• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಲ್ಲಿ 2 ಲಕ್ಷ ದಾಟಿದ ಕೊರೊನಾ ಸೋಂಕಿತರು: ಸೆಕ್ಷನ್ 144 ಜಾರಿ

|

ತಿರುವನಂತಪುರಂ, ಅಕ್ಟೋಬರ್ 02: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿರುವ ಕಾರಣ ಕಾರಣ ನಿಯಂತ್ರಿಸುವ ನಿಟ್ಟಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ಕೇರಳದದಲ್ಲಿ ಇದುವರೆಗೆ 771 ಮಂದಿ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 3 ರಿಂದ 144 ಸೆಕ್ಸನ್ ಜಾರಿಯಾಗಲಿದ್ದು ಅಕ್ಟೋಬರ್ 31ರವರೆಗೂ ಇರಲಿದೆ.

ಭಾರತದಲ್ಲಿ 63,94,069 ಕೊವಿಡ್-19 ಸೋಂಕಿತ ಪ್ರಕರಣ

ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ಹೊಸದಾಗಿ 8135 ಪ್ರಕರಣಗಳು ಪತ್ತೆಯಾಗಿವೆ. ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಅಕ್ಟೋಬರ್ 3 ರಬೆಳಗ್ಗೆ 9 ಗಂಟೆಯಿಂದ ಜಾರಿಯಾಗಲಿದೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಂಟೈನ್ಮೆಂಟ್‌ ಜೋನ್‌ಗಳಲ್ಲಿ ಸಾಕಷ್ಟು ನಿರ್ಬಂಧ ಹೇರಲಾಗಿದೆ. ಮದುವೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ಡಿಡಿಎಂಎಯಿಂದ ಅನುಮತಿ ಪಡೆಯಬೇಕು.

ಮದುವೆಯಲ್ಲಿ 50 ಮಂದಿ ಭಾಗವಹಿಸಬಹುದು, ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಒಟ್ಟು 2.43 ಲಕ್ಷ ಮಂದಿ ಮೇಲೆ ನಿಗಾ ಇಡಲಾಗಿದೆ. 72,339 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 771 ಮಂದಿ ಮೃತಪಟ್ಟಿದ್ದಾರೆ.

   ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada

   English summary
   As coronavirus cases continue to rise in Kerala, the Pinarayi Vijayan-led government has imposed Section 144 across the state to contain the pandemic. With 8,135 fresh COVID-19 cases, the southern state crossed the grim milestone of two lakh infections on October 1.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X