ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯನ್ನು ಹೊಗಳಿದ್ದ ನಾಯಕನಿಗೆ ಕಾಂಗ್ರೆಸ್‌ ಗೇಟ್‌ಪಾಸ್

|
Google Oneindia Kannada News

ತಿರುವನಂತಪುರಂ, ಜೂನ್ 5: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟುಮಾಡಿದ್ದ ಕೇರಳ ಕಾಂಗ್ರೆಸ್ ಮುಖಂಡ ಎಪಿ ಅಬ್ದುಲ್ಲಾಕುಟ್ಟಿ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಪಕ್ಷದಿಂದ ಉಚ್ಚಾಟಿಸಿದೆ.

ಅಶಿಸ್ತಿನ ಕಾರಣಕ್ಕೆ ಅವರನ್ನು ತೆಗೆದುಹಾಕುತ್ತಿರುವುದಾಗಿ ಪಕ್ಷ ತಿಳಿಸಿದೆ. ಫೇಸ್‌ಬುಕ್ ಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಬರೆದಿದ್ದರು. ಇದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಗಾಂಧೀಜಿ ಅವರ ಮೌಲ್ಯಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡ ಕಾರಣದಿಂದಲೇ ಪ್ರಧಾನಿ ಮೋದಿ ಅವರು ಬಹು ಜನಪ್ರಿಯರಾಗಿದ್ದಾರೆ ಎಂದು ಅಬ್ದುಲ್ಲಾಕುಟ್ಟಿ ಬರೆದಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು.

ಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರ ಗಾಂಧಿ ಮೌಲ್ಯ ಪಾಲಿಸುವ ಮೋದಿ: ಮುಸ್ಲಿಂ ಮುಖಂಡನ ಶ್ಲಾಘನೆಯಿಂದ 'ಕೈ'ಗೆ ಮುಜುಗರ

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಅಜೆಂಡಾವನ್ನು ಒಪ್ಪಿಕೊಂಡ ಜನರು ಅವರಿಗೆ ಈ ಭರ್ಜರಿ ಗೆಲುವು ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದೇ ಅವರ ಯಶಸ್ಸಿನ ರಹಸ್ಯ. ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಯೋಜನೆ ಮನೆಮನೆಗಳಲ್ಲಿ ಹಾಗೂ ಸಮುದಾಯಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದರು.

ಶಿಸ್ತಿಗೆ ವಿರುದ್ಧ ಹೇಳಿಕೆ

ಶಿಸ್ತಿಗೆ ವಿರುದ್ಧ ಹೇಳಿಕೆ

'ಅವರಿಂದ ವಿವರಣೆ ಕೇಳಿ ನೋಟಿಸ್ ನೀಡಿದ್ದೆವು. ಆದರೆ, ಅವರು ತಮ್ಮ ಹೇಳಿಕೆಗೆ ಅಂಟಿಕೊಂಡಿದ್ದರು. ಹಾಸ್ಯಾಸ್ಪದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರ ಹೇಳಿಕೆಯು ಪಕ್ಷದ ನಿಲುವು ಮತ್ತು ಶಿಸ್ತಿಗೆ ವಿರುದ್ಧವಾಗಿತ್ತು. ಅದನ್ನು ಸಹಿಸುಕೊಳ್ಳಲು ಸಾಧ್ಯವಿರಲಿಲ್ಲ' ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿಶುವಿಗೆ ಮೋದಿ ಹೆಸರಿಟ್ಟು, ಈಗ ಹೆಸರು ಬದಲಿಸಿದ ಮುಸ್ಲಿಂ ಕುಟುಂಬ! ಶಿಶುವಿಗೆ ಮೋದಿ ಹೆಸರಿಟ್ಟು, ಈಗ ಹೆಸರು ಬದಲಿಸಿದ ಮುಸ್ಲಿಂ ಕುಟುಂಬ!

