ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿದೆಯೇ, ಸರ್ಕಾರದ ತಜ್ಞರು ಹೇಳಿದ್ದೇನು?

|
Google Oneindia Kannada News

ತಿರುವನಂತಪುರಂ, ಜು.28: ದೇಶದ ಇತರ ಭಾಗಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ನೂರು, ಎರಡು ಅಂಕೆಗಳಲ್ಲಿ ವರದಿ ಮಾಡುತ್ತಿರುವಾಗ ಕೇರಳದಲ್ಲಿ ಪ್ರತಿದಿನ 10,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾಗುತ್ತಿದೆ. ದೇಶದಲ್ಲೇ ಮೊದಲ ಕೋವಿಡ್‌ ಪ್ರಕರಣ ಕೇರಳದಲ್ಲಿ ದಾಖಲಾಗಿದ್ದರೂ ಕೋವಿಡ್‌ ನಿರ್ವಹಣೆಯ ವಿಚಾರದಲ್ಲಿ ವಿಶ್ವದಲ್ಲೇ ಕೇರಳ ಶ್ಲಾಘಿಸಲ್ಪಟ್ಟಿದೆ.

ಆದರೆ ಈಗ ಕೋವಿಡ್‌ ಪಾಸಿಟಿವ್‌ ಪ್ರಕರಣಗಳಿಗೆ ಪ್ರತಿದಿನ ಶೇ.40 ರಷ್ಟು ಕೊಡುಗೆ ಈ ರಾಜ್ಯದ್ದೇ ಆಗಿದೆ. ಭಾನುವಾರ ಕೊನೆಗೊಂಡ ವಾರದಲ್ಲಿ, ಕೇರಳದಲ್ಲಿ 1,10,593 ಪ್ರಕರಣಗಳು ದಾಖಲಾಗಿದ್ದು, ಸರಾಸರಿ ಶೇಕಡ 11 ರಷ್ಟು ಸಕಾರಾತ್ಮಕತೆ ಇದೆ.

ಕೇರಳ ಕೋವಿಡ್‌ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?ಕೇರಳ ಕೋವಿಡ್‌ ಹೆಚ್ಚಳ 3 ನೇ ಅಲೆಯ ಸೂಚನೆಯೇ, ಅಧ್ಯಯನ ವರದಿ ಹೇಳಿದ್ದೇನು?

ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯವು ಸುಮಾರು 2.5 ಲಕ್ಷ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿ ಮುಖಂಡ ಎರಿಕ್ ಸ್ಟೀಫನ್ ತಿರುವನಂತಪುರಂನಲ್ಲಿ ಎಂಟು ದಿನಗಳ ಕಾಲ ಉಪವಾಸ ನಡೆಸಿದರು. ಆದರೆ ಪರೀಕ್ಷೆಯ ನಂತರ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದೆ ಎಂದು ವರದಿಯಾಗಿದೆ.

 ವಿದ್ಯಾರ್ಥಿಗಳಲ್ಲಿ ಕೋವಿಡ್‌

ವಿದ್ಯಾರ್ಥಿಗಳಲ್ಲಿ ಕೋವಿಡ್‌

"ಕೋವಿಡ್‌ ಪಾಸಿಟಿವ್‌ ದರವು ಹೆಚ್ಚಾಗಿದೆ ಮತ್ತು ಹೆಚ್ಚುತ್ತಿದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದೆ. ಇದಕ್ಕೆ ಮುಖ್ಯಮಂತ್ರಿಗಳ ನಿರ್ವಹಣೆಯನ್ನು ನಾನು ದೂಷಿಸುತ್ತೇನೆ," ಎಂದು ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ವಿರೋಧಿಸಿ ಉಪವಾಸ ನಡೆಸಿದ್ದ ವಿದ್ಯಾರ್ಥಿ ಹೇಳಿದ್ದಾರೆ. "ಎಲ್ಲವೂ ಸಾಮಾನ್ಯವೆಂದು ತೋರಿಸಲು ಸರ್ಕಾರ ಬಯಸುತ್ತಿದೆ. ಆದ್ದರಿಂದ ಆಫ್‌ಲೈನ್ ಪರೀಕ್ಷೆಗಳಿಗೆ ಒತ್ತಾಯಿಸುತ್ತಿದ್ದಾರೆ, ಆದರೆ ಪರಿಸ್ಥಿತಿ ಅದರಿಂದ ದೂರವಿದೆ," ಎಂದಿದ್ದಾರೆ.

