• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೋರ್ಜರಿ ಕೇಸಿನಲ್ಲಿ ಸ್ಮಗಲಿಂಗ್ ಆರೋಪಿ ಸ್ವಪ್ನ ಬಂಧನ

|

ತಿರುವನಂತಪುರಂ, ಸೆ. 3: ಕೇರಳದ ಚಿನ್ನ ಸ್ಮಗಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ಮೇಲೆ ಕೇರಳ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದು ನೆನಪಿರಬಹುದು. ನಕಲಿ ಪ್ರಮಾಣ ಪತ್ರ ನೀಡಿ ಸಿಎಂ ಪಿಣರಾಯಿ ವಿಜಯನ್ ಹೊಂದಿರುವ ಐಟಿ ಇಲಾಖೆಯಡಿಯಲ್ಲಿ ಸ್ವಪ್ನ ಕಾರ್ಯ ನಿರ್ವಹಿಸಲು ಗುತ್ತಿಗೆ ಪಡೆದುಕೊಂಡಿದ್ದು ಹೇಗೆ ಎಂದು ತನಿಖೆ ನಡೆಸಲಾಗಿತ್ತು. ಈಗ ಸ್ವಪ್ನ ಬಂಧನ ಹಾಗೂ ಕಸ್ಟಡಿಗಾಗಿ ಕೋರ್ಟಿಗೆ ಮನವಿ ಸಲ್ಲಿಸಲಾಗಿದೆ.

   Narendra Modiಯವರ Twitter ಹಾಗು Website hacked | Oneindia Kannada

   ಚಿನ್ನ ಸ್ಮಗಲಿಂಗ್ ಪ್ರಕರಣದಲ್ಲಿ ಆರೋಪಿಯಾಗಿ ಕಕ್ಕನಾಡ್ ಜಿಲ್ಲೆ ಜೈಲಿನಲ್ಲಿರುವ ಸ್ವಪ್ನ ಸುರೇಶ್ ರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲು ತಮ್ಮ ವಶಕ್ಕೆ ನೀಡಬೇಕೆಂದು ಕೇರಳ ಪೊಲೀಸರು ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

   ಚಿನ್ನ ಸ್ಮಗಲಿಂಗ್: ಪಿಣರಾಯಿಗೆ ಕ್ಲೀನ್ ಚಿಟ್ ಕೊಟ್ಟ ಎನ್ಐಎ

   ಕೇರಳ ಐಟಿ ಮೂಲಸೌಕರ್ಯ ಲಿಮಿಟೆಡ್ ನಲ್ಲಿ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿದ್ದ ಸ್ವಪ್ನ ಅವರು ಈ ಪ್ರತಿಷ್ಠಿತ ಹುದ್ದೆ ಪಡೆಯಲು ನಕಲಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ದೂರು ದಾಖಲಾಗಿತ್ತು. ಕಂಟೋನ್ಮೇಂಟ್ ಪೊಲೀಸರು ದೂರು ದಾಖಲಿಸಿಕೊಂಡು,ಸ್ಪೇಸ್ ಪಾರ್ಕ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸಲು ಸ್ವಪ್ನ ನೀಡಿದ್ದ ಪದವಿ ಪ್ರಮಾಣ ಪತ್ರ ನಕಲಿ ಎಂದು ತನಿಖೆಯಿಂದ ಕಂಡುಕೊಂಡಿದ್ದಾರೆ. ಫೋರ್ಜರಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಸ್ವಪ್ನ ಅಲ್ಲದೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್, ವಿಷನ್ ಟೆಕ್ನಾಲಜೀಸ್ ಸಂಸ್ಥೆ ಕೂಡಾ ಆರೋಪಿಗಳಾಗಿದ್ದಾರೆ.

   ಇದಕ್ಕೂ ಮುನ್ನ ಮಹಾರಾಷ್ಟ್ರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಟೆಕ್ನಾಲಜೀಸ್ ವಿವಿ ಕೂಡಾ ಸ್ವಪ್ನ ನೀಡಿದ್ದ ಬಿ.ಕಾಂ ಪ್ರಮಾಣ ಪತ್ರ ನಕಲಿ ಎಂದು ದೃಢಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಡುವೆ ಸ್ವಪ್ನಗೆ ಕೆಲಸ ಕೊಡಿಸಲು ನೆರವಾದ ಶಿವಶಂಕರನ್ ಅವರನ್ನು ಸಿಎಂ ಆಪ್ತ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿದೆ.

   English summary
   Kerala Gold Smuggling Case: accused Swapna Suresh arrested by police in another case and Police to approach court seeking her custody.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X