸಾಗಣೆ ಕುರಿತಂತೆ ಕೇಳದ ಸುದ್ದಿವಾಹಿನಿ ಆಂಕರ್ ಒಬ್ಬರನ್ನು ಕಸ್ಟಂ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಜನಮ್ ಟಿವಿ ಕೋ-ಆರ್ಡಿನೇಟಿಂಗ್ ಎಡಿಟರ್ ಅನಿಲ್ ನಂಬಿಯಾರ್ ಅವರನ್ನು ಕಸ್ಟಂ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಕುರಿತಂತೆ ಪ್ರಶ್ನೆ ಮಾಡಿದ್ದಾರೆ.

30 ಕೆಜಿ ಚಿನ್ನದ ಸ್ಮಗ್ಲರ್ ಸ್ವಪ್ನಾಗೂ ಸಿಎಂ ಕಚೇರಿಗೂ ಏನಿದು ನಂಟು?

ಸ್ವಪ್ನ ಸುರೇಶ್ ಜೊತೆ ಅವರಿಗಿರುವ ಸಂಬಂಧದ ಬಗ್ಗೆ ಐದು ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅವರ ಕಾಲ್ ರೆಕಾರ್ಡ್‌ನಲ್ಲಿ ಅನಿಲ್ ಅವರು ಜುಲೈ 5 ರಂದು ಸ್ವಪ್ನ ಅವರಿಗೆ ಕರೆ ಮಾಡಿದ್ದಾರೆ ಎಂದಿದೆ. ಅದೇ ದಿನ ಕಸ್ಟಂ ಅಧಿಕಾರಿಗಳು ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ 30 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು.

ಒಂದು ಗಂಟೆ ಬಳಿಕ ಅಂದರೆ ಮಧ್ಯಾಹ್ನ 1.43ರ ವೇಳೆ ಸ್ವಪ್ನ ಸುರೇಶ್ ನಂಬಿಯಾರ್‌ಗೆ ಕರೆ ಮಾಡಿದ್ದರು. ಬಳಿಕ ಆಕೆ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಳು.

ಕೇರಳ ರಾಜ್ಯ ಸಚಿವಾಲಯದಲ್ಲಿ ಸಂಜೆ 4.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಆದರೆ ಹಲವು ಕಡತಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ಎರಡನೇ ಮಹಡಿಯಲ್ಲಿರುವ ಶಿಷ್ಟಾಚಾರ ವಿಭಾಗದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಅಕ್ರಮ

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಇಲಾಖೆಯನ್ನು ಗುರಿಯಾಗಿಸಿಕೊಂಡು ಎನ್‌ಐಎ ತನಿಖೆ ನಡೆಸುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ ಕಡತಗಳು, ದಾಖಲೆಗಳು, ಕಂಪ್ಯೂಟರ್‌ಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಸಾರ್ವಜನಿಕ ಆಡಳಿತ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಪಿ. ಹನಿ ಹೇಳಿದ್ದಾರೆ.

English summary
The government has approved 78 new routes under the fourth round of Regional Connectivity Scheme (RCS) to enhance connectivity to remote areas of the country, the Ministry of Civil Aviation (MoCA) said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X