• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರ

|

ತಿರುವನಂತಪುರಂ, ಮೇ 31: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಕಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಕೇರಳ ಕಾಂಗ್ರೆಸ್ ಮುಖಂಡ ಎಪಿ ಅಬ್ದುಲ್ಲಾ ಕುಟ್ಟಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ.

ಅಬ್ದುಲ್ಲಾಕುಟ್ಟಿ ಅವರ ಹೇಳಿಕೆಯಿಂದ ಕೆಂಡಾಮಂಡಲವಾಗಿರುವ ಕಾಂಗ್ರೆಸ್, ಅವರಿಂದ ವಿವರಣೆ ಕೇಳಿದೆ. ಮಾಜಿ ಶಾಸಕರಾಗಿರುವ 52 ವರ್ಷದ ಅವರು, ತಮ್ಮ ಹೇಳಿಕೆಯಿಂದ ಕೇರಳ ಕಾಂಗ್ರೆಸ್ ಹಾಗೂ ಮುಸ್ಲಿಂ ಸಮುದಾಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಕೊಟ್ಟ ಮಾತಿನಂತೆ ಮೋದಿ ಇಟ್ಟ ಮೊದಲ ಹೆಜ್ಜೆ 'ಜಲ್ ಶಕ್ತಿ' ಸಚಿವಾಲಯ ಸೃಷ್ಟಿ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾವನ್ನು ಒಪ್ಪಿಕೊಂಡ ಜನರು ಅವರಿಗೆ ಈ ಭರ್ಜರಿ ಗೆಲುವು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದೇ ಅವರ ಯಶಸ್ಸಿನ ರಹಸ್ಯ ಎಂದು ಕೊಂಡಾಡಿದ್ದಾರೆ.

ಮನೆಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಯೋಜನೆಯನ್ನು ಕೂಡ ಪ್ರಶಂಸಿಸಿದ್ದಾರೆ.

ಶಿಶುವಿಗೆ ಮೋದಿ ಹೆಸರಿಟ್ಟು, ಈಗ ಹೆಸರು ಬದಲಿಸಿದ ಮುಸ್ಲಿಂ ಕುಟುಂಬ!

ಬಿಪಿಎಲ್ ಕುಟುಂಬಗಳಲ್ಲಿನ ಮಹಿಳೆಯರಿಗೆ 50 ಮಿಲಿಯನ್ ಎಲ್‌ಪಿಜಿ ಸಂಪರ್ಕ ಒದಗಿಸುವ ಸರ್ಕಾರದ ಗುರಿಯಾದ ಉಜ್ವಲಾ ಯೋಜನಾ ಬಗ್ಗೆಯೂ ಅವರು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಗಾಂಧಿ ಮೌಲ್ಯ ಪಾಲಿಸುತ್ತಿದ್ದಾರೆ

ಗಾಂಧಿ ಮೌಲ್ಯ ಪಾಲಿಸುತ್ತಿದ್ದಾರೆ

'ಮೋದಿ ಅವರು ಇಷ್ಟು ಜನಪ್ರಿಯರಾಗಲು ಪ್ರಮುಖ ಕಾರಣವೇನೆಂದರೆ ಅವರು ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು. ಒಂದು ನೀತಿಯನ್ನು ರಚಿಸುವ ಮುನ್ನ ತಾನು ಭೇಟಿ ಮಾಡಿದ ಅತಿ ಕಡುಬಡವನ ಮುಖವನ್ನು ಜ್ಞಾಪಿಸಿಕೊಳ್ಳಿ ಎಂದು ಗಾಂಧಿ ಅವರು ಒಮ್ಮೆ ನೀತಿ ರೂಪಕರಿಗೆ ಹೇಳಿದ್ದರು. ಮೋದಿ ಅದನ್ನು ಪಾಲಿಸುತ್ತಿದ್ದಾರೆ' ಎಂದು ಅಬ್ದುಲ್‌ಕುಟ್ಟಿ ಅವರು ಮಂಗಳವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಮಲಯಾಳಂನಲ್ಲಿ ಬರೆದುಕೊಂಡಿದ್ದಾರೆ.

