• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗೇರಿದೆ ಕೇರಳ ಚುನಾವಣೆ: ಅಯ್ಯಪ್ಪ ಸ್ವಾಮಿಗೆ ಇರುಮುಡಿ ಸಮರ್ಪಿಸಿದ ಡಾ. ಅಶ್ವಥ್ ನಾರಾಯಣ

|

ತಿರುವನಂತಪುರಂ, ಮಾ. 16: ಕೇರಳ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಕರ್ನಾಟಕ ಡಿಸಿಎಂ ಡಾ. ಸಿ.ಎನ್.‌ಅಶ್ವಥ್ ನಾರಾಯಣ ಅವರು ಕೇರಳದಲ್ಲಿ ಭರ್ಜರಿ ಚುನಾವಣೆ ತಯಾರಿ ನಡೆಸಿದ್ದಾರೆ. ಡಾ. ಸಿ.ಎನ್.‌ಅಶ್ವಥ್ ನಾರಾಯಣ ಅವರು ಮಂಗಳವಾರ ಚುನಾವಣಾ ಪ್ರಚಾರದ ಮಧ್ಯೆ ಶಬರಿಮಲೆಗೆ ಮಾಲಾಧಾರಿಯಾಗಿ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.

ಪಂಪಾ ನದಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು, ಸಂಜೆ ಸನ್ನಿಧಾನ ಸೇರಿಕೊಂಡರು. ಅದೇ ವೇಳೆಯಲ್ಲಿ ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ ಸಾಂಪ್ರದಾಯಿಕ ಪಡಿಪೂಜೆಯಲ್ಲಿ ಭಾಗಿಯಾಗಿ, ನಂತರ ಸ್ವಾಮಿಯ ದರ್ಶನ ಪಡೆದುಕೊಂಡರು.

ಡಾ. ಅಶ್ವಥ್ ನಾರಾಯಣ ಇರುಮುಡಿ ಸಮರ್ಪಣೆ

ಡಾ. ಅಶ್ವಥ್ ನಾರಾಯಣ ಇರುಮುಡಿ ಸಮರ್ಪಣೆ

ಈ ಸಂದರ್ಭದಲ್ಲಿ ದೇಗುಲದ ಮುಖ್ಯ ತಂತ್ರಿ ರಾಜೀವ ಕಂದರಾರು ಹಾಗೂ ಮೇಲ್‌ಶಾಂತಿ ಅವರಾದ ವಿ.ಕೆ. ಜಯರಾಜ್‌ ಪೋಟ್ರಿ ಅವರು ಪೂಜೆ ನೆರವೇರಿಸಿ ಪವಿತ್ರವಾದ ಎಲೆ ಪ್ರಸಾದ ನೀಡಿದರು. ಡಾ. ಅಶ್ವಥ್ ನಾರಾಯಣ ಅವರು ಸ್ವಾಮಿಯ ಸನ್ನಿಧಾನದ ಸ್ವರ್ಣ ಮೆಟ್ಟಿಲು ಮುಂದೆ ನಿಂತು ಇರುಮುಡಿ ಸಮರ್ಪಿಸಿದರು.

ಇದೇ ವೇಳೆ ದೇವಳದ ಅರ್ಚಕರು, ಮುಖ್ಯ ತಂತ್ರಿ ರಾಜೀವ ಕಂದರಾರು ಉಪ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಗೌರವಿಸಿದರಲ್ಲದೆ, ಕ್ಷೇತ್ರದ ಮಹಿಮೆಯ ಬಗ್ಗೆ ಮಾಹಿತಿ ನೀಡಿದರು.