'ವಂಡರ್ ಕಿಡ್' ಅಬ್ದುಲ್ಲಾ

'ವಂಡರ್ ಕಿಡ್' ಅಬ್ದುಲ್ಲಾ

ಎಪಿ ಅಬ್ದುಲ್ಲಾಕುಟ್ಟಿ ಅವರನ್ನು 'ಅದ್ಭುತಕುಟ್ಟಿ' (ಅದ್ಭುತ ಮಗು) ಎಂದು ಕರೆಯಲಾಗುತ್ತದೆ. ಕಾಂಗ್ರೆಸ್‌ನ ಪ್ರಭಾವಶಾಲಿ ನಾಯಕ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರನ್ನು 1999ರಲ್ಲಿ ಕಣ್ಣೂರು ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ ಅಚ್ಚರಿ ಮೂಡಿಸಿದ್ದರು. 2004ರ ಚುನಾವಣೆಯಲ್ಲಿಯೂ ಇದೇ ಸಾಧನೆಯನ್ನು ಪುನರಾವರ್ತಿಸಿದ್ದರು. ಆಗ ಅಬ್ದುಲ್ಲಾಕುಟ್ಟಿ ಅವರು ಸಿಪಿಎಂನಲ್ಲಿದ್ದರು. ಕಣ್ಣೂರು ಲೋಕಸಭೆ ಕ್ಷೇತ್ರದಿಂದ ರಾಮಚಂದ್ರನ್ ಅವರು 1984, 1989, 1991, 1996 ,ಮತ್ತು 1998ರಲ್ಲಿ ಸತತ ಗೆಲುವು ಕಂಡಿದ್ದರು. ಈ ಎರಡು ಸೋಲಿನ ಬಳಿಕ ಅವರು ಮತ್ತೆ ಕಣ್ಣೂರಿನಿಂದ ಸ್ಪರ್ಧಿಸಲಿಲ್ಲ. 2009 ಮತ್ತು 2014ರಲ್ಲಿ ಅವರು ನೆರೆಯ ವಡಕರ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

ಬಿಜೆಪಿಗೆ ಸೇರುತ್ತಾರಾ ಅಬ್ದುಲ್ಲಾಕುಟ್ಟಿ?

ಬಿಜೆಪಿಗೆ ಸೇರುತ್ತಾರಾ ಅಬ್ದುಲ್ಲಾಕುಟ್ಟಿ?

ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿರುವ ಅಬ್ದುಲ್ಲಾ ಕುಟ್ಟಿ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಅವರಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ಈಗ ಕೇರಳ ಉಪ ಚುನಾವಣೆಯಲ್ಲಿ ಮಂಜೇಶ್ವರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖವಾಣಿ ಪತ್ರಿಕೆ ವೀಕ್ಷಣಂ ತನ್ನ ಸಂಪಾದಕೀಯದಲ್ಲಿ ಹೇಳಿದೆ. 2009ರಲ್ಲಿ ಕಾಂಗ್ರೆಸ್ ಸೇರಿದ್ದ ಸಂದರ್ಭದಲ್ಲಿ ಅಬ್ದುಲ್ಲಾಕುಟ್ಟಿ ಕಣ್ಣೂರು ಕ್ಷೇತ್ರದ ಸಂಸದರಾಗಿದ್ದರು.

ಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಶೇ 37ರಷ್ಟು ಸೀಟುಗಳನ್ನು ಬಾಚಿಕೊಂಡ ಬಿಜೆಪಿಮುಸ್ಲಿಮರು ಹೆಚ್ಚಿರುವ ಕ್ಷೇತ್ರಗಳಲ್ಲಿ ಶೇ 37ರಷ್ಟು ಸೀಟುಗಳನ್ನು ಬಾಚಿಕೊಂಡ ಬಿಜೆಪಿ