ಗೆಲುವನ್ನು ವಿಶ್ಲೇಷಿಸಬೇಕು

ಗೆಲುವನ್ನು ವಿಶ್ಲೇಷಿಸಬೇಕು

ಅವರ ದಿಗ್ವಿಜಯವು ಬಿಜೆಪಿಯಲ್ಲಿನ ಅನೇಕರನ್ನು ಕೂಡ ಅಚ್ಚರಿಗೊಳಿಸಿದೆ. ಎಲ್ಲ ಭಾವನಾತ್ಮಕ ಸಂಗತಿಗಳನ್ನು ಬದಿಗಿಟ್ಟು ಈ ಗೆಲುವನ್ನು ವಿಶ್ಲೇಷಿಸಬೇಕಿದೆ. ನಾವು ಕೇರಳ ಗಡಿಯನ್ನು ದಾಟಿದ ಕೂಡಲೇ ಜನರು ತೋರುತ್ತಿದ್ದ ವರ್ತನೆ ಭಯಾನಕವಾಗಿತ್ತು. ಆದರೆ, ಮೋದಿ ಅವರು ಅದಕ್ಕೆ ಒಂದುಮಟ್ಟದಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಶೇ 37ರಷ್ಟು ಸೀಟುಗಳನ್ನು ಬಾಚಿಕೊಂಡ ಬಿಜೆಪಿ

ಈ ವಾಸ್ತವಗಳನ್ನು ನೆನಪಿಟ್ಟುಕೊಳ್ಳಿ

ಈ ವಾಸ್ತವಗಳನ್ನು ನೆನಪಿಟ್ಟುಕೊಳ್ಳಿ

ನಮ್ಮ ದೇಶ ಬದಲಾಗುತ್ತಿದೆ. ಗೆಲುವುಗಳು ಈಗ ಅಭಿವೃದ್ಧಿಯನ್ನು ಹಿಂಬಾಲಿಸುತ್ತಿವೆ. ನರೇಂದ್ರ ಮೋದಿ ಅವರನ್ನು ಟೀಕಿಸುವ ಮುನ್ನ ಈ ವಾಸ್ತವಗಳನ್ನು ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.

ತಮ್ಮ ಪೋಸ್ಟ್‌ಗೆ ಕಾಂಗ್ರೆಸ್‌ನ ಇತರೆ ಮುಖಂಡರು ಟೀಕೆ ವ್ಯಕ್ತಪಡಿಸಿದ ಬಳಿಕ ಅಬ್ದುಲ್ಲಾಕುಟ್ಟಿ ಅವರು ತಮ್ಮ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾದ ಸೃಷ್ಟಿಸುವ ಅಗತ್ಯವಿಲ್ಲ

ವಿವಾದ ಸೃಷ್ಟಿಸುವ ಅಗತ್ಯವಿಲ್ಲ

ಇಡೀ ದೇಶ ಮೋದಿ ಅವರ ಗೆಲುವಿನ ಕುರಿತು ಚರ್ಚಿಸುತ್ತಿದೆ. ನಾನು ನನ್ನ ಅಭಿಪ್ರಾಯವನ್ನಷ್ಟೇ ಹಂಚಿಕೊಂಡಿದ್ದೇನೆ. ಇದರಲ್ಲಿ ಯಾವುದೇ ವಿವಾದ ಸೃಷ್ಟಿಸುವ ಅಗತ್ಯವಿಲ್ಲ ಎಂದು ಅವರು ಕಾಸರಗೋಡಿನಲ್ಲಿ ಸುದ್ದಗಾರರಿಗೆ ಸ್ಪಷ್ಟನೆ ನೀಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala Congress leader AP Abdullakutty praises PM Narendra Modi as he is has imbibed Gandhian Values.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more