ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ ಸ್ಮಗಲಿಂಗ್ : ಸ್ವಪ್ನ, ಸಂದೀಪ್‌ಗೆ ಕೊವಿಡ್19 ಭೀತಿಯಿಲ್ಲ

|
Google Oneindia Kannada News

ಕೊಚ್ಚಿ, ಜುಲೈ 13: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸಂದೀಪ್ ಅವರ ಕೊವಿಡ್ 19 ಪರೀಕ್ಷೆ ಫಲಿತಾಂಶ ಹೊರ ಬಂದಿದೆ.

ಬೆಂಗಳೂರಿನ ಕೋರಮಂಗಲದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಭಾನುವಾರದಂದು ಕೊಚ್ಚಿಯಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದಲ್ಲಿ ಎನ್ಐಎ ಕೋರಿಕೆ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 14 ದಿನಗಳ ಕಾಲ ವಶಕ್ಕೆ ನೀಡಲಾಗಿದೆ.

ಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕಎನ್ಐಎ ಕಸ್ಟಡಿಗೆ ಸ್ವಪ್ನ ಸುರೇಶ್: ಕೋರಮಂಗಲದಿಂದ ಕೊಚ್ಚಿ ತನಕ

ಎರ್ನಾಕುಲಂನ ಆಲುವ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆರೋಪಿಗಳಿಗೆ ಕೊವಿಡ್ 19 ಪರೀಕ್ಷೆ ನಡೆಸಲಾಯಿತು. ಸದ್ಯ ಕೊವಿಡ್19 ಪರೀಕ್ಷೆ ಫಲಿತಾಂಶ ಹೊರ ಬರುವ ತನಕ ಐಸೋಲೇಷನ್ ಕೇಂದ್ರದಲ್ಲಿರಿಸಲಾಗಿತ್ತು. ಸ್ವಪ್ನರನ್ನು ತ್ರಿಸ್ಸೂರಿನ ಅಂಬಿಲಿಕ್ಕಾಳ ಹಾಸ್ಟೆಲ್ ನಲ್ಲಿರಿಸಿದ್ದರೆ, ಸಂದೀಪ್ ಆಲುವಾದ ಕಾರುಕುಟ್ಟಿಯಲ್ಲಿದ್ದಾರೆ.

Kerala Gold Smuggling Case: Swapna, Sandeep Test Negative For Covid-19

ಕೊವಿಡ್ 19 ಭೀತಿಯಿಲ್ಲ: ಇಬ್ಬರು ಆರೋಪಿಗಳಿಗೂ ಕೋವಿಡ್ 19 ಭೀತಿಯಿಲ್ಲ. ಆಲುವಾ ಜಿಲ್ಲಾಸ್ಪತ್ರೆಯಲ್ಲಿ ಪಡೆಯಲಾದ ಆರ್ ಟಿ ಪಿಸಿಆರ್ ಸ್ವಾಬ್ಸ್ ಪರೀಕ್ಷೆಗಳ ಫಲಿತಾಂಶ ಹೊರ ಬಂದಿದ್ದು, ಕೊವಿಡ್ 19 ನೆಗಟಿವ್ ಎಂದು ವರದಿ ಬಂದಿದೆ.

ಇಬ್ಬರು ಆರೋಪಿಗಳನ್ನು ಮತ್ತೊಮ್ಮೆ ಸೋಮವಾರದಂದು ಮತ್ತೊಮ್ಮೆ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಇನ್ನೂ 10 ದಿನಗಳ ಕಾಲ ಕಸ್ಟಡಿ ಹೆಚ್ಚಿಸಲು ಎನ್ಐಎ ತಂಡ ಕೋರಲಿದೆ.

ಈ ಪ್ರಕರಣದಲ್ಲಿ ಸರಿತ್ ಪಿಎಸ್ ಮೊದಲ ಆರೋಪಿ(ಎ1) ಆಗಿದ್ದರೆ, ಸ್ವಪ್ನ ಸುರೇಶ್(ಎ2), ನಾಪತ್ತೆಯಾಗಿರುವ ಫಜೀಲ್ ಫರೀದ್(ಎ3) ಹಾಗೂ ಸಂದೀಪ್ ನಾಯರ್ (ಎ4) ಉಳಿದ ಆರೋಪಿಗಳಾಗಿದ್ದಾರೆ. ಫಜೀಲ್ ಪತ್ತೆಯಾಗಿ ಕೊಚ್ಚಿ ನಗರ ಡಿಸಿಪಿ ಜಿ ಪೂಂಗುಳಿ ನೇತೃತ್ವದ ತಂಡವನ್ನು ರಚಿಸಲಾಗಿದೆ ಎಂದು ಕೇರಳ ಡಿಜಿಪಿ ತಿಳಿಸಿದ್ದಾರೆ.

English summary
Kerala gold smuggling case: Accused Swapna suresh, Sandeep Nair both tested negative for COVID-19 are under National Investigation Agency (NIA) custody in Kochi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X