ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚಿನ್ನದ ಸ್ಮಗಲಿಂಗ್: ಶಿವಶಂಕರ್ ಜಾಮೀನು ಅರ್ಜಿ ವಜಾ

|
Google Oneindia Kannada News

ತಿರುವನಂತಪುರಂ, ಅ. 28: ಕೇರಳ ಸರ್ಕಾರವನ್ನೇ ಅಲ್ಲಾಡಿಸಿರುವ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಸಿಎಂ ಮಾಜಿ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಎಂ ಶಿವಶಂಕರ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಬುಧವಾರದಂದು ತಿರಸ್ಕರಿಸಿದೆ.

ಈ ಪ್ರಕರಣವನ್ನು ಎನ್ಐಎ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಜಾಮೀನು ತಿರಸ್ಕೃತಗೊಂಡಿದ್ದರಿಂದ ಶಿವಶಂಕರ್ ರನ್ನು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟುದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟು

ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಅವರಿಗೆ ಸಿಎಂ ಸಚಿವಾಲಯದ ಅಧೀನದ ಐಟಿ ಇಲಾಖೆಯಲ್ಲಿ ಗುತ್ತಿಗೆ ಆಧಾರಿತ ಹುದ್ದೆಯನ್ನು ಕೊಡಿಸುವಲ್ಲಿ ಶಿವಶಂಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಆರೋಪವಿದೆ. ಆರೋಪ ಕೇಳಿ ಬಂದ ಬಳಿಕ ಸಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಿವಶಂಕರ್ ಅವರನ್ನು ತೆಗೆದು ಹಾಕಲಾಗಿದೆ. ಜೊತೆಗೆ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕ್ಲೀನ್ ಚಿಟ್ ಸಿಕ್ಕಿರುವ ಸುದ್ದಿ ಬಂದಿದೆ.

ಆರ್ಥಿಕ ಅಪರಾಧ ಎಸಗಲು ನೆರವು ಆರೋಪ

ಆರ್ಥಿಕ ಅಪರಾಧ ಎಸಗಲು ನೆರವು ಆರೋಪ

ಸ್ವಪ್ನ ಸುರೇಶ್ ಹಾಗೂ ಗ್ಯಾಂಗಿಗೆ ಆರ್ಥಿಕ ಅಪರಾಧ ಎಸಗಲು ನೆರವಾಗಿದ್ದು, ಈ ಹಿಂದಿನ ವಿಚಾರಣೆ ವೇಳೆ ಯಾವುದೇ ವಿಷಯ ಬಾಯ್ಬಿಟ್ಟಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ಮಂಡಿಸಿದ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಈ ಮುಂಚೆ ಅ.28ರ ತನಕ ಶಿವಶಂಕರ್ ಬಂಧಿಸದಂತೆ ಕೋರ್ಟ್ ಆದೇಶಿಸಿತ್ತು. ಬೆನ್ನುನೋವಿಗಾಗಿ ಆಯುರ್ವೇದ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಶಿವಶಂಕರ್ ಅವರು ಈ ಕೇಸ್ ಮೇಲೆ ಬಂದಿರುವುದರಿಂದ ಉಳಿದುಕೊಳ್ಳಲು ಹೋಟೆಲ್ ರೂಮ್ ಕೂಡಾ ಸಿಗುತ್ತಿಲ್ಲ. ನಾನು ಎಲ್ಲೂ ಪರಾರಿಯಾಗುವುದಿಲ್ಲ. ಜಾಮೀನು ಮಂಜೂರು ಮಾಡಿ ಎಂದು ಮನವಿ ಸಲ್ಲಿಸಿದ್ದರು.

ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ತಂಡ(ಎನ್ಐಎ), ಕಸ್ಟಮ್ಸ್ ಅಧಿಕಾರಿಗಳು ಹಾಗೂ ಇನ್ನೊಮ್ಮೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಒಂದು ಸುತ್ತಿನ ವಿಚಾರಣೆ ಪೂರೈಸಿವೆ.