 ಕೇರಳದಲ್ಲಿ ಅಧಿಕ 18 + ಜನರಿಗೆ ಕೋವಿಡ್‌ ಲಸಿಕೆ

ಕೇರಳದಲ್ಲಿ ಅಧಿಕ 18 + ಜನರಿಗೆ ಕೋವಿಡ್‌ ಲಸಿಕೆ

ರಾಜ್ಯವು ದೇಶದ ಇತರ ಭಾಗಗಳಿಗಿಂತ ಹೆಚ್ಚು ವೇಗವಾಗಿ ಲಸಿಕೆ ನೀಡುತ್ತಿದ್ದರೂ, ಅದರ ಸಿರೊ-ಪಾಸಿಟಿವಿಟಿ ಅಂಕಿ ಕಡಿಮೆ. ಕೇರಳದ 18 + ಜನಸಂಖ್ಯೆಯ ಶೇಕಡ 20.9 ರಷ್ಟು ಜನರು ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇಕಡಾ 9.9 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ನಾಲ್ಕನೇ ಐಸಿಎಂಆರ್ ಸಿರೊ-ಸಮೀಕ್ಷೆಯು ರಾಜ್ಯದ ಜನಸಂಖ್ಯೆಯ ಶೇಕಡ 42.7 ರಷ್ಟು ಮಾತ್ರ ಪ್ರತಿಕಾಯಗಳನ್ನು ಹೊಂದಿದೆ ಎಂದು ತೋರಿಸುತ್ತದೆ. ಆದರೆ ದೇಶದ ಸರಾಸರಿ 67.6 ಶೇಕಡದಷ್ಟಿದೆ.

ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ: ಕೇಂದ್ರಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ: ಕೇಂದ್ರ

 ಉತ್ತಮವಾಗಿ ಕೋವಿಡ್‌ ನಿಯಮ ಪಾಲಿಸುತ್ತಿರುವ ಜನರು

ಉತ್ತಮವಾಗಿ ಕೋವಿಡ್‌ ನಿಯಮ ಪಾಲಿಸುತ್ತಿರುವ ಜನರು

ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೊ ಎಂ ಜಾನ್ ಈ ಕೋವಿಡ್‌ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತಕ್ಕೆ ಹೋಲಿಸಿದರೆ ಕೇರಳದ ಇನ್ನೂ ಹೆಚ್ಚಿನ ಪ್ರಮಾಣದ ಜನರಲ್ಲಿ ಇನ್ನೂ ವೈರಸ್‌ ಕಾಣಿಸಿಕೊಂಡಿಲ್ಲ. ಹೆಚ್ಚಿನ ಜನಸಂಖ್ಯಾ ಸಾಂದ್ರತೆಯ ಹೊರತಾಗಿಯೂ ಇಲ್ಲಿನ ಜನರು ಮಾಸ್ಕ್‌ ಹಾಕುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಉತ್ತಮವಾಗಿ ಅನುಸರಿಸುತ್ತಿದ್ದಾರೆ. ಇದು ಕೋವಿಡ್‌ ಆಳವಾಗಿ ಹರಡದಿರಲು ಕಾರಣವಾಗಿದೆ," ಎಂದು ತಿಳಿಸಿದ್ದಾರೆ.

"ಕೋವಿಡ್‌ ಸಾಂಕ್ರಾಮಿಕ ರೋಗದ ವಿಚಾರದಲ್ಲಿ ನಾವು ಎಲ್ಲಿದ್ದೇವೆ ಎಂದು ತಿಳಿಯಲು ಬಹುಶಃ ಹೊಸ ಸಂಯೋಜಿತ ಸೂಚ್ಯಂಕವನ್ನು ನೋಡುವ ಸಮಯ ಇದಾಗಿದೆ," ಎಂದು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪ ಅಧೀಕ್ಷಕ ಡಾ.ಸಂತೋಷ್ ಕುಮಾರ್ ಹೇಳಿದ್ದಾರೆ.

 ಹೆಚ್ಚಿನ ಕೋವಿಡ್‌ ಸೋಂಕಿತರಿಗೆ ಮನೆಯಲ್ಲೇ ಆರೈಕೆ

ಹೆಚ್ಚಿನ ಕೋವಿಡ್‌ ಸೋಂಕಿತರಿಗೆ ಮನೆಯಲ್ಲೇ ಆರೈಕೆ

"ಕಳೆದ 6 ವಾರಗಳಿಂದ ಟಿಪಿಆರ್ 10-12ರ ನಡುವೆ ಇದೆ, ಪ್ರತಿದಿನ 10,000-15000 ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇದೆ. ಆದರೆ ಆಸ್ಪತ್ರೆಗೆ ದಾಖಲು ಪ್ರಮಾಣ ಇಳಿಕೆಯಾಗಿದೆ. ಉದಾಹರಣೆಗೆ, ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ 800-1000 ಕೋವಿಡ್‌ ಸೋಂಕಿತರು ಇರುತ್ತಿದ್ದರು. ಆದರೆ ಈಗ 250-300 ಕ್ಕೆ ಇಳಿದಿದೆ. ಇದು ಗಮನಾರ್ಹ ಇಳಿಕೆ," ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ "ಕೇರಳದಾದ್ಯಂತ ಶೇಕಡ 50 ಕ್ಕಿಂತ ಕಡಿಮೆ ಹಾಸಿಗೆಗಳು ಭರ್ತಿಯಾಗಿದೆ. ವೆಂಟಿಲೇಟರ್ 50 ಪ್ರತಿಶತ, ಐಸಿಯು ಸಹ 50 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಲಸಿಕೆ ಪರಿಣಾಮವು ನಮಗೆ ತೋರಿಸುತ್ತಿದೆ. ಆದ್ದರಿಂದ ಆಸ್ಪತ್ರೆಗಳಿಗಿಂತ ಹೆಚ್ಚಿನ ರೋಗಿಗಳು ನಿವಾಸ ಆರೈಕೆಯಲ್ಲಿದ್ದಾರೆ, '' ಎನ್ನುತ್ತಾರೆ ತಜ್ಞರು.