ಹಿಂದೆಯೂ ಮೋದಿಯನ್ನು ಶ್ಲಾಘಿಸಿದ್ದರು

ಹಿಂದೆಯೂ ಮೋದಿಯನ್ನು ಶ್ಲಾಘಿಸಿದ್ದರು

ಅಂದಹಾಗೆ, ಅಬ್ದುಲ್ಲಾಕುಟ್ಟಿ ಅವರು ನರೇಂದ್ರ ಮೋದಿ ಅವರನ್ನು ಕೊಂಡಾಡಿರುವುದು ಇದು ಮೊದಲ ಸಲವೇನಲ್ಲ. ಕಣ್ಣೂರು ಸಂಸದರಾಗಿದ್ದ ಸಂದರ್ಭದಲ್ಲಿ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದರು. ದೇವಸ್ಥಾನಗಳನ್ನು ಒಡೆದು ಮೋದಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ರಾಜ್ಯದಲ್ಲಿ ಅದರ ವಿರುದ್ಧ ಯಾವುದೇ ಹರತಾಳ ಅಥವಾ ಬಂದ್ ನಡೆದಿಲ್ಲ. ಕೇರಳವು ಹೂಡಿಕೆ ಸ್ನೇಹಿ ಗುಜರಾತ್‌ನಿಂದ ಕಲಿಯಬೇಕು ಎಂದು ಹೇಳಿದ್ದರು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಸಿಪಿಎಂ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡು ಪಕ್ಷದಿಂದ ಅಮಾನತು ಮಾಡಿತ್ತು. ಆದರೆ, ಇದರಿಂದ ಸಿಟ್ಟಿಗೆದ್ದ ಅಬ್ದುಲ್ಲಾಕುಟ್ಟಿ ಪಕ್ಷದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದಿದ್ದರು. ಬಳಿಕ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಹೀಗಾಗಿ ಅವರು ಕಾಂಗ್ರೆಸ್ ಸೇರಿಕೊಂಡಿದ್ದರು.

ಲೈಂಗಿಕ ಕಿರುಕುಳ ಪ್ರಕರಣ

ಲೈಂಗಿಕ ಕಿರುಕುಳ ಪ್ರಕರಣ

2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಣ್ಣೂರು ವಿಧಾನಸಭೆ ಕ್ಷೇತ್ರದಲ್ಲಿ ಸಿಪಿಎಂನ ಪ್ರಮುಖ ಮುಖಂಡ ಎಂವಿ ಜಯರಾಜನ್ ಅವರನ್ನು 12,000 ಮತಗಳಿಂದ ಸೋಲಿಸಿದರು. 2011ರ ವಿಧಾನಸಭೆ ಚುನಾವಣೆಯಲ್ಲಿ ಪುನಃ ಇಲ್ಲಿ ಜಯಗಳಿಸಿದರು. ಮೂರು ವರ್ಷದ ಬಳಿಕ ಅವರು ರಾಜ್ಯ ಕಂಡ ಅತಿ ದೊಡ್ಡ ವಿವಾದದೊಳಗೆ ಸಿಲುಕಿದರು. 2014ರಲ್ಲಿ ಕಾಂಗ್ರೆಸ್ ನೇತೃತ್ವದ ಊಮ್ಮನ್ ಚಾಂಡಿ ಸರ್ಕಾರವನ್ನು ಅಲುಗಾಡಿಸಿದ್ದು ಸೋಲಾರ್ ಹಗರಣ. ಅದರಲ್ಲಿ ಪ್ರಮುಖ ಆರೋಪಿಯಾಗಿದ್ದ ಸರಿತಾ ನಾಯರ್ ಅವರು ಅಬ್ದುಲ್ಲಾಕುಟ್ಟಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದರು. ಅವರ ವಿರುದ್ಧ ಪ್ರಕರಣ ಕೂಡ ದಾಖಲಾಯಿತು. ಸರಿತಾ ನಾಯರ್ ಇತರೆ ಕಾಂಗ್ರೆಸ್ ನಾಯಕರ ಮೇಲೆಯೂ ಆರೋಪ ಮಾಡಿದ್ದರು. ಅಬ್ದುಲ್ಲಾಕುಟ್ಟಿ ತಡರಾತ್ರಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಹೋಟೆಲ್‌ಗೆ ಬರುವಂತೆ ಕರೆದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