ರಾಜತಾಂತ್ರಿಕ ರಕ್ಷಣೆಯ ದುರುಪಯೋಗ

ರಾಜತಾಂತ್ರಿಕ ರಕ್ಷಣೆಯ ದುರುಪಯೋಗ

ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ರಾಜತಾಂತ್ರಿಕ ಕಚೇರಿಯ ಮಾಜಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಆರೋಪಿಸಲಾಗಿದೆ.

ಚಿನ್ನ ಸ್ಮಗಲಿಂಗ್: ಪಿಣರಾಯಿಗೆ ಕ್ಲೀನ್ ಚಿಟ್ ಕೊಟ್ಟ ಎನ್ಐಎಚಿನ್ನ ಸ್ಮಗಲಿಂಗ್: ಪಿಣರಾಯಿಗೆ ಕ್ಲೀನ್ ಚಿಟ್ ಕೊಟ್ಟ ಎನ್ಐಎ

200 ಕೆ.ಜಿಗೂ ಅಧಿಕ ಚಿನ್ನ ಅಕ್ರಮ ಸಾಗಣೆ

200 ಕೆ.ಜಿಗೂ ಅಧಿಕ ಚಿನ್ನ ಅಕ್ರಮ ಸಾಗಣೆ

ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ. 2019ರಿಂದ ಇಲ್ಲಿ ತನಕ ಸುಮಾರು 200 ಕೆ.ಜಿಗೂ ಅಧಿಕ ಚಿನ್ನವನ್ನು ಈ ರೀತಿ ಅಕ್ರಮವಾಗಿ ರವಾನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ವಪ್ನ ಪ್ರಭ ಸುರೇಶ್, ಫಾಜೀಲ್ ಫರೀದ್, ಸಂದೀಪ್ ನಾಯರ್ ಹಾಗೂ ಸರೀತ್ ಕುಮಾರ್ ಅವರ ವಿಚಾರಣೆಗೆ ಅಗತ್ಯವಿದೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ.

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada
ಸಿಎಂ ಕುರ್ಚಿಗೂ ಕಟಂಕವಾಗಿದ್ದ ಪ್ರಕರಣ

ಸಿಎಂ ಕುರ್ಚಿಗೂ ಕಟಂಕವಾಗಿದ್ದ ಪ್ರಕರಣ

ಈ ಚಿನ್ನದ ಸ್ಮಗಲಿಂಗ್ ಪ್ರಕರಣಕ್ಕೂ ಸಿಎಂ ಕಚೇರಿಗೂ ನೇರ ಸಂಬಂಧವಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಆರೋಪಿಸಿದ್ದವು. ಸರಣಿ ಪ್ರತಿಭಟನೆ ಮೂಲಕ ಸಿಎಂ ಪಿಣರಾಯಿ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಸಿಪಿಎಂ ನೇತೃತ್ವದ ಎಲ್ ಡಿ ಎಫ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ಆದರೆ, ಪಿಣರಾಯಿ ವಿಶ್ವಾಸಮತ ಗಳಿಸಿದ್ದರು.

ಯುಎಇ ಕಾನ್ಸುಲೇಟ್ ಅಧಿಕಾರಿಯಾಗಿದ್ದ ಪಿಎಸ್ ಸರೀತ್, ಮಾಜಿ ಉದ್ಯೋಗಿ ಸ್ವಪ್ನ ಸುರೇಶ್, ಸಂದೀಪ್ ನಾಯರ್, ಫೈಜಲ್ ಫರೀದ್ ಅವರ ವಿರುದ್ಧ Unlawful Activities (Prevention) Act ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಎನ್ಐಎ ತನಿಖೆ ಮುಂದುವರೆಸಿದೆ.

English summary
The Kerala High Court on Wednesday dismissed the anticipatory bail pleas of suspended IAS officer M Sivasankar, facing theEnforcement Directorate and Customs probe in the Kerala gold smuggling case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X