ಪಂದಳಮ್ ಅರಮನೆಗೆ ಡಾ. ಅಶ್ವಥ್ ನಾರಾಯಣ ಭೇಟಿ

ಪಂದಳಮ್ ಅರಮನೆಗೆ ಡಾ. ಅಶ್ವಥ್ ನಾರಾಯಣ ಭೇಟಿ

ಇನ್ನು ಮಂಗಳವಾರ ಬೆಳಗ್ಗೆ ಕೇರಳದ ಪಥನಂತಿಟ್ಟ ನಗರಕ್ಕೆ ಆಗಮಿಸಿದ್ದ ಡಾ. ಅಶ್ವಥ್ ನಾರಾಯಣ ಅವರು, ಅಲ್ಲಿಂದ ನೇರವಾಗಿ ಶಬರಿಮಲೆಗೆ ತರಳುವ ಮಾರ್ಗಮಧ್ಯೆ ಪಂದಳಮ್ ಅರಮನೆಗೆ ಭೇಟಿ ನೀಡಿದರು. ಅಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅವರ ಸಾಕುತಂದೆ ಮಹಾರಾಜ ಶ್ರೀ ರಾಜಶೇಖರ ಪೆರುಮಾಳ್‌ ಅವರ ವಂಶಸ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ರಾಜ ಕುಟುಂಬದ 102 ವರ್ಷದ ಹಿರಿಯ ಅಜ್ಜಿ ಮಾಕಮ್ಮನಾಳ್ ತನ್ವಾಂಗಿ ತಂಪುರುಟ್ಟೈ ಅವರಿಂದ ಡಿಸಿಎಂ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.

ತಿರುವಾಭರಣಗಳ ಸ್ಟ್ರಾಂಗ್ ರೂಂಗೆ ಭೇಟಿ

ತಿರುವಾಭರಣಗಳ ಸ್ಟ್ರಾಂಗ್ ರೂಂಗೆ ಭೇಟಿ

ಮಕರವಿಳಕ್ಕು ಸಮಯದಲ್ಲಿ ಸ್ವಾಮಿ ಅಯ್ಯಪ್ಪಗೆ ಅಲಂಕಾರ ಮಾಡುವ ತಿರುವಾಭರಣಗಳ ಸ್ಟ್ರಾಂಗ್ ರೂಂ ಕೂಡ ಇದೇ ಅರಮನೆಯಲ್ಲಿದ್ದು, ಡಿಸಿಎಂ ಅಶ್ವಥ್ ನಾರಾಯಣ ಅವರು ಅಲ್ಲಿಗೂ ಭೇಟಿ ನೀಡಿ‌ ನಮಸ್ಕರಿಸಿದರು. ರಾಜ ವಂಶಕ್ಕೆ ಸೇರಿದ 400 ಜನರು ಇಲ್ಲಿದ್ದು, ಕುಟುಂಬಸ್ಥರ ಜತೆ ಅಶ್ವಥ್ ನಾರಾಯಣ ಅವರು ಅನೌಪಚಾರಿಕ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ನನ್ನ ಜೀವನದಲ್ಲಿಯೇ ಇದೊಂದು ಅವಿಸ್ಮರಣೀಯ ದಿನ. ಸ್ವಾಮಿ ಅಯ್ಯಪ್ಪ ಅವರು ಆಡಿ ಬೆಳೆದ ಜಾಗವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿದೆ' ಎಂದರು.

ಕೇರಳ ಚುನಾವಣೆಯಲ್ಲಿ ಡಾ. ಅಶ್ವಥ್ ನಾರಾಯಣ ತಂತ್ರ!

ಕೇರಳ ಚುನಾವಣೆಯಲ್ಲಿ ಡಾ. ಅಶ್ವಥ್ ನಾರಾಯಣ ತಂತ್ರ!

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡುತ್ತಿದೆ. ಕೇರಳ ವಿಧಾನಸಭೆಯ 140 ಕ್ಷೇತ್ರಗಳಲ್ಲಿ 115 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಕೇರಳದಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ನಂತರ ಮೇ 1 ರಂದು ಮತ ಏಣಿಕೆ ನಡೆಯಲಿದೆ. ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಮಂಜೇಶ್ವರ ಮತ್ತು ಕೊನ್ನಿ ಎರಡೂ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮದಂ ಕ್ಷೇತ್ರದಲ್ಲಿ ಬಿಜೆಪಿ ಅಧ್ಯರ್ಥಿಯಾಗಿ ಸಿಕೆ ಪದ್ಮನಾಭನ್ ಸ್ಪರ್ಧೆ ಮಾಡುತ್ತಿದ್ದಾರೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಭರ್ಜರಿ ರಣತಂತ್ರ ರೂಪಿಸಿದೆ ಎಂಬ ಮಾಹಿತಿಯಿದೆ.

English summary
Kerala Elections: Karnataka DCM Dr. Ashwath Narayan Offers Irumudi to Sabarimala Ayyappa Swamy. Read More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X