ಮೊದಲ ಬಾರಿಗೆ ಸೋಲು

ಮೊದಲ ಬಾರಿಗೆ ಸೋಲು

ಅಬ್ದುಲ್ಲಾಕುಟ್ಟಿ ವಿರುದ್ಧ ಗಂಭೀರ ಆರೋಪಗಳಿದ್ದರೂ ಕಾಂಗ್ರೆಸ್ ಅವರಿಗೆ 2016ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಟಿಕೆಟ್ ನೀಡಿತು. ರಾಜಕೀಯ ಬದುಕಿನಲ್ಲಿ ಮೊದಲ ಬಾರಿಗೆ ಅಬ್ದುಲ್ಲಾಕುಟ್ಟಿ ಸೋಲು ಅನುಭವಿಸಿದರು. 1999ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದ ಅವರು, ಸೋಲಿನ ಬಳಿಕ ವಕೀಲಿಕಿ ಆರಂಭಿಸಿದರು. 2019ರ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ವಿರುದ್ಧದ ಅವರ ಅಸಮಾಧಾನ ಸ್ಫೋಟಗೊಂಡಿತು. ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ತಮಗೆ ಟಿಕೆಟ್ ನೀಡದ್ದಕ್ಕೆ ಕೇರಳ ಕಾಂಗ್ರೆಸ್ ಅಧ್ಯಕ್ಷ ವಿಎಂ ಸುಧೀರನ್ ಅವರನ್ನು ಫೇಸ್‌ ಬುಕ್‌ನಲ್ಲಿ ಟೀಕಿಸಿದ್ದರು. ಈಗ ಮೋದಿ ಅವರನ್ನು ಹೊಗಳಿ ಕಾಂಗ್ರೆಸ್‌ನಿಂದಲೂ ಉಚ್ಚಾಟನೆಗೊಂಡಿರುವ ಅವರು, ಸಿಪಿಎಂ ವಿಚಾರದಲ್ಲಿ ಮಾಡಿದಂತೆಯೇ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ಬಗ್ಗೆ ಹೇಳಿದ್ದೇನು?

'ಮೋದಿ ಅವರು ಇಷ್ಟು ಜನಪ್ರಿಯರಾಗಲು ಪ್ರಮುಖ ಕಾರಣವೇನೆಂದರೆ ಅವರು ಗಾಂಧಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು. ಒಂದು ನೀತಿಯನ್ನು ರಚಿಸುವ ಮುನ್ನ ತಾನು ಭೇಟಿ ಮಾಡಿದ ಅತಿ ಕಡುಬಡವನ ಮುಖವನ್ನು ಜ್ಞಾಪಿಸಿಕೊಳ್ಳಿ ಎಂದು ಗಾಂಧಿ ಅವರು ಒಮ್ಮೆ ನೀತಿ ರೂಪಕರಿಗೆ ಹೇಳಿದ್ದರು. ಮೋದಿ ಅದನ್ನು ಪಾಲಿಸುತ್ತಿದ್ದಾರೆ. ಅವರ ದಿಗ್ವಿಜಯವು ಬಿಜೆಪಿಯಲ್ಲಿನ ಅನೇಕರನ್ನು ಕೂಡ ಅಚ್ಚರಿಗೊಳಿಸಿದೆ. ಎಲ್ಲ ಭಾವನಾತ್ಮಕ ಸಂಗತಿಗಳನ್ನು ಬದಿಗಿಟ್ಟು ಈ ಗೆಲುವನ್ನು ವಿಶ್ಲೇಷಿಸಬೇಕಿದೆ. ನಮ್ಮ ದೇಶ ಬದಲಾಗುತ್ತಿದೆ. ಗೆಲುವುಗಳು ಈಗ ಅಭಿವೃದ್ಧಿಯನ್ನು ಹಿಂಬಾಲಿಸುತ್ತಿವೆ. ನರೇಂದ್ರ ಮೋದಿ ಅವರನ್ನು ಟೀಕಿಸುವ ಮುನ್ನ ಈ ವಾಸ್ತವಗಳನ್ನು ನೆನಪಿಟ್ಟುಕೊಳ್ಳಬೇಕು' ಎಂದು ಅಬ್ದುಲ್ಲಾಕುಟ್ಟಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

English summary
Kerala state Congress has expelled AP Abdullakutty, who praised PM Narendra Modi in his facebook post from the party on charges of indiscipline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X