 ಇದು ಅನಿರೀಕ್ಷಿತವಲ್ಲ ಎಂದ ಆರೋಗ್ಯ ಸಚಿವೆ

ಇದು ಅನಿರೀಕ್ಷಿತವಲ್ಲ ಎಂದ ಆರೋಗ್ಯ ಸಚಿವೆ

"ರಾಜ್ಯ ವರದಿ ಮಾಡುತ್ತಿರುವ ಕೋವಿಡ್ ಸಂಖ್ಯೆಗಳು ಅನಿರೀಕ್ಷಿತವಲ್ಲ" ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. "ಮೊದಲ ಅಲೆಯಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ. ಈಗಲೂ ಹಾಗೆಯೇ ಆಗುತ್ತಿದೆ," ಎಂದು ಅಭಿಪ್ರಾಯಿಸಿದ್ದಾರೆ.

"ಎರಡನೇ ಕೋವಿಡ್‌ ಅಲೆಯು ಏಪ್ರಿಲ್ ಮಧ್ಯದಲ್ಲಿ ನಮ್ಮ ರಾಜ್ಯದಲ್ಲಿ ಪ್ರಾರಂಭವಾಯಿತು. ಮೇ 12 ರಂದು ನಾವು ಕೋವಿಡ್‌ ಗರಿಷ್ಠ ಮಟ್ಟವನ್ನು ಹೊಂದಿದ್ದೇವೆ. ಒಂದೇ ದಿನದಲ್ಲಿ ಸುಮಾರು 43,000 ಪ್ರಕರಣಗಳು ದಾಖಲಾದವು. ನಮ್ಮ ಕಾರ್ಯತಂತ್ರದ ಪ್ರಕಾರ ಈ ಏರಿಕೆ ನಿರೀಕ್ಷಿಸಲಾಗಿತ್ತು. ನಾವು ಎಂದಿಗೂ ಸಂಖ್ಯೆಯನ್ನು ಮರೆಮಾಚುವ ಯತ್ನ ಮಾಡುವುದಿಲ್ಲ. ನಾವು ಗರಿಷ್ಠ ಏರಿಕೆಯನ್ನು ತಡೆಯುವ ಪ್ರಯತ್ನ ಮಾಡಿದ್ದೇವೆ. ಈಗ ನಾವು ಕೋವಿಡ್‌ ಇಳಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ," ಎಂದು ಹೇಳಿದ್ದಾರೆ.

ಇದೇ ವೇಳೆ ಆರೋಗ್ಯ ಸಚಿವರು ಕೇರಳದಲ್ಲಿ ಹೆಚ್ಚಿನ ಜನಸಂಖ್ಯೆಯ ಸಾಂದ್ರತೆಯ ಬಗ್ಗೆ ಒತ್ತಿ ಹೇಳಿದರು. ಇಲ್ಲಿನ ಜನಸಂಖ್ಯೆಯ ಸಾಂದ್ರತೆಯು ರಾಷ್ಟ್ರೀಯ ಸರಾಸರಿಗಿಂತ ದ್ವಿಗುಣವಾಗಿದೆ. ಹಿರಿಯ ನಾಗರಿಕರು ಅಧಿಕ ಪ್ರಮಾಣದಲ್ಲಿ ಇದ್ದಾರೆ. ಹೆಚ್ಚಿನ ಜನರು ಮಧುಮೇಹ ಹೊಂದಿದ್ದಾರೆ. ಇಂತಹ ನಿರ್ದಿಷ್ಟ ಸವಾಲುಗಳನ್ನು ಬೊಟ್ಟು ಮಾಡಿದರು.

ಇನ್ನು ಕೋವಿಡ್‌ ಹೆಚ್ಚಿ ಪ್ರಸರಣವು ರೂಪಾಂತರಗಳಿಗೆ ಕಾರಣವಾಗಬಹುದು. ಆದ್ದರಿಂದ ಹೆಚ್ಚಿನ ಜೀನೋಮಿಕ್ ಕಣ್ಗಾವಲು ಅಗತ್ಯ ಎಂದು ತಜ್ಞರು ಹೇಳುತ್ತಾರೆ.

(ಒನ್‌ಇಂಡಿಯಾ ಸುದ್ದಿ)

English summary
Kerala Covid Situation Out Of Hand?, What Government Experts Say. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X